ಬಳ್ಳಾರಿ: ಕೊರೊನಾ ಹೆಚ್ಚಳದ ಹಿನ್ನೆಲೆ ಒಂದಷ್ಟು ಜಿಲ್ಲೆಗಳಲ್ಲಿ ಒಂದಷ್ಟು ನಿರ್ಬಂಧ ಕೂಡ ಹೇರಲಾಗಿತ್ತು. ಅದರಲ್ಲಿ ಬಳ್ಳಾರಿಯ ಹಂಪಿ ವೀಕ್ಷಣೆಗೂ ನಿರ್ಬಂಧ ಹೇರಲಾಗಿತ್ತು. ಕಳೆದ ತಿಂಗಳ 14 ರಿಂದಲೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿತ್ತು. ಆದ್ರೆ ಈಗ ಎಲ್ಲದಕ್ಕೂ ಅನುಮತಿ ಸಿಕ್ಕಿದೆ.
ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿ ಅಲ್ಲಿನ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ. ನಿರ್ಬಂಧವಿದ್ದಾಗ ವೀಕ್ಷಣೆಗೆ ಬರುತ್ತಿದ್ದ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಇತ್ತು. ಇದೀಗ ಮುಕ್ತ ಅವಕಾಶದಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ.
ಇನ್ನು ಕೊರೊನಾ ಮಹಾಮಾರಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಪ್ರವಾಸೋದ್ಯಮಕ್ಕೂ ಸಾಕಷ್ಟು ಹೊಡೆತ ಬಿದ್ದಿದೆ. ಜನ ಬರ್ತಾ ಇಲ್ಲ, ಜೊತೆಗೂ ಪ್ರವಾಸಕ್ಕೂ ಅಷ್ಟಾಗಿ ಹೆಚ್ಚು ಅನುಮತಿಯಿಲ್ಲ. ಸದ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗ್ತಾ ಇದೆ. ಹೀಗಾಗಿ ಎಲ್ಲಾ ಕ್ಷೇತ್ರಗಳು ಮೊದಲಿನಂತೆ ನಡೆಯುತ್ತವೆ ಎಂಬ ಆಶಾಭಾವ ಎಲ್ಲರಲ್ಲಿಯೂ ಇದೆ.