Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾನಾ-ನೀನಾ ಅಂತ ಕಿತ್ತಾಡುತ್ತಿದ್ದ ರೆಡ್ಡಿ-ರಾಮುಲು ಸೈಲೆಂಟ್ ಆಗಿದ್ದೇಕೆ : ನಡುವಲ್ಲಿ ಸಮಾಧಾನ ಮಾಡಿದ್ಯಾರು..?

---Advertisement---

ಕಳೆದ ಕೆಲವು ದಿನಗಳಿಂದ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು. ಕೋರ್ ಕಮಿಟಿ ಸಭೆ ಆದ ಮೇಲೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವೆ ನಾನಾ – ನೀನಾ ಯುದ್ಧ ಶುರುವಾಗಿತ್ತು. ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಆಡಿದ ಮಾತುಗಳಿಂದ ಮನನೊಂದು ಶ್ರೀರಾಮುಲು ಅವರು ಪಕ್ಷವನ್ನೇ ಬಿಡುವ ಮಾತನಾಡಿದ್ದರು‌. ಜನಾರ್ದನ ರೆಡ್ಡಿ ಅವರೇ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಜನಾರ್ದನ ರೆಡ್ಡಿ ಅವರು ತಿರುಗೇಟು ನೀಡಿದ್ದರು.

ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರು ಒಬ್ಬರಿಗೊಬ್ಬರು ಸುದ್ದಿಗೋಷ್ಟಿ ನಡೆಸಿ, ಆರೋಪ – ಪ್ರತ್ಯಾರೋಪ ಮಾಡುವುದಕ್ಕೆ ಶುರುವಾಗಿತ್ತು. ಇದು ಪಕ್ಷದ ಬೆಳವಣಿಗೆಗೆ ಸರಿ ಅಲ್ಲ ಎಂಬುದು ತಿಳಿದ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿದೆ ಎನ್ನಲಾಗಿದೆ. ಶ್ರೀರಾಮುಲು ಅವರಿಗೆ ಕರೆ ಮಾಡಿ, ದೆಹಲಿಗೆ ಬರುವಂತೆ ಹೇಳಿದ್ದಾರೆ ಎಂದು ಶ್ರೀರಾಮುಲು ಆಪ್ತ ಮೂಲಗಳು ತಿಳಿಸಿವೆ.

ಜೆಪಿ ನಡ್ಡಾ ಅವರು ಕರೆ ಮಾಡಿ, ಮುಂದಿನ ವಾರ ದೆಹಲಿಗೆ ಬನ್ನಿ, ಇಲ್ಲಿಯೇ ಎಲ್ಲಾ ಮಾತಾಡೋಣಾ. ಈ ಸಮಸ್ಯೆಯನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬೇಕಿದೆ. ಕಳೆದ 35-40 ವರ್ಷದಿಂದ ನೀವಿಬ್ಬರು ಒಟ್ಟಿಗೆ ಬೆಳೆದಿದ್ದೀರಿ, ಯಾವುದೋ ಕಾರಣಕ್ಕೆ ಹಾದಿ ಬೀದಿ ರಂಪ ಮಾಡಿಕೊಳ್ಳಬೇಡಿ. ನಾನೊಂದು ತೀರಾ, ನೀನೊಂದು ತೀರಾ ಅನ್ನುವಂತಾಗುವುದು ಬೇಡ. ನಿಮ್ಮಿಬ್ಬರ ಮಧ್ಯೆ ಎದ್ದಿರುವ ಭಿನ್ನಾಭಿಪ್ರಾಯವನ್ನು ನೀವಿಬ್ಬರೆ ಮಾತಾಡಿ ಬಗೆಹರಿಸಿಕೊಳ್ಳಿ. ಇನ್ನೆರಡು ದಿನದಲ್ಲಿ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆದು ದೆಹಲಿಗೆ ಬನ್ನಿ ಎಂದಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ಇಬ್ಬರು ಸೈಲೆಂಟ್ ಆಗಿದ್ದು, ದೆಹಲಿಗೆ ಹೋಗಿ ಬಂದ ಮೇಲೆ ಶ್ರೀರಾಮುಲು ಯಾವ ರೀತಿ ಬದಲಾಗುತ್ತಾರೆ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...