ಮೈಸೂರು: ಸಿದ್ದರಾಮಯ್ಯ ಅವರು ನನ್ನ ಜೊತೆ ಬಂದರೆ ಕಟ್ಟಿಸಿರುವ ಮನೆಗಳನ್ನು ತೋರಿಸುತ್ತೇನೆ ಅಂತ ವಸತಿ ಸಚಿವ ವಿ ಸೋಮಣ್ಣ ಸವಾಲು ಹಾಕಿದ್ದರು. ಅದಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ ಅವರು, ನಾಲ್ಕು ವರ್ಷ ಆಯ್ತು ಇವ್ರ ಕೈನಲ್ಲಿ ಒಂದ್ ಮನೆ ಕೊಡೋದಕ್ಕೆ ಆಗಿಲ್ಲ. ನಾವೂ ಕೊಟ್ಟಿರುವ ಮನೆಗಳನ್ನು ಕಟ್ಟಿಸಿದ್ದೀವಿ ಅಂತ ಹೇಳ್ತಾರೆ. ಸೋಮಣ್ಣ ಹೇಳಿದ್ದಾರೆ. ನಾನು ಕೇಳಿದ್ದು ಅವರು ಕಟ್ಟಿಸಿಕೊಂಡಿರುವ ಮನೆಗಳನ್ನಲ್ಲ ಬಡವರಿಗೆ ಕಟ್ಟಿಸಿಕೊಟ್ಟಿರುವ ಮನೆಗಳನ್ನು ಹೇಳಿರುವುದು ನಾನು ಎಂದು ವ್ಯಂಗ್ಯವಾಡಿದ್ದಾರೆ.
ಬಂದು ನೋಡಿ ಮನೆ ಕಟ್ಟಿರುವುದನ್ನು ಅಂತ ಹೇಳಿದ್ರೆ ಏನು ಹೇಳೋದಕ್ಕೆ ಆಗುತ್ತೆ. ಹೊಸದಾಗಿ ಮಂಜೂರು ಮಾಡಿದ್ದರೆ ಏನಾದರೂ ಹೇಳಬಹುದಿತ್ತು. ನಾಲ್ಕು ವರ್ಷದಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿರುವಂತ ಆರ್ಡರ್ಸ್ ಕೊಡಲಿ. ನಾವೂ ಕಟ್ಟಿಸಿರುವ ಮನೆಗಳನ್ನು ತೋರಿಸುವುದಕ್ಕೆ ನೀನೆ ಬೇಕಾ. ಅಧಿಕಾರಕ್ಕೆ ಬಂದು ಮೂರು ವರ್ಷ ಆಯ್ತಲ್ಲ ಈ ಮೂರು ವರ್ಷದಲ್ಲಿ ಒಂದು ಮನೆ ಮಂಜೂರು ಮಾಡಿದ್ದೀನಿ ಅಂತ ತೋರಿಸಲಿ. ಯಡಿಯೂರಪ್ಪ ಇದ್ದಾಗ ಎರಡು ವರ್ಷ, ಬಸವರಾಜ್ ಇದ್ದಾಗ ಒಂದು ವರ್ಷ ಮನೆ ಮಂಜೂರು ಮಾಡಿರುವುದರ ಆರ್ಡರ್ ಕಾಪಿ ತೋರಿಸಿ ಎಂದಿದ್ದಾರೆ.
ಇದೇ ವೇಳೆ ಬಿಜೆಪಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿದೆಯಲ್ಲ ಅದಕ್ಕೆ ಉತ್ತರ ಕೊಡಿ. ಹಿಂದೆ ನಡೆದಿತ್ತು. ಹಿಂದೆ ನಡೆದಾಗ ನೀವೇನು ಮಾಡ್ತಾ ಇದ್ರಿ. ಈ ರೀತಿ ಪದ ಮಾತಾಡಬಾರದು. ಕೇಂದ್ರದಲ್ಲೂ ನೀವೇ ಅಧಿಕಾರದಲ್ಲಿದ್ದೀರಿ. ಇಲ್ಲು ನೀವೇ ಅಧಿಕಾರದಲ್ಲಿದ್ದೀರ. ಮಾಡ್ಸಿ ಕೆಲಸಗಳನ್ನು. ನಮ್ಮ ತಪ್ಪುಗಳಿದ್ದರೆ ವಿಚಾರಣೆ ನಡೆಸಿ. ನಿಮ್ಮ ತಪ್ಪುಗಳಿದ್ದರೆ ಜೈಲಿಗೆ ಹೋಗಿ ಎಂದಿದ್ದಾರೆ.