Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಶ್ ನಿರ್ಮಾಣದ ರಾಮಾಯಣ ಟೀಸರ್ ರಿಲೀಸ್ : ರಾಕಿಂಗ್ ಸ್ಟಾರ್ ರಾವಣನಾಗಿ ಕಂಡಿದ್ದೇಗೆ..?

---Advertisement---

ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಕರ್ನಾಟಕದಲ್ಲಿ ಮಾತ್ರವಲ್ಲ. ಹೈದ್ರಾಬಾದ್, ಮುಂಬೈ ಅವರು ಹೋದಲ್ಲಿ ಬಂದಲ್ಲಿ ಅಭಿಮಾನಿ ಬಳಗವಿದೆ. ಅವರ ಜೊತೆಗೆ ಒಂದು ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಅವರ ಒಂದು ಸಿನಿಮಾಗಾಗಿ ಕಾಯ್ತಾ ಇರ್ತಾರೆ. ಅದರಲ್ಲೂ ರಾಮಾಯಣ ಸಿನಿಮಾದ ಮೇಲೆ ಅವರ ಅಭಿಮಾನಿಗಳು ಇನ್ನಿಲ್ಲದ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಇಂದು ಅದರ ಟೀಸರ್ ರಿಲೀಸ್ ಆಗಿದ್ದು, ಯಶ್ ಅವತಾರ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಸಿನಿಮಾ ಎರಡು ಭಾಗವಾಗಿ ಬರ್ತಾ ಇದೆ. ಈಗಾಗಲೇ ಮೊದಲ ಭಾಗದ ಶೂಟಂಗ್ ಕಂಪ್ಲೀಟ್ ಆಗಿದ್ದು, ಎರಡನೇ ಭಾಗದ ಶೂಟಿಂಗ್ ಇನ್ನೇನು ಆರಂಭವಾಗಲಿದೆ. ಸದ್ಯ ಟೈಟಲ್ ಟೀಸರ್ ಬಿಟ್ಟಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಬ್ರಹ್ಮಾಂಡ ಸೃಷ್ಡಿಯಾದ ಸಮಯದಿಂದ ತ್ರಿಮೂರ್ತಿಗಳು ಬ್ರಹ್ಮಾಂಡವನ್ನು ರಕಗಷಿಸುತ್ತಿದ್ದಾರೆ. ಬ್ರಹ್ಮ ಸೃಷ್ಟಿಕರ್ತನಾಗಿ, ವಿಷ್ಣು ಸಂರಕ್ಷಕನಾಗಿ, ಶಿವ ವಿನಾಶಕನಾಗಿ ಆದರೆ ತ್ರಿಮೂರ್ತಿಗಳಿಂದಾದ ಸೃಷ್ಟಿಯೇ ಬ್ರಹ್ಮಾಂಡವನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಹೊರಟಾಗ ಎಲ್ಲಾ ಯುದ್ಧಗಳಿಗೆ ಅಂತ್ಯ ಹಾಡುವಂತಹ ಮಹಾ ಯುದ್ಧ ಪ್ರಾರಂಭವಾಯಿತು.

2.5 ಶತಕೋಟಿ ಜನರು 5000 ವರ್ಷಗಳಿಂದ ಆರಾಧಿಸುತ್ತಿರುವ ರಾಮ-ರಾವಣರ ಅಮರಕತೆ. ರಾವಣ ಶಕ್ತಿ ಮತ್ತು ಪ್ರತೀಕಾರ. ರಾಮ ಧರ್ಮ ಮತ್ತು ತ್ಯಾವ ಎನ್ನುತಚತಾ ಟೀಸರ್ ನಲ್ಲಿ ಪಾತ್ರ ಪರಿಚಯ ಮಾಡಿಕೊಡಲಾಗಿದೆ. ರಾಕಿಂಗ್ ಸ್ಟಾರ್ ಯಶ್ ನಟಿಸಿ, ನಿರ್ಮಾಣ ಮಾಡಿರುವ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಂಡರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ರಾವಣ ಪಾತ್ರದಲ್ಲಿ ಯಶ್ ಅಬ್ಬರಿಸಿದ್ದಾರೆ. ಈ ಸಿನಿಮಾಗಾಗಿ ಇಡೀ ಅಭಿಮಾನಿ ಬಳಗ ಕಾಯ್ತಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment