Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪೊಲೀಸರ ವಿಚಾರಣೆಯ ಬಳಿಕ ಹೇಳಿದ್ದೇನು ಸಂತ್ರಸ್ತೆ..?

---Advertisement---

ಬೆಂಗಳೂರು; ಮಡೆನೂರು ಮನು ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಸಹ ನಟಿ ಇದೀಗ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ್ದಾರೆ. ಪೊಲೀಸರ ಪ್ರಶ್ನೆಗಳಿಗೆ ಸಂತ್ರಸ್ತೆ ಕೂಡ ಉತ್ತರ ನೀಡಿದ್ದಾರೆ. ಬಳಿಕ ಮಾತನಾಡಿದ ಸಂತ್ರಸ್ತೆ, ಅಪ್ಪಣ್ಣ ಅವರ ವಿಚಾರದಲ್ಲಿ ಮನು ಒತ್ತಾಯ ಮಾಡಿ ರೆಕಾರ್ಡ್ ಮಾಡಿಸಿದ್ದ. ಏಪ್ರಿಲ್ ನಲ್ಲಿ ಬ್ಲಾಕ್ ಮೇಲ್ ಮಾಡಿ ಆತ ವಿಡಿಯೋ ಮಾಡಿಸಿದ್ದ. ಅಪ್ಪಣ್ಣ ಜೊತೆ ಕಾರ್ಯಕ್ರಮಗಳಿಗೆ ಹೋಗ್ಬಾರ್ದು ಅಂತಾ ಬೆದರಿಸಿ ಮಾಡಿಸಿದ್ದ. ಅವತ್ತೇ ನಾನು ಅಪ್ಪಣ್ಣ ಹತ್ರ ಕ್ಷಮೆ ಕೇಳಿದ್ದೀನಿ ಎಂದಿದ್ದಾರೆ.

ಅಲೋಕ್ ಎಂಬ ವ್ಯಕ್ತಿಯ ಬಗ್ಗೆ ಮಾತನಾಡಿದ ಸಂತ್ರಸ್ತೆ, ಅಲೋಕ್ ಎಂಬಾತ ಒಬ್ಬ ಸಮಾಜ ಸೇವಕ. ನನ್ನ ಆತನ ಮಧ್ಯೆ ಯಾವುದೇ ಲವ್ ಇರಲಿಲ್ಲ. ಆತನೇ ನನ್ನ ಮತ್ತು ಮನು ವಿಚಾರದಲ್ಲಿ ಸಂಧಾನ ಮಾಡ್ತಿದ್ದ. ಆತನ ಹೆಸರು ನನ್ನ ರಕ್ಷಣೆಗೋಸ್ಕರ ಬಳಸಿದ್ದೀನಿ. ಮನು ನನಗೆ ಸಾಕಷ್ಟು ಬ್ಲಾಕ್ ಮೇಲ್ ಮಾಡಿದ್ದಾನೆ. ಕುಡಿಸಿ ಸಾಕಷ್ಟು ಆಡಿಯೋ ವಿಡಿಯೋ ಮಾಡಿದಾನೆ.

 

ಮೊನ್ನೆ ಶನಿವಾರ ನನಗೆ ಕುಡಿಸಿ, ಖಾಸಗಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ವಿಡಿಯೋ, ಆಡಿಯೋ ಮಾಡ್ಕೊಂಡು ಬೆದರಿಸಿದ್ದಾನೆ. ವೈರಲ್ ಆಗಿರುವ ಆಡಿಯೋ, ವಿಡಿಯೋಗಳನ್ನ ಬಲವಂತವಾಗಿ ಮನು ನೇ ಮಾಡಿಸಿದ್ದು. ಶನಿವಾರ ಕ್ರೂರವಾಗಿ ನಡ್ಕೊಂಡಿದ್ದಕ್ಕೆ ನಾನು ಕಂಪ್ಲೆಂಟ್ ಕೊಟ್ಟಿದೀನಿ. ಸಿನಿಮಾ ವಿಚಾರಕ್ಕೂ ದೂರಿಗೂ ಸಂಬಂಧ ಇಲ್ಲ. ಸಿನಿಮಾ ಟೀಂನವರು ದೂರು ಕೊಡದಂತೆ ಮನವಿ ಮಾಡ್ಕೊಂಡ್ರು. ಆದ್ರೆ ಮನು ನನಗೆ ಕೊಟ್ಟಿರುವ ಹಿಂಸೆಯಿಂದ ನಾನು ದೂರು ಕೊಟ್ಟೆ ಎಂದು ಅನ್ನಪೂರ್ಣೇಶ್ವರಿ ನಗರ ಠಾಣೆ ಬಳಿ ಸಂತ್ರಸ್ಥೆ ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment