Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಎಂ ಗೊಂದಲದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು..?

---Advertisement---

ನವದೆಹಲಿ: ಸಿಎಂ ಖುರ್ಚಿ ಕದನ ದೆಹಲಿ ತಲುಪಿದ್ದು ಆಗಿದೆ, ರಾಜ್ಯದ ಹಲವು ನಾಯಕರು ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ವರದಿಯನ್ನು ಒಪ್ಪಿಸಿ ಆಗಿದೆ. ಆದರೂ ಸಿಎಂ ಸ್ಥಾನದ ಗೊಂದಲ ಇನ್ನು ಬಗೆಹರಿದಂತೆ ಕಾಣಿಸುತ್ತಿಲ್ಲ. ಇದೀಗ ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರೇ ಉತ್ತರ ನೀಡಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಆ ಬಗ್ಗೆ ಇಲ್ಲಿ ಹೇಳುವಂತಹ ವಿಷಯವಲ್ಲ. ಮತ್ತು ಬಹಿರಂಗವಾಗಿ ಮಾತನಾಡುವಂತಹ ಸಬ್ಜೆಕ್ಟ್ ಕೂಡ ಅಲ್ಲ. ಇಲ್ಲಿಗೆ ಬಂದಿದ್ದೇ ಬೇರೆ ವಿಚಾರಕ್ಕೆ ನಿಮ್ಮೆಲ್ಲರಿಗೂ ಗೊತ್ತಿದೆ, ಅಧ್ಯಕ್ಷರು ಎಲ್ಲಿಯೂ ಹೋಗಿ ಚರ್ಚೆ ಮಾಡಲ್ಲ. ಮೀಟಿಂಗ್ ಅಂತ ಬಂದಾಗ ಅಲ್ಲಿ ಚರ್ಚೆ ಮಾಡ್ತೇವೆ ಎಂದಿದ್ದಾರೆ.

ಸಿಎಂ ಖುರ್ಚಿ ಕದನ ಹೈಕಮಾಂಡ್ ನಾಯಕರ ತನಕವೇನೋ ತಲುಪಿದೆ, ಆದರೆ ಅಲ್ಲಿಂದ ಇನ್ನು ಕೂಡ ಸರಿಯಾದ ಉತ್ತರ ಸಿಗುತ್ತಿಲ್ಲ. ಅತ್ತ ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ ಅಂತ ಸಿದ್ದರಾಮಯ್ಯ ಅವರು ಒಮ್ಮೆ ಹೇಳಿದ್ರೆ, ಇನ್ನೊಮ್ಮೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎನ್ನುತ್ತಿದ್ದಾರೆ‌. ಖುರ್ಚಿಗಾಗಿ‌ ನಡೆಯುತ್ತಿರುವ ಸರ್ಕಸ್ ಇಷ್ಟು ದೊಡ್ಡ ಮಟ್ಟಕ್ಕೆ ಆಗ್ತಾ ಇದ್ದರು, ಹೈಕಮಾಂಡ್ ಮಾತ್ರ ಯಾಕೆ ಸೈಲೆಂಟ್ ಆಗಿದೆ ಅನ್ನೋದು ಯಾರಿಗೂ ಗೊತ್ತಾಗ್ತಾ ಇಲ್ಲ. ಅತ್ತ ಡಿಕೆ ಶಿವಕುಮಾರ್ ಇನ್ನಿಲ್ಲದ ಸಾಹಸ ಪಡುತ್ತಿದ್ದಾರೆ. ಆದರೆ ಮಾಧ್ಯಮಗಳ ಮುಂದೆ ಸಿದ್ದರಾಮಯ್ಯ ಅವರನ್ನು ಬಿಟ್ಟುಕೊಡುತ್ತಿಲ್ಲ, ಒಗ್ಗಟ್ಟಿನಿಂದ ಮಾತಾಡ್ತಾ ಇದ್ದಾರೆ. ಹೀಗಿರುವಾಗ ಹೈಕಮಾಂಡ್ ಬೇಗ ಮಧ್ಯಪ್ರವೇಶ ಮಾಡದೆ ಹೋದರೆ ಹೇಗೆ ಎಂದು ಅಲ್ಲಿರುವವರೇ ಗೊಂದಲದಲ್ಲಿದ್ದಾರೆ. ಹೈಕಮಾಂಡ್ ಏನು ಹೇಳುತ್ತೆ ಎಂಬ ಉತ್ತರಕ್ಕಾಗಿಯೂ ಜನ ಕಾಯ್ತಾ ಇದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...