Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅಲ್ಪಸಂಖ್ಯಾತರಿಗೆ ಕೊಡ್ತಾರಾ..? ಸತೀಶ್ ಜಾರಕಿಹೊಳಿ ಉತ್ತರವೇನು..?

---Advertisement---

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಅನ್ನು ಈ ಬಾರಿ ಅಲ್ಪಸಂಖ್ಯಾತರಿಗೆ ನೀಡಲಾಗುತ್ತದೆ ಎಂಬ ಮಾತಿದೆ. ಇದಕ್ಕೆ ಹಲವರ ವಿರೋಧವಿದ್ರೆ ಇನ್ನು ಹಲವರ ಬೆಂಬಲವಿದೆ. ಈ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೈಕಮಾಂಡ್ ತೀರ್ಮಾನ ಮಾಡುತ್ತೆ ಯಾರಿಗೆ ಕೊಡಬೇಕು ಅಂತ. ನಮ್ಮ ಹಿರಿಯರಿದ್ದಾರೆ, ನಮ್ಮ ಸಿಎಂ, ಡಿಸಿಎಂ, ಜನರಲ್ ಸೆಕ್ರೆಟರಿ ತೀರ್ಮಾನ ಮಾಡ್ತಾರೆ. ಟಿಕೆಟ್ ಕೊಡಬೇಕಲ್ಲ, ಕೊಟ್ಮೇಲಷ್ಟೇ ಅಹಿಂದ, ಹಿಂದುಳಿದವರಿಗಾ ಗೊತ್ತಾಗೋದು. ಬಾಗಲಕೋಟೆಯಲ್ಲಿ ಅಹಿಂದಾಗೆ ಕೊಡ್ತೀವಿ ಅಂತ. ಅಲ್ಲಿ ಏನು ಗೊಂದಲ ಇಲ್ಲ. ಟಿಕೆಟ್ ಸಿಕ್ಮೇಲೆ ಅದೆಲ್ಲಾ. ಅದರ ಬಗ್ಗೆ ಏನು ಹೇಳುವುದಕ್ಕೆ ಆಗಲ್ಲ. ಹೈಕಮಾಂಡ್ ನ ಅಂತಿಮ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದಿದ್ದಾರೆ.

ಇದೆ ವೇಳೆ ಒಳಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಕೋರ್ಟ್ ನಲ್ಲಿ ಇತ್ಯರ್ಥ ಆಗದೆ ಏನು ಮಾಡುವುದಕ್ಕೆ ಆಗಲ್ಲ. ಆರು ತಿಂಗಳಿನಿಂದ ನಿಲ್ಲಿಸಿದ್ದೀವಿ. ಸುಮಾರು 42 ಸಾವಿರ ಹುದ್ದೆಗಳ ಭರ್ತಿ ಖಾಲಿ ಇದೆ. ವರ್ಷಕ್ಕೆ 5 -10 ಸಾವಿರ ಬಂದೇ ಬರುತ್ತೆ. ಕೆಲಸ ಮಾಡೋದಕ್ಕೆ ಜನ ಬೇಕು. ಈಗ ಯಾರಿದ್ದಾರೆ. ಯಥಾಸ್ಥಿತಿ ಬಂದಿದೆ ಈ ವರ್ಷ. ಕಾಂಗ್ರೆಸ್ ಕೆಲಸ ಮಾಡಿದೆಯಾ ಇಲ್ವಾ ಅನ್ನೋದನ್ನ ಜನ ತೀರ್ಮಾನ ಮಾಡಬೇಕು. ವಿರೋಧ ಪಕ್ಷದವರು ಹೇಳ್ತಾರೆ ಏನು ಮಾಡಿಲ್ಲ ಅಂತ‌. ಗ್ಯಾರಂಟಿಗಳಿಂದ ಹೊರೆ ಹಾಗಿಯೇ ಆಗುತ್ತೆ. ಎಲ್ಲವನ್ನು ಕೊಟ್ಟಿದೆ ಅಲ್ವಾ ಅಂತ ಹೇಳುವ ಮೂಲಕ ಡಿಕೆ ಶಿವಕುಮಾರ್ ಹೇಳಿದ ಮಾತನ್ನ ಒಪ್ಪಿಕೊಂಡಂತೆ ಆಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now