Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆಯಲ್ಲಿ ಬಸ್ ಹತ್ತುವ ವೇಳೆ ಬ್ಯಾಗ್ ನಲ್ಲಿದ್ದ ಆಭರಣವನ್ನೆ ಕದ್ದ ಖದೀಮರು..!

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 30 : ಬಸ್ ನಲ್ಲಿ ಪ್ರಯಾಣಿಸುವಾಗ, ಒಬ್ಬೊಬ್ಬರೆ ಓಡಾಡುವಾಗ ಚಿನ್ನಾಭರಣಗಳ ಬಗ್ಗೆ ಎಚ್ಚರವಿರಲಿ ಎಂದು ಪೊಲೀಸರು ಕೂಡ ಎಚ್ಚರಿಸುತ್ತಲೇ ಇರುತ್ತಾರೆ. ಅದರಲ್ಲೂ ಬಸ್ ನಲ್ಲಿ ಓಡಾಡುವವರು ಚಿನ್ನಾಭರಣಗಳ ಮೇಲೆ ಗಮನ ಹರಿಸಬೇಕು. ಇವತ್ತು ಬಸ್ ಹತ್ತುವ ವೇಳೆ, ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣವನ್ನೇ ಕಳ್ಳ ಕದ್ದಿದ್ದಾನೆ. ಚಳ್ಳಕೆರೆ ಕೆಎಸ್ಆರ್ಟಿಸಿ ಬಸ್ ಹತ್ತುವ ವೇಳೆ ಈ ಘಟನೆ ನಡೆದಿದೆ.

ರಾಯದುರ್ಗದ 49 ವರ್ಷದ ಟಿ.ಚೂಡಾಮಣಿ ಎಂಬ ಮಹಿಳೆಯ ಒಡವೆ ಕಳ್ಳತನವಾಗಿರುವುದು. ಚೂಡಾಮಣಿ ಅವರು ಚಳ್ಳಕೆರೆಯಿಂದ ರಾಯದುರ್ಗಕ್ಕೆ ಪ್ರಯಾಣಿಸಲು ಮಧ್ಯಾಹ್ನ 2.30 ಕ್ಕೆ ಬಸ್ ನಿಲ್ದಾಣಕ್ಕೆ ಬಂದಿದ್ದರು. ಮಹಿಳೆ ಬಂದ ಕೆಲವೇ ಹೊತ್ತಲ್ಲಿ ಬಸ್ ಆಗಮಿಸಿದೆ. ಜನಜಂಗುಳಿಯ ಬೇರೆ ಇತ್ತು. ಆದರೂ ಅದರ ಮಧ್ಯದಲ್ಲೇ ಮಹಿಳೆ ಬಸ್ ಹತ್ತಿದ್ದಾರೆ. ಜನಜಂಗುಳಿ ಇದ್ದ ಕಾರಣ ಬ್ಯಾಗ್ ನ ಜಿಪ್ ಓಪನ್ ಆಗಿರುವುದು ಗಮನಕ್ಕೆ ಬಂದಿಲ್ಲ. ಬಸ್ ಹತ್ತಿದ ಮೇಲೆ ಬ್ಯಾಗ್ ನೋಡಿಕೊಂಡಿದ್ದಾರೆ. ಜೀಪ್ ಓಪನ್ ಆಗಿದ್ದನ್ನು ಕಂಡು ಗಾಬರಿಯಾಗಿದ್ಧಾರೆ. ಕೂಡಲೇ ಕೂಗಿಕೊಂಡಾಗ ಸಾರ್ವಜನಿಕರು ಆಕೆಯ ನೆರವಿಗೆ ದಾವಿಸಿದ್ಧಾರೆ.

ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿದೆ. ದೂರಿನಲ್ಲಿ ಮಹಿಳೆ ತನ್ನ ವ್ಯಾನಿಟಿಬ್ಯಾಗ್‌ ನಲ್ಲಿ ಏನೆಲ್ಲ ವಸ್ತುಗಳು ಇದ್ದವು ಎಂಬುದನ್ನು ತಿಳಿಸಿದ್ದಾರೆ. ಮಹಿಳೆ ಹೇಳಿದ ಪ್ರಕಾರ, ವ್ಯಾನಿಟಿಬ್ಯಾಗ್‌ನಲ್ಲಿ 90 ಸಾವಿರ ಮೌಲ್ಯದ ಬಂಗಾರದ ಬಳೆ, 60 ಸಾವಿರ ಹರಳಿನ ಬಳೆ, 25 ಸಾವಿರ ಮೌಲ್ಯದ ಉಂಗುರ, 15 ಸಾವಿರ ಮೌಲ್ಯದ ಕಿವಿ ಓಲೆ, 5 ಸಾವಿರ ಮೌಲ್ಯದ ರಿಂಗ್, 15 ಸಾವಿರ ಮೌಲ್ಯದ ಬಂಗಾರದ ಜುಮುಕಿ, 20 ಸಾವಿರ ಮೌಲ್ಯ ಗುಂಡಿನ ಸರ, 40 ಸಾವಿರ ಬ್ರಾಸ್‌ಲೇಟ್ ಸೇರಿದಂತೆ ಒಟ್ಟು 27 ಲಕ್ಷದ 87 ಗ್ರಾಂ ಬಂಗಾರದ ಆಭರಣ ಕಳ್ಳತನವಾಗಿದೆ. ಠಾಣಾಧಿಕಾರಿ ಶ್ರೀನಿವಾಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment