Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾವೂ ಸ್ವಾತಂತ್ರ್ಯ ಪಕ್ಷ ಕಟ್ಟಿ, ನಾನೇ ಮುಖ್ಯಮಂತ್ರಿ ಆಗ್ತೀನಿ : ಯತ್ನಾಳ್

---Advertisement---

ದೆಹಲಿ: ನಾನು ಎಲ್ಲಾದ್ರೂ, ಯಾರಾದ್ರಾ ಮನೆಗೆ ಹೋಗಿ ನನ್ನ ಬಿಜೆಪಿಗೆ ತಗೋಬೇಕು ಅಂತ ಹೋಗಿಲ್ಲ. ನಾನು ಒಪ್ಪಲ್ಲ. ನಾನೇನು ಅಲ್ಲಿ ಕೈ ಕಾಲು ಹಿಡಿದು ಪಾರ್ಟಿಗೆ ಸೇರುವ ಬಹಳ ಅವಶ್ಯಕತೆ ಇಲ್ಲ. ನಾನು ಬಂದಿದ್ದು, ಹಳೆ ಮಿತ್ರರಿಗೆ ಕಾರ್ಡ್ ಕೊಡೋಕೆ ಅಂತ ಶಾಸಕ ಯತ್ನಾಳ್ ಹೇಳಿದ್ದಾರೆ. ಅಷ್ಟೇ ಅಲ್ಲ‌ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿದ್ದಾರೆ.

ನಾವೂ ಸ್ವಾಭಿಮಾನದಿಂದ ಬದುಕೋರು. ಈ ಭ್ರಷ್ಟ ನೇತೃತ್ವದ ಕುಟುಂಬವನ್ನ ಒಪ್ಪೋದಿಲ್ಲ. ಒಬ್ಬ ವಿಜಯೇಂದ್ರ ಅಲ್ಲ, ರಾಘವೇಂದ್ರ ಇದಾನೆ, ಯಡಿಯೂರಪ್ಪ ಇದಾನೆ ಮತ್ ಇನ್ನು 3-4 ಇದಾವೆ ಮನೆಯಾಗೆ. ಅವು ಯಾವು ಇರೋ ತನಕ ಬಿಜೆಪಿ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿಗೆ ತಗೋಳಿ ಅಂತ ಹೇಳುವುದಿಲ್ಲ. ಅವಕಾಶಕ್ಕಾಗಿ ನಾವ್ ಯಾಕೆ ಕಾಯ್ಕೋತಾ ಕೂರಬೇಕು. ಅಷ್ಟರಲ್ಲಿ ಪ್ರಾದೇಶಿಕ ಪಕ್ಷ ಮಾಡಿರ್ತೀವಿ. ಕಾಯ್ಕೊಂಡು ಕೂರುವಂತ ಹುಚ್ಚ ನಾನಲ್ಲ.

ಅವರು ಕರೀತಾರೇನೋ, ಕಾಯ್ತಾರೇನೊ ಅಂತೆಲ್ಲಾ ನೋಡುತ್ತಾ ಕೂರೋನ್ ಅಲ್ಲ. ಪಶ್ಚಿಮ ಬಂಗಾಳದ ಚುನಾವಣೆ ಆದ್ಮೇಲೆ ಕರೆಯಬಹುದು, ಬಿಹಾರ ಚುನಾವಣೆ ಆದ್ಮೇಲೆ ಕರೆಯಬಹುದು, ಉತ್ತರ ಪ್ರದೇಶ ಚುನಾವಣೆ ಆದ್ಮೇಲೆ ಕರೆಯಬಹುದು ಅಂತ. ಯಾವ ಚುನಾವಣೆ ಆದ್ಮೇಲು ಕರೆಯೋದಿಲ್ಲ. ನಮ್ಮದು ಜೆಸಿಬಿ ಇದೆಯಲ್ಲ. ಅದನ್ನ ಕಟ್ಟಬೇಕಾದ ಪರಿಸ್ಥಿತಿ ಬಂದ್ರೆ ಕಟ್ತೀವಿ ಎಂಬ ಮಾತನ್ನ ಹೇಳಿದ್ದಾರೆ.

ನಮ್ಮ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೆ. ಯಾರ್ ಬೇಕಾದ್ರೆ ಏನಾದ್ರೂ ಹೇಳಲಿ, ಯಾವ ಸರ್ವೇ ಏನಾದ್ರೂ ಹೇಳಲಿ. ಕರ್ನಾಟಕದಲ್ಲಿ ಬರೋದು ನಮ್ಮ ಪಕ್ಷನೇ, ನಾನೇ ಮುಖ್ಯಮಂತ್ರಿ. ಅದರಲ್ಲೇನು ಡೌಟ್ ಇಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...