Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಿಳೆ ಕೊಲೆ ಪ್ರಕರಣ : ಶ್ರೀರಾಂಪುರ ಪೊಲೀಸರಿಂದ 9 ಮಂದಿ ಆರೋಪಿಗಳ ಬಂಧನ

---Advertisement---

ಚಿತ್ರದುರ್ಗ, (ಜೂ.29) : ಹೊಲಕ್ಕೆ ಹೋಗುವ ದಾರಿ ವಿಚಾರವಾಗಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಂಪುರ ಪೊಲೀಸರು 9 ಮಂದಿ ಆರೋಪಗಳನ್ನು ‌ಗುರುವಾರ ಬಂಧಿಸಿದ್ದಾರೆ.

ಹೊಸದುರ್ಗ ತಾಲ್ಲೂಕು ಮತ್ತೋಡು ಹೋಬಳಿಯ ಲಕ್ಷ್ಮಿದೇವರಹಳ್ಳಿ
ಗ್ರಾಮದ ಜಮೀನಿನಲ್ಲಿ ದಾರಿಯ ವಿಚಾರವಾಗಿ ನಡೆದ ಗಲಾಟೆ ಸಮಯದಲ್ಲಿ
ಲಕ್ಷ್ಮಿದೇವರಹಳ್ಳಿ ಗ್ರಾಮದ ಪಾಲಾಕ್ಷಿ ಎಂಬ ಮಹಿಳೆಯನ್ನು ಬುಧವಾರ ಕೊಲೆ ಮಾಡಿ, ಆಕೆಯ ಗಂಡ ಪ್ರಸನ್ನ ಅವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ಪ್ರಸನ್ನ ಅವರು ನೀಡಿದ ದೂರಿನ ಮೇರೆಗೆ ಶ್ರೀರಾಂಪುರ
ಪೊಲೀಸರು ದೂರು ದಾಖಲಿಸಿಕೊಂಡು ಪ್ರಕರಣದಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿತರನ್ನು ಪತ್ತೆ ಮಾಡಿರುತ್ತಾರೆ.

1) ರಾಜಣ್ಣ
2) ಬಸವರಾಜಪ್ಪ
3) ನಾಗರಾಜ
4) ರುದ್ರೇಶ
5) ರಾಮಕ್ಕ
6) ಶಿಲ್ಪ
7) ರೂಪ
8) ಶಾಂತಮ್ಮ
9) ಲತಾ ಬಂಧಿತ ಆರೋಪಿಗಳಾಗಿದ್ದು,
ಇವರುಗಳನ್ನು ಗುರುವಾರ ಬೆಳಿಗ್ಗೆ ಚಿಕ್ಕಬ್ಯಾಲದಕೆರೆ ಗೇಟ್ ಹಾಗೂ ಲಕ್ಷ್ಮಿದೇವರಹಳ್ಳಿ ಗೇಟ್ ಬಳಿ ಪೊಲೀಸರು
ವಶಕ್ಕೆ ಪಡೆದುಕೊಂಡಿರುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...