Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಲೆ ಮಹದೇಶ್ವರ ಬೆಟ್ಟದ ಮ್ಯೂಸಿಯಂ ಉದ್ಘಾಟನೆಯಾದರೆ ಸಿದ್ದರಾಮಯ್ಯ ಅವರಿಗೆ ಎದುರಾಗುತ್ತ ಸಂಕಷ್ಟ..?

---Advertisement---

ಚಾಮರಾಜನಗರ; ಮಲೆ‌ಮಹದೇಶ್ವರ ಸ್ವಾಮಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇದ್ದಾರೆ. ಮಾದಪ್ಪನ ಭಕ್ತರು ಹುಂಡಿಗೆ ಹಾಕುವ ಕಾಣಿಕೆ ಹಣವೇ ಎಣಿಕೆ ಮಾಡುವಾಗ ಕೋಟಿ ಕೋಟಿ ಕಲೆಕ್ಷನ್ ಆಗಿರುತ್ತದೆ. ಇದನ್ನ ನೋಡಿದಾಗಲೇ ಅರ್ಥವಾಗಬೇಕು ಮಾದಪ್ಪನ ಎಷ್ಟು ಭಕ್ತರಿದ್ದಾರೆ ಅನ್ನೋದು.‌ ಇದೀಗ ಮಲೆ‌ಮಹದೇಶ್ವರ ಬೆಟ್ಟದ ಮ್ಯೂಸಿಯಂ ವಿಚಾರಕ್ಕೆ ಸಾಕಷ್ಡು ವಿವಾದ ಸೃಷ್ಟಿಯಾಗಿದೆ. 108 ಅಡಿ ಮಹದೇಶ್ವರ ಪುತ್ಥಳಿ ಕೆಳಗೆ ನಿರ್ಮಾಣವಾಗಿರುವ ಮ್ಯೂಸಿಯಂ ವಿವಾದದ ಕೇಂದ್ರ ಬಿಂದುವಾಗಿದೆ.

ಅಷ್ಟಕ್ಕೂ ವಿವಾದ ಆಗುವುದಕ್ಕೆ ಕಾರಣವೇನು ಅನ್ನೋದನ್ನ ನೋಡುವುದಾದರೆ, ಮಾ್ಪ್ಪನ ಇತಿಹಾಸವನ್ನು ಸಾರುವ ಕಲಾಕೃತಿಗಳು ಮ್ಯೂಸಿಯಂನಲ್ಲಿದೆ. ಆ ಕಲಾಕೃತಿಗಳಲ್ಲಿ ರಾಮಮೊಗಪ್ಪ ದಂಪತಿಯ ಕಲಾಕೃತಿಯನ್ನು ನಿರ್ಮಾಣ ಮಾಡಿಲ್ಲ. ಇದೇ ಇಂದಿಗೆ ಸಮಸ್ಯೆಯಾಗಿದೆ. ಆ ವಂಶಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಸರಗೂರು ಮಠದ ಸಿದ್ದಪ್ಪ ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಮೂರ್ತಿ ದೇವದಾಸ್ ಅವರು ಪುತ್ಥಳಿಗೆ ಅವಕಾಶ ನೀಡುವಂತೆ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸೂಚನೆಯನ್ನ ನೀಡಿದೆ. ಈ ಸಂಬಂಧ ನ್ಯಾಯಾಲಯ ಕೂಡ ಪ್ರಶ್ನೆ ಮಾಡಿತ್ತು. ಆದರೆ ಪ್ರಾಧಿಕಾರದ ವಕೀಲರು ಮ್ಯೂಸಿಯಂ ಸಂಪೂರ್ಣ ಆಗಿಲ್ಲ ಅಂತಾನೇ ಉತ್ತರ ನೀಡಿದ್ದರು.

ಈಗ ನೋಡಿದ್ರೆ ಮ್ಯೂಸಿಯಂ ಸಂಪೂರ್ಣವಾಗಿದ್ದು, ಏಪ್ರಿಲ್ 24 ರಂದು ಉದ್ಘಾಟನೆಗೂ ಸಿದ್ಧವಾಗಿದೆ‌. ಈ ನಡುವೆ ಇದೊಂದು ಅಪೂರ್ಣಗೊಂಡ ಮ್ಯೂಸಿಯಂ. ಯಾವುದೇ ಕಾರಣಕ್ಕೂ ಉದ್ಘಾಟನೆಯಾಗಬಾರದು ಎಂದು ರಾಮಮೋಗಪ್ಪ ವಂಶಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಈ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಒಂದು ವೇಳೆ ಉದ್ಘಾಟನೆಯಾದರೆ ಕಟ್ಮೆಂಟ್ ಆಫ್ ಕೋರ್ಟ್ ಆಗುವ ಸಾಧ್ಯತೆ ಇದೆ. ಮಹದೇಶ್ವರರಿಗೆ ಮೊದಲು ಎಣ್ಣೆ ಮಜ್ಜನ ಮಾಡಿಸಿದ್ದು, ಮಹದೇಶ್ವರನ ಪೂಜೆಗೆ ಮಹಿಳೆಯರಿಗೂ ಅವಕಾಶವನ್ನು ಕಲ್ಪಿಸಿದ್ದು ರಾಮಮೊಗಪ್ಪ ಕುಟುಂಬವಾಗಿದೆ. ಮ್ಯೂಸಿಯಂನಲ್ಲಿ ಈ ಕುಟುಂಬವನ್ನು ಕಡೆಗಣಿಸಿದ್ದು, ಎಷ್ಟು ಸರಿ ಅಂತಿದ್ದಾರೆ ಅವರ ಕುಟುಂಬಸ್ಥರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment