Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಶಾಸಕರು, ಸಚಿವರನ್ನೆಲ್ಲಾ ದೆಹಲಿಗೆ ಕರೆದುಕೊಂಡು ಹೋಗ್ತೀರಾ : ಡಿಕೆಶಿ ಹೇಳಿದ್ದೇನು..?

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ಇಂದು ಡಿಸಿಎಂ ನಾಳೆ ಸಿಎಂ ದೆಹಲಿಗೆ ಹೋಗ್ತಿರೋದು ಚರ್ಚೆ ಶುರುವಾಗಿದೆ. ಶಾಸಕರು, ಸಚಿವರನ್ನೆಲ್ಲಾ ದೆಹಲಿಗೆ ಕರೆದುಕೊಂಡು ಹೋಗ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ನನ್ನ ಜೊತೆಯಲ್ಲಿ ಅವರವರು ಅಲ್ಲ, ಕ್ಷೇತ್ರದವರ ಜೊತೆಗೆ ಅವರುಗಳು ಹೊರಡ್ತಾ ಇದ್ದಾರೆ. ವೊಇಟ್ ಚೋರಿ ಪ್ರೋಗ್ರಾಂ ಸಂಬಂಧ ಹೋಗುತ್ತಾ ಇದ್ದೀವಿ.

ನಮ್ಮ ರಾಜ್ಯದಿಂದ ವೋಟ್ ಚೋರಿ ಅಧ್ಯಯನ ಫ್ರೀಡಂ ಪಾರ್ಕ್ ನಿಂದ ಶುರುವಾಗುತ್ತೆ. ನಾಳೆ ರಾಮ್ ಲೀಲಾ ಮೈದಾನದಲ್ಲಿ ಆರಂಭವಾಗ್ತಾ ಇದೆ. ನಮ್ಮ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ದೆಹಲಿಗೆ ಹೋಗಿದ್ದಾರೆ. ಕೆಲವರು ಟ್ರೈನ್ ನಲ್ಲಿ, ಕೆಲವರು ವಿಮಾನದ ಮೂಲಕ, ರಾಜ್ಯದ ಎಲ್ಲಾ ಮೂಲೆ ಮೂಲೆಯಿಂದಾನೂ ನಮ್ಮ ಮುಖಂಡರು ಹೋಗಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಜನ ಶಾಸಕರಜ, ಪರಿಷತ್ ಸದಸ್ಯರು ಹೋಗಿದ್ದಾರೆ. ನಾನು ಕೂಡ ಹೋಗಬೇಕಾಗಿದೆ. ಅದಕ್ಕೆಲ್ಲ ವ್ಯವಸ್ಥೆ ಮಾಡಬೇಕು. ಅವರವರೇ ಮಾಡಿಕೊಂಡು ಹೋಗಿದ್ದಾರೆ.

ಅವರಿಗೆ ಶಕ್ತಿ ತುಂಬುತ್ತೇವೆ. ನಮಗೆ ಆತ್ಮವಿಶ್ವಾಸವಿದೆ. ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನರಿಗೆ ಜಾಗೃತಿ ಮೂಡಿಸಬೇಕು ಅಂತ ಹೇಳಿ, ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ನೇತೃತ್ವ ವಹಿಸಿದ್ದಾರೆ. ಹೀಗಾಗಿ ಅವರಿಗೆಲ್ಲಾ ನಾವೂ ಶಕ್ತಿ ತುಂಬ ಬೇಕಿದೆ. ಹಾಗಾಗಿ ಹೋಗುತ್ತೀವಿ. ಹೋಗಿ ತಲುಪುವುದೇ ತಡವಾಗುತ್ತದೆ. ಜೊತೆಗೆ ನಂಗೆ ನ್ಯಾಷನಲ್ ಹೆರಾಲ್ಡ್ ನೋಟೀಸ್ ಬಂದಿದೆಯಲ್ಲ. ಅದರ ಸಂಬಂಧ ಉತ್ತರ ಕೊಡಬೇಕಾಗುತ್ತದೆ. ಇವತ್ತು ಸ್ವಲ್ಪ ಬ್ಯುಸಿ ಇದ್ದೀನಿ. ಪೇಪರ್ಸ್ ಎಲ್ಲಾ ಕಲೆಕ್ಟ್ ಮಾಡಿಕೊ.ಮಡು ಅದಕ್ಕೆ ಉತ್ತರ ಕೊಟ್ಟು ಬರ್ತೀನಿ ಅಂತ ಡಿಕೆ ಶಿವಕುಮಾರ್, ಹೈಕಮಾಂಡ್ ನಾಯಕರನ್ನು ಭೇಟಿ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now