ಚಿತ್ರದುರ್ಗ : ಜಿಲ್ಲಾ ಯಾದವ ಗೊಲ್ಲರ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳ ಸ್ಥಾನಕ್ಕೆ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ ನಾಲ್ಕು ಗಂಟೆಯತನಕ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣೆ ನಡೆಯಲಿದೆ.
ಇದೊಂದು ಪ್ರತಿಷ್ಟೆಯ ಚುನಾವಣೆಯಾಗಿದ್ದು, ಹಳೆ ಮತ್ತು ಹೊಸ ಗುಂಪುಗಳ ನಡುವೆ ತೀವ್ರ ತರನಾದ ಪೈಪೋಟಿ ಏರ್ಪಟಿದ್ದು, ಹೊಸಬರು ಜಿಲ್ಲೆಯಾದ್ಯಂತ ಮತದಾರರನ್ನು ಭೇಟಿಯಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ.
ಬಿ.ಅಶೋಕ್‍ಕುಮಾರ್, ಆಕರ್ಶ್‍ಯಾದವ್ ಬಿ.ಈ. ಎ.ಚಿತ್ತಪ್ಪ, ಕೆ.ಚಂದ್ರಶೇಖರಪ್ಪ, ಜಗದೀಶ್ ಆರ್. ಟಿ.ನಾಗಪ್ಪ ಮದ್ದನಕುಂಟೆ, ಪರಮೇಶ್ ಗೊಲ್ಲಹಳ್ಳಿ, ಎಸ್.ಪ್ರಕಾಶ್ ಮುಂಗುಸುವಳ್ಳಿ, ಜಿ.ಆರ್.ಪ್ರಕಾಶ್, ಬಿ.ಡಿ.ಬಸವರಾಜ, ಕೆ.ಜೆ.ರಾಜು, ರೇವಣಸಿದ್ದಪ್ಪ, ಡಿ.ಆರ್.ಲಿಂಗರಾಜು, ಪಿ.ಆರ್.ವೀರೇಶ್ ಈರಜ್ಜನಹಟ್ಟಿ, ಎಂ.ಶಿವಣ್ಣ ಶ್ರವಣಗೆರೆ ಇವರುಗಳು ಹಳೆ ಗುಂಪಿನೊಂದಿಗೆ ಗೆಲುವಿಗಾಗಿ ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ.
ಹಳೆ ಕಮಿಟಿಯವರ ನಿರ್ಲಕ್ಷೆಯಿಂದ ಹಲವಾರು ವರ್ಷಗಳಿಂದಲೂ ಕಟ್ಟಡ ನೆನೆಗುದಿಗೆ ಬಿದ್ದಿದ್ದು, ಗೊಲ್ಲರ ಸಂಘಕ್ಕೆ ಹೊಸ ಚೈತನ್ಯ ತುಂಬುವುದಕ್ಕಾಗಿ ಈ ಬಾರಿಯ

ಚುನಾವಣೆಯಲ್ಲಿ ವಕೀಲರು, ಯುವ ಪತ್ರಕರ್ತ, ಚಿಂತಕರು, ಪ್ರಜ್ಞಾವಂತರು, ಬುದ್ದಿಜೀವಿಗಳು ಸ್ಪರ್ಧಿಸಿದ್ದು, ಮತದಾರರು ಅಮೂಲ್ಯವಾದ ಮತವನ್ನು ನೀಡಿ ಹೊಸ ಗುಂಪನ್ನು ಗೆಲ್ಲಿಸುವಂತೆ ಸ್ಪರ್ಧಾಳುಗಳು ಮನವಿ ಮಾಡಿದ್ದಾರೆ.


















