Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

 ‘ಕೆಬಿಸಿ’ಯಲ್ಲಿ ಸಸ್ಯಾಹಾರ ಚರ್ಚೆ—ಸ್ಪರ್ಧಿಯ ಮಾತಿಗೆ ಅಮಿತಾಭ್ ಬಚ್ಚನ್ ಅಚ್ಚರಿ

---Advertisement---

ಜನಪ್ರಿಯ ಕ್ವಿಜ್ ಕಾರ್ಯಕ್ರಮ ಕೌನ‌ಬನೆಗಾ ಕರೋಡ್ ಪತಿ ನಲ್ಲಿ ಸಸ್ಯಾಹಾರ ಮತ್ತು ಪ್ರಾಣಿ ಹಿಂಸೆಯ ಕುರಿತು ನಡೆದ ಚರ್ಚೆ ಗಮನಸೆಳೆದಿದೆ. ಸ್ಪರ್ಧಿಯೊಬ್ಬರು ಹಾಲು, ಚರ್ಮ ಹಾಗೂ ರೇಷ್ಮೆ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಹೇಳಿದ ಮಾತು ನಿರೂಪಕ ಅಮಿತಾಭ್ ಬಚ್ಚನ್ ಅವರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಕಾರ್ಯಕ್ರಮದ ವೇಳೆ ಸಿದ್ಧಾರ್ಥ್ ಶರ್ಮ ಎಂಬ ಸ್ಪರ್ಧಿ, ಕಳೆದ ಏಳು ವರ್ಷಗಳಿಂದ ತಾನು ಹಾಲು ಕುಡಿಯುವುದಿಲ್ಲ ಎಂದು ಹೇಳಿದ್ದು, ಹಾಲು ಮೂಲತಃ ಕರುಗಳಿಗೆ ಉದ್ದೇಶಿತವಾದುದು ಎಂದು ಅಭಿಪ್ರಾಯಪಟ್ಟರು. ಹೀಗಾಗಿ ಹಾಲು ಹಾಗೂ ಅದರ ಉತ್ಪನ್ನಗಳನ್ನು ಬಳಸುವುದು ಪ್ರಾಣಿ ಹಿಂಸೆಗೆ ಸಮಾನ ಎಂದು ತಿಳಿಸಿದ್ದಾರೆ.
ಇದಕ್ಕೆ ಪೂರಕವಾಗಿ, ಸಿದ್ಧಾರ್ಥ್ ಅವರ ಪತ್ನಿಯೂ ತಮ್ಮ ಪತಿ ಚರ್ಮದ ಶೂಗಳು ಸೇರಿದಂತೆ ಯಾವುದೇ ಪ್ರಾಣಿ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಹೇಳಿದರು. ಅಲ್ಲದೆ, ರೇಷ್ಮೆ ಹುಳುಗಳನ್ನು ಕೊಂದು ನೂಲು ತೆಗೆಯುವ ಪ್ರಕ್ರಿಯೆ ಇರುವುದರಿಂದ ರೇಷ್ಮೆ ಬಟ್ಟೆಗಳನ್ನೂ ತ್ಯಜಿಸಿದ್ದಾರೆ ಎಂದು ವಿವರಿಸಿದರು.

ಈ ವಿಚಾರಗಳನ್ನು ಕೇಳಿದ ಅಮಿತಾಭ್ ಬಚ್ಚನ್, “ಇದು ನನಗೆ ಹೊಸ ವಿಚಾರ. ನೀವು ನನ್ನ ಕಣ್ಣು ತೆರೆಸಿದ್ದೀರಿ. ಈ ಬಗ್ಗೆ ನಾನು ಎಂದಿಗೂ ಯೋಚಿಸಿರಲಿಲ್ಲ” ಎಂದು ಪ್ರತಿಕ್ರಿಯಿಸಿದರು. ಜೊತೆಗೆ, ಮನೆಗೆ ತೆರಳಿ ಕುಟುಂಬ ಸದಸ್ಯರೊಂದಿಗೆ ಈ ವಿಚಾರ ಹಂಚಿಕೊಳ್ಳುವುದಾಗಿ ಹೇಳಿದರು.ಇದೀಗ 17ನೇ ಸೀಸನ್‌ ನಡೆಸುತ್ತಿರುವ ‘ಕೆಬಿಸಿ’ ಕಾರ್ಯಕ್ರಮವು ವಿವಿಧ ಸಾಮಾಜಿಕ ವಿಷಯಗಳ ಚರ್ಚೆಗೆ ವೇದಿಕೆಯಾಗಿ ಮುಂದುವರಿಯುತ್ತಿರುವುದು ಗಮನಾರ್ಹವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now