ಶಿವಮೊಗ್ಗ: ಒಬ್ಬ ಮುಖ್ಯಮಂತ್ರಿಗಳಾಗಿ ಶಾಸಕರಿಗೆ ದುಡ್ಡು ಕೊಡ್ತೀನಿ ಅಂತ ಹೇಳುವುದು ಸೆಳೆದುಕೊಳ್ಳುವುದಕ್ಕೆ ಅಂತ ಹೇಳಲ್ಲ. 50 ಕೋಟಿ ಕೊಟ್ಟರೆ ಬಗೆಹರಿಯುತ್ತೇನು..? ಸಾಧ್ಯವೇ ಇಲ್ಲ. ಈಗಿನ್ನೂ ಇದು ಶುರುವಾಗಿದೆ ಅಷ್ಟೇ. ಅದೇನೋ ಹೇಳ್ತಾರಲ್ಲ ಇದು ಟ್ರಯಲ್ ಅಷ್ಟೇ ಪಿಕ್ಚರ್ ಅಭಿ ಬಾಕಿಹೇ ಅಂತ ಆ ರೀತಿ ಇದು. ಅವರೇ ಆಗ್ಬೇಕು, ಇವರೇ ಆಗ್ಬೇಕು ಅಂತ ಶುರು ಮಾಡಿದ್ದಾರೆ. ಈಗ ಸ್ವಾಮೀಜಿಗಳು ಬೇರೆ ಎಂಟ್ರಿ ಕೊಟ್ಟಿದ್ದಾರೆ. ಸ್ವಾಮೀಜಿಗಳ ಕೆಲಸ ಬೇಜಾನ್ ಇರುತ್ತೆ. ಅವರ್ಯಾಕೆ ಈ ಕೆಲಸಕ್ಕೆ ಎಂಟ್ರಿಯಾಗಿದ್ದಾರೆ ಅನ್ನೋದು ಗೊತ್ತಾಗ್ತಾ ಇಲ್ಲ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡ್ತಿರುವ ಬಗ್ಗೆ ಮಾತನಾಡಿದ ಈಶ್ವರಪ್ಪ ಅವರು, ಯಾಕ್ ಆಗಬಾರದು. ರಾಜಕೀಯ ಪಕ್ಷಗಳು ಜೀವಂತವಾಗಿರಬೇಕು ಅಂದ್ರೆ ಈ ರೀತಿಯೆಲ್ಲಾ ಆಗ್ತಾ ಇರುತ್ತೆ. ತಪ್ಪು ಅಂತ ನಾನು ಹೇಳುವುದಿಲ್ಲ. ಆದರೆ ಈ ಆಶ್ವಾಸನೆ ಕೊಟ್ಟಿದ್ದಾರಲ್ಲ 50 ಕೋಟಿ ಇದು ಫೇಕ್ ಡಾಕ್ಯುಮೆಂಟ್ ಕ್ರಿಯೇಟ್ ಮಾಡಿದವರ ರೀತಿ ಆಗಬಾರದು. ಇಡೀ ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಂತ ಸಮಯದಲ್ಲಿ ಒಬಿಸಿ, ಎಸ್ಸಿ, ಎಸ್ಟಿ ಎಲ್ಲಾ ಡಿಪಾರ್ಟ್ಮೆಂಟ್ ಗೆ ಕೂಡ ಹಣ ಬಿಡುಗಡೆ ಮಾಡಿ, ಕೆಲಸ ಅರ್ಧಂಬರ್ಧ ಶುರುವಾಗಿ, ಈ ಸರ್ಕಾರ ಚುನಾವಣೆಗೆ ಬಂದಾಗ ಕೆಲಸ ಅರ್ಧಕ್ಕೆ ನಿಂತಿದೆ.

ಆಗ ಇವರು ಮಾಡಬೇಕಾಗಿದ್ದಿದ್ದು ಏನು ಅದನ್ನ ಮುಂದುವರೆಸಬೇಕಿತ್ತು. ಆದರೆ ಇವರೇನು ಮಾಡಿದ್ರು, ಅದನ್ನ ನಿಲ್ಲಿಸಿ ಬಿಡಿ ನಾವು ಅದಕ್ಕೆ ಒಂದು ಪೈಸೆ ಕೊಡಲ್ಲ ಅಂತ. ಸ್ಟೇ ಮಾಡ್ಲಿಲ್ಲ, ಕ್ಯಾನ್ಸಲ್ ಮಾಡಿಬಿಟ್ರು. ಎಸ್ಸಿ, ಎಸ್ಟಿ ಪರವಾವಿರುವಂತ ಸರ್ಕಾರ, ಆ ಹಿಂದುಳಿದವರಿಗೆ, ದಲಿತರಿಗೆ ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟಂತ ಹಣವನ್ನ ಕ್ಯಾನ್ಸಲ್ ಮಾಡಿದ್ರು ಎಂದು ಮತ್ತೊಂದು ಕಡೆ ಆಕ್ರೋಶ ಹೊರ ಹಾಕಿದ್ದಾರೆ.
















