ಬೆಂಗಳೂರು; ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರ ಹತ್ಯೆಯ ಬಳಿಕ ಅವರ ಪತ್ನಿ ಪಲ್ಲವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ಶುರು ಮಾಡಿರುವ ಪೊಲೀಸರಿಗೆ ಪಲ್ಲವಿಗೆ ಇದ್ದ ಮಾನಸಿಕ ಕಾಯಿಲೆಯ ಬಗ್ಗೆ ತಿಳಿದು ಬಂದಿದೆ. ಪಲ್ಲವಿ ಅವರು ಸ್ಕ್ರಿಜೋಫೇನಿಯಾ ಎಂಬ ಮಾನಸಿಕವಾಗಿ ರೋಹ ಇರುವುದು ಪತ್ತೆಯಾಗಿದೆ. ಈ ಕಾಯಿಲೆಯಿಂದಾಗಿ ಪಲ್ಲವಿ ಅವರು ಓಂ ಪ್ರಕಾಶ್ ಅವರ ಬಗ್ಗೆ ಇಲ್ಲ ಸಲ್ಲದ ಊಹೆ ಮಾಡಿಕೊಳ್ಳುತ್ತಿದ್ದರಂತೆ.
ಇದರಿಂದಾನೇ ಗನ್ ಹಿಡಿದು ಭಯ ಪಡಿಸ್ತಾ ಇದಾನೆ ಅಂತಾನೂ ಹೇಳಿದ್ದರು. ತಮ್ಮ ಫ್ಯಾಮಿಲಿ ವಾಟ್ಸಾಪ್ ಗ್ರೂಪ್, ಅಧಿಕಾರಿಗಳ ಗ್ರೂಪ್ ಗೆ ಈ ರೀತಿಯ ಸಂದೇಶಗಳನ್ನು ರವಾನಿಸಿದ್ದಾರೆ. ಪೊಲೀಸರ ತನಿಖೆಯಿಂದ ಈ ರೀತಿ ಆಗ್ತಾ ಇದ್ದದ್ದು ಆ ಕಾಯಿಲೆಯಿಂದಾನೇ ಅನ್ನೋದು ತಿಳಿದು ಬಂದಿದೆ. ಈ ಕಾಯಿಲೆಯಿಂದಾಗಿ ಏನೇನೋ ಕಲ್ಪನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕಾಯಿಲೆ ಬರುವುದಕ್ಕೆ ಇಂಥದ್ದೇ ಕಾರಣ ಎಂಬುದಿಲ್ಲ. ಆದರೆ ಅತಿಯಾದ ಒತ್ತಡ, ಡ್ರಗ್ಸ್, ಮದ್ಯಸೇವನೆ, ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಿಂದಾನೂ ಬರಲಿದೆ. ಹಾಗೇ ಅನುವಂಶಿಕವಾಗಿಯೂ ಬರಬಹುದು. ಈ ಕಾಯಿಲೆ ಬಂದರೆ ಮಾತನಾಡಲು ಹೆದರುತ್ತಾರೆ, ಒಂಟಿಯಾಗಿ ಬದುಕುವುದು, ಜನಸಂದಣಿ ಸ್ಥಳಕ್ಕೆ ಹೋಗಲು ಹೆದರುವುದು, ವಿಚಿತ್ರ ಭಾವನೆಗಳು ಕಾಡುತ್ತವೆ. ಹೀಗೆ ಅನೇಕ ರೀತಿಯ ಸಮಸ್ಯೆಯಿಂದ ಬಳಲುತ್ತಾರೆ. ಈ ಕಾಯಿಲೆ ಇರುವವರಿಗೆ ತನಗೆ ಈ ಕಾಯಿಲೆ ಇದೆ ಅನ್ನೋದು ಅರಿವಿಗೆ ಇರುವುದಿಲ್ಲ. ಅಪರಾಧಗಳ ಮನೋಭಾವ ಕೂಡ ಅವರಲ್ಲಿ ಇರುವುದಿಲ್ಲ. ಪಲ್ಲವಿ ಅವರ ವಿಚಾರದಲ್ಲೂ ಅದೇ ರೀತಿ ಆಗಿದೆ ಎನ್ನಲಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












