ಚಿತ್ರದುರ್ಗ, (ಜೂ.29) : ಹೊಲಕ್ಕೆ ಹೋಗುವ ದಾರಿ ವಿಚಾರವಾಗಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಂಪುರ ಪೊಲೀಸರು 9 ಮಂದಿ ಆರೋಪಗಳನ್ನು ಗುರುವಾರ ಬಂಧಿಸಿದ್ದಾರೆ.
ಹೊಸದುರ್ಗ ತಾಲ್ಲೂಕು ಮತ್ತೋಡು ಹೋಬಳಿಯ ಲಕ್ಷ್ಮಿದೇವರಹಳ್ಳಿ
ಗ್ರಾಮದ ಜಮೀನಿನಲ್ಲಿ ದಾರಿಯ ವಿಚಾರವಾಗಿ ನಡೆದ ಗಲಾಟೆ ಸಮಯದಲ್ಲಿ
ಲಕ್ಷ್ಮಿದೇವರಹಳ್ಳಿ ಗ್ರಾಮದ ಪಾಲಾಕ್ಷಿ ಎಂಬ ಮಹಿಳೆಯನ್ನು ಬುಧವಾರ ಕೊಲೆ ಮಾಡಿ, ಆಕೆಯ ಗಂಡ ಪ್ರಸನ್ನ ಅವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಪ್ರಸನ್ನ ಅವರು ನೀಡಿದ ದೂರಿನ ಮೇರೆಗೆ ಶ್ರೀರಾಂಪುರ
ಪೊಲೀಸರು ದೂರು ದಾಖಲಿಸಿಕೊಂಡು ಪ್ರಕರಣದಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿತರನ್ನು ಪತ್ತೆ ಮಾಡಿರುತ್ತಾರೆ.

1) ರಾಜಣ್ಣ
2) ಬಸವರಾಜಪ್ಪ
3) ನಾಗರಾಜ
4) ರುದ್ರೇಶ
5) ರಾಮಕ್ಕ
6) ಶಿಲ್ಪ
7) ರೂಪ
8) ಶಾಂತಮ್ಮ
9) ಲತಾ ಬಂಧಿತ ಆರೋಪಿಗಳಾಗಿದ್ದು,
ಇವರುಗಳನ್ನು ಗುರುವಾರ ಬೆಳಿಗ್ಗೆ ಚಿಕ್ಕಬ್ಯಾಲದಕೆರೆ ಗೇಟ್ ಹಾಗೂ ಲಕ್ಷ್ಮಿದೇವರಹಳ್ಳಿ ಗೇಟ್ ಬಳಿ ಪೊಲೀಸರು
ವಶಕ್ಕೆ ಪಡೆದುಕೊಂಡಿರುತ್ತಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















