Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟಿಕೆಟ್ ಬಗ್ಗೆ ಸಮರ್ಥ್ ಶಾಮನೂರು ಹೇಳಿದ್ದೇನು..?

---Advertisement---

ಸುದ್ದಿಒನ್, ದಾವಣಗೆರೆ, ಮಾರ್ಚ್. 19 : ತಾತನ ನಿಧನದ ಬಳಿಕ ಮೊಮ್ಮಗ ಕೂಡ ರಾಜಕಾರಣಕ್ಕೆ ಎಂಟ್ರಿ ಕೊಡ್ತಾ ಇದ್ದಾರೆ. ಅವರೇ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಕುಡಿ ಸಮರ್ಥ್ ಶಾಮನೂರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಾತನಿಂದ ತೆರವಾದ ಕ್ಷೇತ್ರಕ್ಕೆ ಮೊಮ್ಮಗನೇ ಸ್ಪರ್ಧೆಗೆ ಇಳಿದಿದ್ದಾರೆ. ಆದರೆ ಕಾಂಗ್ರೆಸ್ ಟಿಕೆಟ್ ಯಾರಿಗೆ ಅನ್ನೋದನ್ನ ಇನ್ನು ತೀರ್ಮಾನಿಸಿಲ್ಲ. ಆದರೂ ಯುಗಾದಿಯಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ಸಮರ್ಥ್ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಾ, ಇವತ್ತು ಬಹಳ ಒಳ್ಳೆಯ ದಿನ. ನಮ್ಮ ಪಕ್ಷದ ಕಾರ್ಯಕರ್ತರು, ಯುವಕರು, ಎಲ್ಲಾ ವರ್ಗದ ನಾಗರಿಕರ ಆಶೀರ್ವಾದ ಹಾಗೂ ಬೆಂಬಲ ಪಡೆದುಕೊಂಡು, ನಮ್ಮ ಅಜ್ಜಾರು ಶಾಮನೂರು ಶಿವಶಂಕರಪ್ಪ ಅವರ, ನಮ್ಮ ನಗರ ದೇವತೆ ದುಗ್ಗಮ್ಮನನ್ನ ಮನಸ್ಸಲ್ಲಿಟ್ಟುಕೊಂಡು ಇವತ್ತು ನಾಮಿನೇಷನ್ ಫೈಲ್ ಮಾಡ್ತಾ ಇದ್ದೀನಿ ಎಂದಿದ್ದಾರೆ.

ಇದೇ ವೇಳೆ ಬೀ ಫಾರಂ ಇನ್ನು ಸಿಕ್ಕಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಎಂಥಾ ಪ್ರಶ್ನೆ ಕೇಳ್ತಿದ್ದೀರಿ ನೀವು. ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಓದಿದ್ದೀರಾ. ಕಾಂಗ್ರೆಸ್ ಕಟ್ಟಿರೋದು ಅವರು ಇಲ್ಲಿ. ಇವತ್ತಲ್ಲ ನಾಳೆ ಆಗೇ ಆಗುತ್ತೆ. ನಮ್ಮ ಪಾರ್ಟಿ ಕಾರ್ಯಕರ್ತರಿಗೂ ನಂಬಿಕೆ ಇದೆ ನಮಗೆ ಸಿಗುತ್ತೆ ಅಂತ. ಒಳ್ಳೆ ದಿನ ಅಂತ ನಾಮಿನೇಷನ್ ಸಲ್ಲಿಸಿದ್ದೇವೆ. ನಮ್ಮ ತಾತಾರು ಏನೆಲ್ಲಾ ಕೆಲಸಗಳನ್ನ ಮಾಡಿದ್ರು ಅವುಗಳನ್ನ ಮುಂದುವರೆಸಿಕೊಂಡು ಹೋಗ್ತೇವೆ. ಎಲ್ಲರೂ ಶಾಮನೂರು ಶಿವಶಂಕರಪ್ಪ ಅವರನ್ನ ಅಪ್ಪಾಜಿ ಅಂತಾನೇ ಕರೆಯೋದು. ದಾವಣಗೆರೆಯಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಕೂಡ. ನನ್ನನ್ನ ನೋಡಿದಾಗ ಅಜ್ಜಾರನ್ನ ನೆನಪಿಸಿಕೊಳ್ತಾರೆ. ಅಜ್ಜಾರು ಯಾವ ದಾರಿಯಲ್ಲಿ ನಡೆದಿದ್ದಾರೋ ಅದನ್ನು ಫಾಲೋ ಮಾಡ್ತೀವಿ. ಎಲ್ಲರ ಜೊತೆಗೆ ನಾವೂ ಹುಟ್ಟಿ ಬೆಳೆದಿದ್ದೀವಿ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now