ಮೈಸೂರು ಬ್ಯಾಂಕ್ ಹೆಸರನ್ನೇ ಅಳಿಸಿಬಿಟ್ಟರು, ಸಿಂಡಿಕೇಟ್ ಎಲ್ಲಿ, ವಿಜಯಾ ಎಲ್ಲಿ..?: ಸಿದ್ದರಾಮಯ್ಯ ಕಿಡಿ

suddionenews
2 Min Read

 

ಬೆಂಗಳೂರು: ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2019 ಮತ್ತು 20 ರಲ್ಲಿ‌ ಪ್ರವಾಹ ಬಂದಿತ್ತು, ಆಗ ಕರ್ನಾಟಕಕ್ಕೆ ಬರಲಿಲ್ಲ. ನೊಂದ ಜನರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ವಿಶೇಷವಾದ ಹಣ ನೀಡಲಿಲ್ಲ.

1913ರಲ್ಲಿ ಮೈಸೂರು ಬ್ಯಾಂಕ್ ಸ್ಥಾಪನೆ ಮಾಡಿದ್ರು. ಮಿಸ್ಟರ್ ನರೇಂದ್ರ ಮೋದಿ ಮೈಸೂರು ಬ್ಯಾಂಕ್ ಹೆಸರನ್ನ ಅಳಿಸಿಬಿಟ್ಟರು‌. ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್ ಇದೆಯಾ ಈಗ‌. ನಾಲ್ಕು ಬ್ಯಾಂಕ್ ಗಳನ್ನು ಬೇರೆ ಬ್ಯಾಂಕ್ ಗಳ ಜೊತೆ ಜೋಡಣೆ ಮಾಡಿದ್ದು ಯಾರು..?317 ಲಕ್ಷ ಕೋಟಿ ಬ್ಯಾಂಕ್ ಗಳ ಆಸ್ತಿ ಇದ್ದವು. 75 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿದ್ದರು‌. ಈ ಬ್ಯಾಂಕ್ ಗಳು ಕನ್ನಡಿಗರಿಗೆ ಕೆಲಸ ಕೊಡುತ್ತಿದ್ದರು. ಬ್ಯಾಂಕ್ ಮರ್ಜ್ ಮಾಡಿದ ಮೇಲೆ ಕನ್ನಡಿಗರಿಗೆ ಕೆಲಸ ಸಿಗುತ್ತಿದ್ದೀಯಾ. ಇದು ಕನ್ನಡಿಗರಿಗೆ ಮಾಡಿದ ಮೋಸ.

ಮಿಸ್ಟರ್ ನರೇಂದ್ರ ಮೋದಿ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಆಕ್ಸಿಜನ್ ಕೊಡಲಿಲ್ಲ, ಮನವಿ ಮಾಡಿದ್ರು ಕೊಡಲಿಲ್ಲ. ಹೈಕೋರ್ಟ್ ಕೇಳಿತ್ತು ಆಕ್ಸಿಜನ್ ಕೊಡಿ ಎಂದು ಕೇಳಿತ್ತು. ಆಗ ಕೇಳಿದಷ್ಟು ಕೊಡಲು ಆಗಲ್ಲ ಎಂದು ಹೇಳಿದ್ರು. ಇದರಿಂದ ಅನೇಕ ಜನ ಸಾವನ್ನಪ್ಪಿದರು. ಇದನ್ನು ಯಾರು ಮಾಡಿದ್ದು ಮೋದಿ ಸರ್ಕಾರ. ಕೇಂದ್ರ ಮಂತ್ರಿಯೊಬ್ಬರು ಪಾರ್ಲಿಮೆಂಟ್ ನಲ್ಲಿ ಸುಳ್ಳು ಲೆಕ್ಕ ಹೇಳಿದ್ರು. ಚಾಮರಾಜನಗರದಲ್ಲಿ ನಡೆದ ಘಟನೆಗಳು ಬಗ್ಗೆ ಸುಳ್ಳು ಲೆಕ್ಕ ಹೇಳಿದ್ರು.

ಕೇಂದ್ರದಲ್ಲಿ ಮೋದಿ ಪ್ರಧಾನ ಮಂತ್ರಿ ಆಗಿದ್ದಾರೆ. ಹಣಕಾಸು ಮಂತ್ರಿ ನಮ್ಮ ರಾಜ್ಯದವರೇ. 14 ಹಣಕಾಸು ಆಯೋಗದಿಂದ 15 ಹಣಕಾಸು ಆಯೋಗದಲ್ಲಿ 1.07ರಷ್ಟು ಹಣ ಕಡಿಮೆ ಆಯಿತು. 5495 ಕೋಟಿ ಕೊಡಬೇಕು ಎಂದು15 ನೇ ಹಣಕಾಸು ಆಯೋಗ ಪ್ರಾಥಮಿಕ ವರದಿಯಲ್ಲಿ ಹೇಳಿತ್ತು. ಫೈನಲ್ ರೀಪೋರ್ಟ್ ನಲ್ಲಿ ನಿರ್ಮಲಾ ಸೀತಾರಾಮನ್ ಕೊಡಿಸಬೇಕಿತ್ತು. ಅದನ್ನು ತಪ್ಪಿಸಿದ್ದು ಭಾರತ ಸರ್ಕಾರ.

ಆಕ್ಸಿಜನ್ ಕೊಡಲು ಆಗದವರು ,ಮೈಸೂರಿಗೆ ಬಂದು ಯೋಗ ಮಾಡುತ್ತಿದ್ದಾರೆ. 40% ಕಮಿಷನ್ ಆರೋಪಕ್ಕೆ ಮೋದಿ ಅವರು ಉತ್ತರ ಹೇಳಬೇಕು. ರಾಜ್ಯದ ಜನರಿಗೆ ಉತ್ತರ ಹೇಳಬೇಕು. ಚೌಕಿದಾರ ಎನ್ನುವ ಪ್ರಧಾನ ಮಂತ್ರಿ ಇದಕ್ಕೆ ಉತ್ತರ ಕೊಡಬೇಕು. ಸಬರಬನ್ ರೈಲು ಯೋಜನೆ ನಾನು ಸಿಎಂ ಅಗಿದ್ದಾಗಿಂದ, ಆನಂತ ಕುಮಾರ್ ಕಾಲದಿಂದಲೂ ಇದೆ‌. ಹಾಗಾಗಿ ಮೋದಿ ಅವರು ರಾಜ್ಯಕ್ಕೆ ದೊಡ್ಡ ಅನ್ಯಾಯ ಆಗಿದೆ. ಕರ್ನಾಟಕದಲ್ಲಿ ಲೂಟಿ ಮಾಡಿ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *