Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಗ್ಗೆ ವಚನಾನಂದ ಸ್ವಾಮೀಜಿ ಹೇಳಿದ್ದೇನು..?

---Advertisement---

ಚಿತ್ರದುರ್ಗ: ಪೀಠದಿಂದ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಛಾಟನೆ ಮಾಡಿದ್ದರ ಬಗ್ಗೆ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಪೀಠ ಇರಲಿ ನಮ್ಮಲ್ಲಿ ಒಂದು ಕ್ಲಾರಿಟಿ ಸಿಕ್ಕಿದೆ ಎಲ್ಲರೂ ಲಿಂಗಾಯತ ಪಂಚಮಸಾಲಿ ಬರೆಸು ಅಂತ ಹೇಳ್ತಾ ಇದ್ದಾರೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಸಹ ಎಲ್ಲರೂ ಲಿಂಗಾಯತ ಪಂಚಮಸಾಲಿ ಅಂತ ಬರೆಸುತ್ತಿರುವುದು ಖುಷಿ ತಂದಿದೆ. ಇನ್ನು ಸ್ವಾಮೀಜಿಗಳ ಉಚ್ಛಾಟನೆ ಮಾಡಿರುವ ಬಗ್ಗೆ ಅದು ಆಂತರಿಕ ವಿಚಾರವಾಗಿರುತ್ತದೆ. ಹಾಗೇ ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇರುವ ಕಾರಣ ಅದರ ಬಗ್ಗೆ ಮಾತನಾಡುವುದು ಸರಿ ಅಲ್ಲ ಅನಿಸುತ್ತದೆ. ನಾವೂ ಹಳ್ಳಿ ಹಳ್ಳಿಗೆ ಓಡಾಟ ನಡೆಸುತ್ತಿರುವ ಕಾರಣ ಸರಿಯಾದ ಮಾಹಿತಿ ಇಲ್ಲ. ಅದರಲ್ಲು ಅದು ಸೂಕ್ಷ್ಮ ವಿಚಾರವಾಗಿದೆ. ಹೀಗಾಗಿ ಅದರ ಬಗ್ಗೆ ನಾವೂ ನೀಡುವ ಹೇಳಿಕೆ ಪ್ರಮುಖವಾಗುತ್ತದೆ, ಸಮಾಜದಲ್ಲಿ ಪರಿಣಾಮ ಬೀರುತ್ತದೆ ಎಂದಿದ್ದಾರೆ.

 

ಜಾತಿಗಣತಿ ಬಗ್ಗೆ ಮಾತನಾಡಿ, ಯಾರೆಲ್ಲಾ ವೀರಶೈವ ಲಿಂಗಾಯತ ಅಂತ ಬರೆಸಿ ಅಂತ ಹೇಳ್ತಾ ಇದ್ದಾರಲ್ಲ, ಅಖಿಲ ಭಾರತ ವೀರಶೈವ ಮಹಾಭಾರತವಾಗಲಿ, ಎಲ್ಲಾ ಮಠಾಧೀಶರು ಧರ್ಮದ ಕಾಲಂನಲ್ಲಿ ಹಿಂದೂ ಅಂತಾನೇ ಬರೆಸಿ ಅಂತಾರೆ. ಕೆಳಗಡೆ ನಿಮ್ಮ ನಿಮ್ಮ ಉಪಜಾತಿಗಳನ್ನ ಬರೆಸಿ ಅಂತಿದ್ದಾರೆ. ಇದು ನಮಗೆ ಬಹಳ ಖುಷಿ ತರಿಸಿದ ವಿಚಾರ.

ಆರಂಭದಿಂದಾನು ಗಟ್ಟಿಯಾಗಿ ಹೇಳಿದ್ದು ಅದನ್ನೇ ಹಿಂದು ಅಂತ. ಹಿಂದುಗಳ ಸಂಖ್ಯೆಯನ್ನ ಕಡಿಮೆ ಮಾಡಬೇಕು ಎಂಬ ಬಹಳ ದೊಡ್ಡ ಷಡ್ಯಂತ್ರವೇ ಇದೆ. ಇದು ರಾಜ್ಯಕ್ಕೆ ಮಾತ್ರ ಸೀಮಿತವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗ್ತಾ ಇದೆ. ಇಡೀ ಜಗತ್ತಲ್ಲಿ ಹಿಂದೂ ವಿಚಾರಧಾರೆಗಳಿಗೆ ಮೊರೆ ಹೋಗ್ತಾ ಇದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...