ಬೆಂಗಳೂರು: ದಾವಣಗೆರೆ ಉಪಚುನಾವಣೆ ಮುಗಿದ ಮೇಲಂತು ಕಾಂಗ್ರೆಸ್ ಸರ್ಕಾರದಲ್ಲಿ ನಾನಾ ರೀತಿಯ ಬದಲಾವಣೆಗಳು ಆಗುತ್ತಿವೆ. ಕೆಲವರ ತಲೆದಂಡ ಕೂಡ ಆಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿಯೇ. ಈ ಸಂಬಂಧ ಮಾಜಿ ಸಚಿವ ಕೆ.ಎನ್.ರಾಜಣ್ಣ ಬೇಸರದ ಮಾತುಗಳನ್ನ ಆಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ದಿವಂಗತರಾಗಿದ್ದಾರೆ. ಅವರ ಬಗ್ಗೆ ನಾವೂ ಯಾವುದೇ ರೀತಿಯ ಕಮೆಂಟ್ ಮಾಡಬಾರದು.
ಆದರೂ ಕೂಡ ಶಿವಮೊಗ್ಗ ಎಲೆಕ್ಷನ್ ಹೋಗಿ, ರಾಘವೇಂದ್ರ ಅವನಿಗೆ ಮತ ಹಾಕಿ ಅಂತ ಕೇಳಿದ್ರು. ಅವಾಗ ಯಾವುದೇ ಕ್ರಮ ಆಗ್ಲಿಲ್ಲ. ಅದು ಆಶಿಸ್ತು ಆಗಲ್ವಾ..? ಇವ್ರೆಲ್ಲಾ ಏನ್ ಮಾಡ್ತಿದ್ದರು ಆಗ. ಮೌಖಿಕವಾಗಿಯಾದರೂ ಒಂದು ಎಚ್ಚರಿಕೆ ಕೊಡಬಹುದಿತ್ತಲ್ಲ. ಕೊಟ್ಟಿದ್ದರಾ..? ಅವರ ಬಗ್ಗೆ ಆರೋಪ ಮಾಡ್ತಿಲ್ಲ. ಸಂಗತಿ ಹೇಳ್ತಾ ಇದ್ದೀನಿ ಅಷ್ಟೆ. ಅವರು ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆ ಮಾಡುವಂತದ್ದು. ಪಕ್ಷದಲ್ಲಿ ಶಾಸಕರಾಗಿದ್ದುಕೊಂಡು ಇನ್ನೊಂದು ಪಲ್ಷಕ್ಕೆ ವೋಟ್ ಹಾಕುವಂತೆ ಹೇಳ್ತಾ ಇರೋದು ಆಶಿಸ್ತು ಅಲ್ವಾ ಎಂದಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನ್ನಾಡಿದ ರಾಜಣ್ಣ ಅವರು, ಈ ರೀತಿ ಅಸಹಾಯಕ ಸ್ಥಿತಿಯನ್ನ ನಾವೂ ನಿರೀಕ್ಷೆ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ಯಾಕೆ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಮುಂದೆ ಕಾಂಗ್ರೆಸ್ ಪಕ್ಷ ಬೆಳೀಬೇಕು, ಬಡವರಿಗೆ ಸಹಾಯ ಆಗಬೇಕು ಎನ್ನುವುದರ ಮೇಲೂ ಪಟ್ಟಭದ್ರರು ಹುನ್ನಾರಗಳನ್ನ ಮಾಡ್ತಾರೆ. ಆದರೆ ನಾವೂ ನಿರೀಕ್ಷೆ ಮಾಡೋದು ಇಂಥ ಸಂಗತಿಗಳು ಬಂದಾಗ ಸಿದ್ದರಾಮಯ್ಯ ಅವರು ಗಟ್ಟಿಯಾಗಿ ನಿಲ್ಲಬೇಕು, ಆದರೆ ಅವರು ನಿಲ್ತಾ ಇಲ್ಲ ಅನ್ನೋದೆ ಬೇಸರ. ಕಟ್ಟಾಕೋಕೆ ಅವರೇನು ಕುರಿನಾ..? ಕೋಣನಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
















