Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಮನ್ ವೆಲ್ತ್ ಕ್ರೀಡಾಕೂಟ : ಮಹಿಳೆಯರ ವೇಟ್ ಲಿಫ್ಟಿಂಗ್ ನಲ್ಲಿ ಮೀರಾಬಾಯಿ ಚಾನುಗೆ ಚಿನ್ನದ ಪದಕ

---Advertisement---

ಗ್ಲಾಸ್ಗೋ : ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಖ್ಯಾತ ವೇಟ್ಲಿಫ್ಟರ್ ಮೀರಾಬಾಯಿ ಚಾನು ಮತ್ತೊಮ್ಮೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಅಪಾರ ಸಾಹಸಮಯ ಪ್ರದರ್ಶನ ನೀಡಿದ ಅವರು, ಭಾರತಕ್ಕೆ ಈ ಬಾರಿಯ ಕೂಟದ ಪ್ರಥಮ ಚಿನ್ನದ ಪದಕವನ್ನು ತಂದುಕೊಡುವ ಮೂಲಕ ಶುಭಾರಂಭ ತಂದಿತ್ತಿದ್ದಾರೆ.

ಈ ಗೆಲುವಿನೊಂದಿಗೆ ಅವರು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸತತ ಮೂರನೇ ಬಾರಿಗೆ ಚಿನ್ನದ ಪದಕ ಮುತ್ತಿಕ್ಕಿದ ಅಪರೂಪದ ಹ್ಯಾಟ್ರಿಕ್ ದಾಖಲೆಗೆ ಪಾತ್ರರಾಗಿದ್ದಾರೆ.

ಜುಲೈ 26ರಂದು ನಡೆದ ರೋಚಕ ಸ್ಪರ್ಧೆಯಲ್ಲಿ ಚಾನು ತಮ್ಮದೇ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡಿದರು. ಸ್ನ್ಯಾಚ್ ವಿಭಾಗದಲ್ಲಿ 85 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 105 ಕೆಜಿ ಭಾರ ಎತ್ತುವ ಮೂಲಕ ಒಟ್ಟು 190 ಕೆಜಿ ಎತ್ತಿ ಅಗ್ರಸ್ಥಾನ ಪಡೆದರು. ಆರಂಭಿಕ ಯತ್ನದಲ್ಲಿ ಸಣ್ಣ ಹಿನ್ನಡೆ ಅನುಭವಿಸಿದರೂ, ತಕ್ಷಣವೇ ಚೇತರಿಸಿಕೊಂಡು ಎರಡನೇ ಹಾಗೂ ಮೂರನೇ ಪ್ರಯತ್ನಗಳಲ್ಲಿ ಕ್ರೀಡಾಕೂಟ ಮತ್ತು ಕಾಮನ್ವೆಲ್ತ್ ನೂತನ ದಾಖಲೆಗಳನ್ನು ಬರೆದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಈ ಪಟುಗಳ ಕಠಿಣ ಸ್ಪರ್ಧೆಯಲ್ಲಿ ನೈಜೀರಿಯಾದ ರುತ್ ನ್ಯೊಂಗ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರೆ, ಮಲೇಷ್ಯಾದ ಐರೀನ್ ಹೆನ್ರಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ರಂಗಪ್ರವೇಶ ಮಾಡಿದ ಕ್ಷಣದಿಂದಲೇ ಇತರ 10 ಸ್ಪರ್ಧಿಗಳಿಗಿಂತ ವಿಭಿನ್ನ ಹಾಗೂ ದೈತ್ಯ ಪ್ರದರ್ಶನ ತೋರಿದ ಮೀರಾಬಾಯಿ, ಸ್ಪರ್ಧೆಯುದ್ದಕ್ಕೂ ತಮ್ಮ ಪೂರ್ಣ ಪ್ರಾಬಲ್ಯ ಮೆರೆದರು.

ಮೀರಾಬಾಯಿ ಅವರ ಕಾಮನ್ವೆಲ್ತ್ ಕ್ರೀಡಾ ಪಯಣಕ್ಕೂ ಗ್ಲಾಸ್ಗೋ ನಗರಕ್ಕೂ ವಿಶೇಷ ಸಂಬಂಧವಿದೆ. 2014ರಲ್ಲಿ ಇದೇ ಗ್ಲಾಸ್ಗೋದಲ್ಲಿ ಅವರು ತಮ್ಮ ಚೊಚ್ಚಲ ಬೆಳ್ಳಿ ಪದಕ ಗೆದ್ದಿದ್ದರು. ತದನಂತರ 2018ರ ಗೋಲ್ಡ್ ಕೋಸ್ಟ್ ಹಾಗೂ 2022ರ ಬರ್ಮಿಂಗ್ಹ್ಯಾಮ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಜಯಿಸಿ ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದರು. ಟೋಕಿಯೊ ಒಲಿಂಪಿಕ್ಸ್ನಲ್ಲೂ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಚಾನು, ಇದೀಗ ಮತ್ತೆ ಅದೇ ಗ್ಲಾಸ್ಗೋ ಮಣ್ಣಿನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕದೊಂದಿಗೆ ಭಾರತದ ಕೀರ್ತಿಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.

Join WhatsApp

Join Now

Join Telegram

Join Now