ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಸುದ್ದಿಒನ್, ಬೆಂಗಳೂರು : ಬಿಗ್ ಬಾಸ್ ಸೀಸನ್ 10 ಅತಿ ಕುತೂಹಲ ಮೂಡಿಸುವಂತ ಎಪಿಸೋಡ್ ಗಳನ್ನು ಪ್ರಸಾರ ಮಾಡಲಾಗುತ್ತಿದೆ. ಬಿಗ್ ಮನೆಯಲ್ಲಿ ಕಿಚ್ಚನ ಪಂಚಾಯತಿ ಎರಡನೇ ಬಾರಿಗೆ ಶುರುವಾಗಿದೆ. ಇಂದು ಪಂಚಾಯತಿ ಮುಗಿದ ಮೇಲೆ ಮನೆಯಿಂದ ಮತ್ತೊಬ್ಬರು ಹೊರ ಬರಲಿದ್ದಾರೆ. ಈಗಾಗಲೇ ಹದಿನೇಳು ಮಂದಿಯಲ್ಲಿ ಒಬ್ಬರು ಹೊರ ಬಂದು, ಹದಿನಾರು ಮಂದಿಯಾಗಿದ್ದಾರೆ. ವಾರ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳೇ ಎಲಿಮಿನೇಟ್ ಆಗುತ್ತಾ ಬರುತ್ತಾರೆ.
ಬಿಗ್ ಬಾಸ್ ಸದ್ಯ ಈ ವಾರ ಟಫ್ ಟಾಸ್ಕ್ ಗಳನ್ನ ನೀಡುತ್ತಿದೆ. ಸ್ಪರ್ಧಿಗಳು ಕೂಡ ಗೆಲುವಿನತ್ತ ಗಮನ ಹರಿಸುತ್ತಿದ್ದಾರೆ. ಇದರ ನಡುವೆ ಮನೆಯಲ್ಲಿ ಜಗಳ, ಮನಸ್ತಾಪಗಳು ಶುರುವಾಗಿವೆ. ಅದಕ್ಕೆ ಕಟರಣ ಟಾಸ್ಕ್ ಗೆಲ್ಲಬೇಕೆಂಬ ಹಂಬಲ. ಇದರ ನಡುವೆ ಇನ್ನೊಬ್ಬರು ಮನೆಯಿಂದ ಹೊರ ಹೋಗುವ ಸಮಯ ಬಂದಿದೆ.
ಸದ್ಯಕ್ಕೆ ಈ ವಾರ ಭಾಗ್ಯಶ್ರೀ, ತುಕಾಲಿ ಸಂತು, ಗೌರೀಶ್ ಅಕ್ಕಿ, ಸಂಗೀತಾ ಶೃಂಗೇರಿ, ತನಿಷಾ, ಕಾರ್ತೀಕ್ ಮಹೇಶ್ ನಾಮಿನೇಟ್ ಆಗಿದ್ದಾರೆ. ಇಷ್ಟು ಜನರಲ್ಲಿ ಟಾಸ್ಕ್ ವಿಚಾರ ಅಂತ ಬಂದಾಗ ಕೊಂಚ ವೀಕ್ ಆಗಿರುವುದು ಭಾಗ್ಯಶ್ರೀ. ಹೀಗಾಗಿ ಇವತ್ತಿಂದ ಭಾಗ್ಯಶ್ರೀ ಅವರ ಆಟ ಮುಗಿಯಬಹುದು ಎಂದೇ ಊಹೆ ಮಾಡಲಾಗುತ್ತಿದೆ. ನಿನ್ನೆಯೆಲ್ಲಾ ಕುಟುಂಬದವರ ನೆನಪು ಮಾಡಿಕೊಳ್ಳಲು ಬಿಗ್ ಬಾಸ್ ಅವಕಾಶ ಕೊಟ್ಟಿತ್ತು. ಈ ವೇಳೆ ಭಾಗ್ಯಶ್ರೀ, ತನ್ನ ಪತಿ ಭರತ್ ಗೆ ಥ್ಯಾಂಕ್ಸ್ ಹೇಳಿದ್ದರು. ಜೊತೆಗೆ ಮೊನ್ನೆ ಬಿಗ್ ಬಾಸ್ ಕಡೆಯಿಂದ ಭಾಗ್ಯಶ್ರೀಗೆ ಶಿಕ್ಷೆಯೂ ಸಿಕ್ಕಿತ್ತು. ಟಾಸ್ಕ್ ನಲ್ಲಿ ಸೋತ ಪರಿಣಾಮವಾಗಿ ಮನೆಯ ಒಳಗೆ ಬಿಟ್ಟುಕೊಳ್ಳದೆ, ಗಾರ್ಡನ್ ಏರಿಯಾದಲ್ಲಿಯೇ ಇರುವಂತೆ ಶಿಕ್ಷೆ ನೀಡಿತ್ತು. ಇಂದು ಮನೆಯಿಂದ ಹೊರ ಬರುವ ಎಲ್ಲಾ ಸಾಧ್ಯತೆಯೂ ಇದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್