Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಸರಾ ಉದ್ಘಾಟನೆ ಬಗ್ಗೆ ಹಂಸಲೇಖಾ ಅವರು ಏನುಂದ್ರು..?

---Advertisement---

 

ಬೆಂಗಳೂರು: ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆಯನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರು ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಸಂಬಂಧ ಹಂಸಲೇಖ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದು, ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಹಂಸಲೇಖ ಅವರು, ಈ ಸುದ್ದಿ ಕೇಳಿ ತುಂಬಾ ಖುಷಿ ಆಯ್ತು. ದಸರಾ ಅನ್ನೋದು ನಾಲ್ವಡಿ‌ಕೃಷ್ಣರಾಜ ಒಡೆಯರ್ ಅವರ ಕನಸು. ಉದ್ಘಾಟನೆ ಮಾಡುವುದಕ್ಕೆ ನನ್ನನ್ನು ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಎಲ್ಲಾ ಕಲಾವಿದರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ.

ನಾನು ಕಲಾಪ್ರತಿನಿಧಿಯಾಗಿದ್ದು, ಅವರ ಪರವಾಗಿ ದಸರಾ ದೀಪವನ್ನು ಹಚ್ಚುತ್ತೇನೆ. ಈಗ ದಸರ ಬಗ್ಗೆ ಒಂದು ಹಾಡು ಮಾಡೋಕೆ ಬಹಳ ಉತ್ಸುಕನಾಗಿದ್ದೇನೆ. ಸದ್ಯಕ್ಕೆ ಒಂದು ಸಾಲು ದಸರ ಬಗ್ಗೆ ಹಾಡುತ್ತೇನೆ. ‘ಬದುಕಿದ್ದು ಕನ್ನಡ ಭಿಕ್ಷೆ ಸಮರಸವೇ ನಮ್ಮ ರಕ್ಷೆ’ ಎಂದು ದಸರ ಹಬ್ಬದ ಸಂಭ್ರದಲ್ಲಿರುವ ಹಂಸಲೇಖಾ ಅವರು ಈ ಸಾಲನ್ನು ಹಾಡಿದ್ದಾರೆ.

ನಾನು ದಸರಾ ನೋಡೋದಕ್ಕೆ ಹೋಗ್ತಾ ಇದ್ದೆ. ಆಗ ನಮ್ಮಪ್ಪನ ಹೆಗಲ‌ ಮೇಲೆ ಕೂರುತ್ತಿದ್ದೆ. ಅವೆಲ್ಲ ನನ್ನ ಅದ್ಭುತವಾದ ನೆನಪುಗಳು. ಜಯ ಹೇ ನಾಲ್ವಡಿ ಎಂಬ ಕಾರ್ಯಕ್ರಮ ಮಾಡಬೇಕೆಂಬ ಆಸೆ ಇದೆ. ಅದರಲ್ಲಿ ನನ್ನ ಸಾಹಿತ್ಯ ಸಂಗೀತವಿರುತ್ತದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅನುಮತಿ ಕೊಡಬೇಕು ಅಷ್ಟೇ. ನಾನು ಅನಾರೋಗ್ಯದಲ್ಲಿದ್ದಾಗಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ನನ್ನ ಆರೋಗ್ಯ ವಿಚಾರಿಸಿದ್ರು. ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...