ವಿಜಯಪುರ; ಇವತ್ತು ಇಡೀ ವಿಶ್ವವೇ ಕೇಳ್ತಾ ಇದೆ. ಪಹಲ್ಗಾಮ್ ಮೇಲೆ ಆಗಿರುವಂತ ದಾಳಿಯನ್ನ ಖಂಡಿಸ್ತಾ ಇದಾರೆ. ಪ್ರವಾಸಕ್ಕೆ ಹೋದವರನ್ನ ಏನು ಹತ್ತಿಕ್ಕಿದ್ದಾರೆ ಅದು ಅತ್ಯಂತ ಹೀನಾಯವಾದ ಕೃತ್ಯ ಹಾಗೂ ಹೇಡಿತನದ ಕೃತ್ಯವಾಗಿದೆ. ಎಲ್ಲರೂ ಕೂಡ ಖಂಡಿಸ್ತೀವಿ. ಅವರನ್ನ ನಾವೂ ಹುಡುಕಾಡಿ ತೆಗೆದು ಅವರನ್ನ ಕೊಲ್ಲಬೇಕಿದೆ. ಅದರಲ್ಲಿ ಎರಡು ಮಾತಿಲ್ಲ. ನಾನು ಅವತ್ತು ಕೂಡ ಇದನ್ನೇ ಹೇಳಿದ್ದಿದ್ದು. ಪಾಕಿಸ್ತಾನವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಮೂಲೆ ಗುಂಪು ಮಾಡಬೇಕು. ಪಾಕಿಸ್ತಾನದ ಜೊತೆಗಿರುವ ಸಂಬಂಧವನ್ನ ಎಲ್ಲಾ ರಾಷ್ಟ್ರಗಳು ಕಡಿದುಕೊಳ್ಳಬೇಕು. ಯಾರೂ ಕೂಡ ಪಾಕಿಸ್ತಾನಕ್ಕೆ ಸಹಾಯ ಮಾಡಬಾರದು ಎಂದು ಸಚಿವ ಎಂ.ಬಿ.ಪಾಟೀಲ್ ಹೌಹಾರಿದ್ದಾರೆ.
ಇಲ್ಲಿ ನಾವೂ ಒಂದು ಭಾಗ. ಅಲ್ಲಿ ಅನೇಕ ಮುಸಲ್ಮಾನರು ನಮ್ಮವರ ಜೀವವನ್ನ ಉಳಿಸಿದ್ದಾರೆ. ಅಲ್ಲಿ ಇತ್ತೀಚೆಗೆ ವ್ಯಾಪಾರ ಅಭಿವೃದ್ಧಿಯಾಗಿತ್ತು. ಅದನ್ನ ಈ ಉಗ್ರರು ಬಂದು ಹಾಳು ಮಾಡಿದ್ರು. ಸಿಎಂ ಕೂಡ ಕಣ್ಣೀರು ಹಾಕಿದ್ರು. ನಾವೂ ರಕ್ಷಣೆ ಮಾಡೋದಕ್ಕೆ ಆಗಿಲ್ಲ ಅಂತಾನು ಬೇಸರ ಮಾಡಿಕೊಂಡರು. ಕಾಶ್ಮೀರದ ಸ್ಥಳೀಯರು ಕೂಡ ಭಾರತದ ಜೊತೆಗೆ ಇದಾರೆ. ಅವರೆಲ್ಲರ ಭಾವನೆ ಏನಾಗಿತ್ತು ಅಂದ್ರೆ ಅಲ್ಲಿ ಶಾಂತಿ ನೆಲೆಸಬೇಜು, ಪ್ರವಾಸ ಮತ್ತೆ ಅಭಿವೃದ್ಧಿಯಾಗಬೇಕು ಎಂಬುದು. ಸಹಬಾಳ್ವೆ ಮಾಡಬೇಕು ಎಂದು ಕಾಶ್ಮೀರದ ಜನತೆ ಬಯಸುತ್ತಿದ್ದಾರೆ.
ಈ ಉಗ್ರರಿಗೆ ಟೂರಿಸಂ ಡಿಸ್ಟರ್ಬ್ ಮಾಡಬೇಕು, ಎಕಾನಮಿ ಮೇಲೆ ಹೊಡೆತ ಬೀಳಬೇಕು ಎಂಬುದಿತ್ತು. ಎಲ್ಲಾ ಜಾತಿ, ಧರ್ಮದವರು ಇದನ್ನ ಖಂಡನೆ ಮಾಡಿದ್ದಾರೆ. ಕಾಶ್ಮೀರದಲ್ಲಿರುವವರು ಎಲ್ಲರು ಭಾರತೀಯರು. ಚೈನಾದವರು ಇವತ್ತು ಏರ್ ಫೋರ್ಸ್ ಕೊಡ್ತಾ ಇದಾರೆ. ವಿಮಾನ ಕೊಡ್ತಾ ಇದಾರೆ ಅಂತ. ಅವರೆಲ್ಲ ಮನವರಿಕೆ ಮಾಡಿಕೊಳ್ಳಬೇಕು. ಟೆರರಿಸಂನ ಸಪೋರ್ಟ್ ಮಾಡಬಾರದು ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















