ಹಾಸನ: ಹಾಸನದಲ್ಲಿರುವ ಯಶ್ ತಾಯಿ ಮನೆ ಪಕ್ಕ ಬೇರೆಯವರ ಜಾಗವನ್ನ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಮತ್ತು ಶೌಚಾಲಯ ಸೇರಿದಂತೆ ಬೇಸಿಕ್ ಸೌಲಭ್ಯವನ್ನ ಮಾಡಿಕೊಂಡಿದ್ದರು. ಆದರೆ ಕೋರ್ಟ್ ಮೆಟ್ಟಿಲೇರಿದ್ದ ಜಮೀನಿಗೆ ಸಂಬಂಧ ಪಟ್ಟವರು, ಅದನ್ನೆಲ್ಲಾ ಹೊಡೆದು ಹಾಕಿ, ತಂತಿ ಬೇಲಿ ಹಾಕಿಕೊಂಡಿದ್ದಾರೆ. ಅವರ ಮನೆ ಕಡೆಗೆ ಎಡಭಾಗದಿಂದ ಬರುವುದಕ್ಕೆ ಸಾಧ್ಯವಾಗದಂತೆ ಬಿಗಿ ಮಾಡಿಕೊಂಡಿದ್ದಾರೆ. ಇದೀಗ ಪುಷ್ಪ ಕೂಡ ಹಾಸನದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಹೀಗಾಗಿ ಹಾಸನದ ಪೊಲೀಸ್ ಠಾಣೆಗೆ ಪುಷ್ಪ ಭೇಟಿ ನೀಡಿದ್ದು, ಸಮಸ್ಯೆ ಬಗ್ಗೆ ಪೊಲೀಸರ ಜೊತೆಗೆ ಮಾತನ್ನಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೂ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ರಾತ್ರಿ ಸಮಯದಲ್ಲಿ ಬಂದು ಯಾರ್ಯಾರೋ ಗಲಾಟೆ ಮಾಡ್ತಾ ಇದ್ದರು. ಪಕ್ಕದಲ್ಲಿ ನಮ್ಮ ದೊಡ್ಡ ಮನೆ ಇರುವುದರಿಂದ ಏಕಾಏಕಿ ಬಂದು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೇಪರ್ ಇದೆ. ಅದನ್ನ ಕೋರ್ಟ್ ನೋಡುತ್ತೆ. ನಮ್ಮ ಅಕ್ಕನ ಮಗ, ಡ್ರೈವರ್ ಎಲ್ಲಾ ಇರ್ತಾರೆ ನೈಟ್ ನಲ್ಲಿ ಬಂದು ಮನೇಲಿ ಗಲಾಟೆ ಮಾಡ್ತಾರೆ ಅಂತ ದೂರು ನೀಡೋದಕ್ಕೆ ಬಂದಿದ್ದೆ. ಅದನ್ನ ಸಾಹೇಬ್ರು ತಗೊಂಡಿದ್ದಾರೆ, ಎಲ್ಲಾ ನಾನು ಮಾಡಿಕೊಡ್ತೀನಿ ಅಂತಾನು ಹೇಳಿದ್ದಾರೆ. ಉಳಿದದ್ದು ನಮ್ಮ ವಕೀಲರಾದ ಸಂಜಯ್ ನೋಡಿಕೊಳ್ಳುತ್ತಾರೆ. ಕೋರ್ಟ್ ನಲ್ಲಿ ಏನಾಗುತ್ತೆ, ನಮ್ಮದು ತಪ್ಪಾ, ಅವರದ್ದೇ ತಪ್ಪಿದೆಯಾ ಎಂಬುದೆಲ್ಲಾ ತಿಳಿದುಕೊಂಡ ಮೇಲೆ ಪ್ರೆಸ್ ಮೀಟ್ ಕರೆದು, ಮಾಹಿತಿ ನೀಡ್ತೇನೆ. ನಮ್ಮ ಜಾಗ ತೆಗೆದುಕೊಂಡು ಸುಮಾರು 6 ವರ್ಷ ಆಗಿದೆ. ಇದನ್ನ ಕಾನೂನು ಬದ್ಧವಾಗಿನೇ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

