Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಹುಲ್ ಜನಪ್ರಿಯತೆ ಸಹಿಸಿಕೊಳ್ಳದ ಬಿಜೆಪಿ :  ಎಚ್.ಆಂಜನೇಯ ಆರೋಪ

Facebook
Twitter
Telegram
WhatsApp

BJP does not tolerate Rahul’s popularity : H. Anjaney’s allegation

ರಾಹುಲ್ ಜನಪ್ರಿಯತೆ ಸಹಿಸಿಕೊಳ್ಳದ ಬಿಜೆಪಿ :  ಎಚ್.ಆಂಜನೇಯ ಆರೋಪ

ಚಿತ್ರದುರ್ಗ,(ಜು.12) : ದೇಶದೆಲ್ಲೆಡೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಆರೋಪಿಸಿದರು.

ಹೊಳಲ್ಕೆರೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

70ರ ದಶಕದಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರು ಅಧಿಕೃತವಾಗಿ ತುರ್ತು ಪರಿಸ್ಥಿತಿ ಘೋಷಿಸಿ, ಬಡವರ ವಿರುದ್ಧ  ಯಾರು ಹಿಂಸೆಗೆ ಪ್ರಚೋಧನೆ ನಡೆಸುತ್ತಿದ್ದರೋ ಅಂತವರನ್ನು ಈ ರೀತಿಯ ಕೆಲಸವನ್ನು ಮಾಡಬಾರದು ಎಂದು ಜೈಲಿಗೆ ಕಳುಹಿಸುತ್ತಿದ್ದರು. ಆದರೀಗ ಪ್ರಧಾನಿ ನರೇಂದ್ರ ಮೋದಿಯರ ಆಡಳಿತದಲ್ಲಿ ಯಾರೂ ಕೂಡ ಅವರ ವಿರುದ್ಧ ಮಾತನಾಡುವ ಆಗಿಲ್ಲ. ಅನಧೀಕೃತ, ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ರಾಹುಲ್ ಗಾಂಧಿಯವರನ್ನು ದೇಶದ ಆಶಾಕಿರಣ, ದೇಶವನ್ನ ಆಳಲು ಎಲ್ಲ ರೀತಿಯ ಅರ್ಹತೆ ಹೊಂದಿದ್ದಾರೆ ಎಂದು ಇಡೀ ನಮ್ಮ ದೇಶದ ಜನರು ಅವರನ್ನು ಮೆಚ್ಚಿಕೊಳ್ಳುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ  ಅವರಿಗೆ ಅತ್ಯಮೂಲ್ಯ ಗೌರವವಿದೆ. ಒಳ್ಳೆಯ ಸಂಸದೀಯ ಪಟುವಾಗಿ ಹೊರಹೊಮ್ಮಿದ್ದಾರೆ. ರಾಹುಲ್ ಗಾಂಧಿಯವರು ಯಾವುದೋ ಒಂದು ಶಬ್ದ ಬಳಕೆ ಮಾಡಿದ್ದಕ್ಕಾಗಿ ಅವರ ವಿರುದ್ಧ ಇಲ್ಲದ ಪಿತೂರಿ ಮಾಡಿ ಅವರ ಜನಪ್ರಿಯತೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದರು.

ರಾಹುಲ್ ಗಾಂಧಿ ಅವರ ತಾತ ಜವಹಾರ್ ಲಾಲ್ ನೆಹರು, ಅವರ ಅಜ್ಜಿ ಇಂದಿರಾಗಾಂಧಿ, ಅವರ ತಂದೆ ರಾಜೀವ್ ಗಾಂಧಿ ತಮ್ಮ ಶ್ರೀಮಂತಿಕೆಯನ್ನೆ ತ್ಯಜಿಸಿ ಈ ದೇಶದ ಪ್ರಧಾನಿಯಾಗಿ ದೇಶದ ಒಳಿತಿಗಾಗಿ ಹೋರಾಟ ಮಾಡಿದ ತ್ಯಾಗಮಹಿ ಕುಟುಂಬದಿಂದ ಬಂದಿರುವ ರಾಹುಲ್ ಗಾಂಧಿಯವರನ್ನು ಪಿತೂರಿ, ಮತ್ತು ಸಂಚನ್ನು ಮಾಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿ ಪಡಿಸುವ ಕೃತ್ಯವನ್ನು  ಎಸಗಿದ್ದಾರೆ. ಆಕೃತ್ಯ ಎಸಗಲು ಪ್ರಚೋಧನೆ ಮಾಡಿದವರು ಬಿಜೆಪಿಯರು ಎಂದು ಕಿಡಿಕಾರಿದರು.

ನ್ಯಾಯಾಲಯಗಳ ತೀರ್ಪನ್ನು ಪ್ರಶ್ನೆ ಮಾಡುವಂತಿಲ್ಲ. ಕೆಳನ್ಯಾಯಾಲಯಗಳು ತದ್ವಿರುದ್ಧವಾಗಿ ತೀರ್ಪು ನೀಡಿದಂತ ಸಮಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಈ ವೇಳೆ ಉಚ್ಛನ್ಯಾಯಾಲಯವೂ ಸಹ ತದ್ವಿರುದ್ಧ ತೀರ್ಪು ನೀಡಿದೆ. ಮುಂದಿನ ದಿನಗಳಲ್ಲಿ ಸರ್ವೋಚ್ಛ ನ್ಯಾಯಾಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಲಿದ್ದಾರೆ. ಅಲ್ಲಿ ಸದಸ್ಯತ್ವ ಅನರ್ಹದ ಬಗ್ಗೆ ವಾದಿ ಮಾಡಿ ಗೆಲ್ಲಬೇಕಿದೆ. ಆದರೆ, ಕೆಳಮಟ್ಟದ ನ್ಯಾಯಾಲಯದ ತೀರ್ಪು ಹೊರ ಬರುತ್ತಿದ್ದಂತೆಯೇ ಲೋಕಸಭೆಯ ಸಚಿವಾಲಯ ಆ ತೀರ್ಪಿನ ಆಧಾರದ ಮೇಲೆ ತರಾತುರಿಯಲ್ಲಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದ್ದಾರೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಮೇಲೆ ಹೊರಿಸಲಾಗಿರುವ ಆಪಾಧನೆ ಇದೊಂದು ಸೇಡಿನ ರಾಜಕಾರಣವಾಗಿದೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವಂತ, ಪ್ರಜಾತಂತ್ರದಲ್ಲಿ ನಂಬಿಕೆ ಇಲ್ಲದೇ ಇರುವ, ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ನಂಬದೇ ಇರುವ ಬಿಜೆಪಿಯ ವಿರುದ್ದ ಮಾತನಾಡುವುದು ಸಹ ಅಕ್ಷಮ್ಯ ಅಪಾರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗಾಗಿ ಬಿಜೆಪಿಯ ಕುತಂತ್ರ ರಾಜಕಾರಣದ ವಿರುದ್ಧ ಎಲ್ಲರು ಜಾಗೃತರಾಗಬೇಕಿದೆ ಎಂದರು.

ಭಾರತ್ ಜೋಡೋ ಯಾತ್ರೆ ಇಡೀ ವಿಶ್ವದಲ್ಲಿಯೇ ಯಾವೊಬ್ಬ ನಾಯಕ ಅಷ್ಟೊಂದು ದೂರದ ಪಾದಯಾತ್ರೆ ಮಾಡಿ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿಲ್ಲ, ಆದರೆ, ಅಂತಹ ಕೆಲಸವನ್ನು ರಾಹುಲ್ ಗಾಂಧಿ ಮಾಡಿದರು. ಈ ವೇಳೆ ಸರ್ವಧರ್ಮದವರನ್ನು ಬೆಸುಗೆ ಮಾಡುವಂತಹ ಸ್ವಾತಂತ್ರ್ಯದ  ಸವಿಯನ್ನು ಎಲ್ಲರು ಅನುಭವಿಸಿದ್ದಾರೆಯೇ ಇಲ್ಲವೇ ಎಂಬುದನ್ನು ವಿಶ್ಲೇಷಣೆ ಮಾಡುವುದು ಯಾವ, ಯಾವ ಭಾಷೆ, ಧರ್ಮಿರು ಅವರ ಸಂಸ್ಕøತಿ ಧರ್ಮದ ಆಚರಣೆ ಮಾಡುತ್ತಿದ್ದಾರೋ ಅಂಬುದನ್ನು ಅರಿಯಲು ಹಾಗೂ ಅವರ ಬದುಕಿನ ಬಗ್ಗೆ ರೈತರು. ಕಾರ್ಮಿಕರು, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಬಗ್ಗೆ ಸಂವಾದ ಮಾಡಿ ಅದರ ಪರಿಹಾರಕ್ಕೆ  ಭವಿಷ್ಯದಲ್ಲಿ ಯೋಚಿಸಬಹುದಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವೆ ಎನ್ನುವಂತಹ ಭರವಸೆಯ ಮಾತುಗಳನ್ನು ಆಡುತ್ತಾ ಪಾದಯಾತ್ರೆ ಮಾಡಿ ಹೊಸ ಭರವಸೆಯನ್ನು  ಮೂಡಿಸಿದರು. ಇದು ಬಿಜೆಪಿ ಪಕ್ಷಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ದೂರಿದರು.

ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಮತ್ತು ಸೇಡಿನ ರಾಜಕೀಯ ಅಂತ್ಯ ಹಾಡಲು, ಪರಸ್ಪರ ಪ್ರೀತಿ, ವಿಶ್ವಾಸ, ಆರೋಗ್ಯಕರವಾದ ರಾಜಕಾರಣ ಮಾಡುವಂತ ಗುಣವನ್ನು ಹೊಂದಿರುವ ವ್ಯಕ್ತಿಗಳಿಗೆ ಬೆಂಬಲ ನೀಡುವ ಕೆಲಸವನ್ನು ಮುಂದಿನ ದಿನಗಳಲ್ಲಿ ಆಗಬೇಕಿದೆ. ಪ್ರಧಾನಿ ಮೋದಿ ಅವರನ್ನು  ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮನೆಗೆ ಕಳುಹಿಸದೇ ಇದ್ದರೆ ದೇಶದಲ್ಲಿ  ಸ್ವಾತಂತ್ರ್ಯ, ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದಿಲ್ಲ ಎಂದು ಹೇಳಿದರು.

ಇದೀಗ ಬಿಜೆಪಿಯವರ ಆಡಳಿತ ವೈಪಲ್ಯವನ್ನು ವಿರೋಧಿಸಬೇಕಿದೆ. ಬೆಲೆ ಏರಿಕೆಯಿಂದಾಗಿ ವಸ್ತುಗಳನ್ನು ಖರೀದಿಸದೇ ಜನಸಾಮಾನ್ಯರು ಕಂಗಲಾಗಿದ್ದಾರೆ. 2014ಕ್ಕಿಂತ ಹಿಂದೆ ಕೈಗೆಟುಕುವ ದರದಲ್ಲಿ  ಅಗತ್ಯ ವಸ್ತುಗಳು ಲಭ್ಯವಾಗುತ್ತಿದ್ದವು. ನಂತರ ಅಧಿಕಾರಕ್ಕೆ  ಬಂದ ಮೋದಿಯವರು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್, ಕಬ್ಬಿಣ ಸೇರಿದಂತೆ ಅಗತ್ಯ ವಸ್ತುಗಳನ್ನು ಬೆಲೆ ಏರಿಕೆ ಮಾಡಿದ್ದಾರೆ. ದೇಶದ ಕಾಳಜಿ ಇದ್ದಿದ್ದರೆ ಜನರ ಮೇಲೆ ಈ ರೀತಿ ಹೊರೆ ಹೊರಿಸುತ್ತಿರಲಿಲ್ಲ. ಬಿಜೆಪಿಗೆ ಜನರ ಕಾಳಜಿ ಇಲ್ಲ. ಬರೀ ಚುನಾವಣೆಯ ಬಗ್ಗೆ ಇದೆ. ಹೀಗಾಗಿ ಜನಜಾಗೃತಿ ಮೂಡಿಸಿ ರಾಜ್ಯದಲ್ಲಿ ಯಾವ ರೀತಿ ಬಿಜೆಪಿಯನ್ನು ಸೋಲಿಸಲಾಗಿದೆಯೋ ಅದೇ ಮಾದರಿಯಲ್ಲಿ  ಲೋಕಸಭಾ ಚುನಾವಣೆಯಲ್ಲಿ  ತಕ್ಕ ಪಾಠ ಕಲಿಸಬೇಕೆಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಟಿ.ಹನುಮಂತಪ್ಪ, ಎಂ.ಪ್ರಕಾಶ್, ನಗರ ಘಟಕದ ಅಧ್ಯಕ್ಷ ಮಜರ್ ಉಲ್ಲಾಖಾನ್,
ಜಿಪಂ ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಮಾಜಿ ಉಪಾಧ್ಯಕ್ಷರಾದ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಬಿ.ಗಂಗಾಧರ್,  ಸದಸ್ಯರಾದ ಎಸ್.ಜೆ.ರಂಗಸ್ವಾಮಿ, ಡಿ.ಕೆ.ಶಿವಮೂರ್ತಿ, ಪಪಂ ಸದಸ್ಯ ಕೆ.ಸಿ.ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!