ಕಲಬುರಗಿ: ಎಲ್ಲಿಯ ಚಾಮರಾಜನಗರ ಎಲ್ಲಿಯ ಕಲಬುರಗಿ. ಅಲ್ಲಿಂದ ಇಲ್ಲಿಗೆ ಬಂದ ಮುಸ್ಲಿಂ ಯುವಕ ಹಿಂದೂ ಮಠದಲ್ಲಿ ಇಷ್ಟು ವರ್ಷಗಳ ಕಾಲ ಸ್ವಾಮೀಜಿಯಾಗಿದ್ದಿದ್ದೇ ರೋಚಕ. ಆತನ ಬಗ್ಗೆ ಆತನ ತಾಯಿ ರೆಹಾನ ಬೇಗಂ ಮಾತನಾಡಿದ್ದಾರೆ. ನಿಸ್ಸಾರ್ ಚಿಕ್ಕವನಿದ್ದಾಗಲೇ ಲಿಂಗವನ್ನು ತಂದಿಟ್ಟು ಪೂಜೆ ಮಾಡ್ತಾ ಇದ್ದ.ಅದಕ್ಕೆ ಮನೆಯಲ್ಲಿ ಆಕ್ಷೇಪ ಮಾಡಿದ್ದಕ್ಕೆ ಮನೆ ಬಿಟ್ಟು ಹೋದ ಎಂದಿದ್ದಾರೆ.
5ನೇ ಕ್ಲಾಸ್ ತನಕ ಇಲ್ಲಿಯೇ ಓದುತ್ತಾ ಇದ್ದ. ಆಗಿಂದ ಮನೆಗೆ ಲಿಂಗ ತಂದು ಪೂಜೆ ಮಾಡೋದಕ್ಕೆ ಶುರು ಮಾಡಿದ್ದ. ನಾವೂ ಮುಸ್ಲಿಂ ಇದ್ದೀವಿ. ಹೀಗೆ ಲಿಂಗ ತಂದು ಪೂಜೆ ಮಾಡ್ಬೇಡಪ್ಪ ಅಂತ ಹೇಳಿದ್ವಿ. ಅದಕ್ಕೆ ಆಗ ಮನೆಯಿಂದ ಹೊರಟೆ ಹೋದವಾ, ಇಲ್ಲಿವರೆಗೂ ಬಂದಿಲ್ಲ. ಬಸವ ಕಲ್ಯಾಣಕ್ಕೆ ಹೋಗಿನೆ ಏಳೆಂಟು ವರ್ಷ ಆಯ್ತು. ನಮ್ಗೆ ಫೋನ್ ಅಂತೇನು ಮಾಡಲ್ಲ ಅವ. ನಾನೇ ಒಮ್ಮೆ ಹೋಗಿದ್ದೇ ರೀ. ಖಾವಿ ಹಾಕಿ, ದೀಕ್ಷೆ ಪಡೆದು ಮಠದಲ್ಲಿ ಇದ್ದ. ಅದನ್ನ ನೋಡಿದ ಕೂಡಲೇ ನಾನೇ ವಾಪಾಸ್ ಬಂದೆ. ಚಾಮರಾಜನಗರದ ಮಠ ಸೇರಿಕೊಂಡ ಮೇಲೆ ಮನೆಗೂ ಬಂದಿಲ್ಲ ಏನು ಹೇಳಿಲ್ಲ ಎಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಈ ವಿಚಾರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಚಾಮರಾಜನಗರ ಜಿಲ್ಲೆಯ ಚೌಡಹಳ್ಳಿಯ ಮಠದಲ್ಲಿ ಸುಮಾರು ವರ್ಷಗಳಿಂದ ಹಿಂದೂ ಹೆಸರೇಳಿಕೊಂಡೆ ಸ್ವಾಮೀಜಿಯಾಗಿದ್ದರು. ಆದರೆ ಇತ್ತೀಚೆಗೆ ಆತನ ರಿಯಲ್ ಡಾಕ್ಯುಮೆಂಟ್ ಸಿಕ್ಕಿತ್ತು. ಬಳಿಕ ಆತನ ಒಂದೊಂದೆ ರಾದ್ಧಾಂತಗಳು ಬೆಳಕಿಗೆ ಬರ್ತಿವೆ. ಈ ಮೊಹಮ್ಮದ್ ನಿಸಾರ್ ಕಲಬುರಗಿ ಜಿಲ್ಲೆಯವನಾಗಿದ್ದು, ಆತನ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












