Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

KRS ಡ್ಯಾಂ ಕಟ್ಟಿದ್ದು ಟಿಪ್ಪು ಸುಲ್ತಾನ್ ಅವರ..? ಅಲ್ಲಿನ ಶಾಸನಗಳು ಹೇಳ್ತಿರೋದೇನು..?

---Advertisement---

ಮಂಡ್ಯ: KRS ಡ್ಯಾಂಗೆ ಟಿಪ್ಪು ಅಡಿಗಲ್ಲು ಹಾಕಿದ್ರು ಎಂಬ ಹೇಳಿಕೆ ಇದೀಗ ಎಲ್ಲೆಡೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ಮಹದೇವಪ್ಪ ಅವರು ಈ ಸಂಬಂಧ ಹೇಳಿಕೆಯೊಂದನ್ನ ನೀಡಿದ್ದರು. ಅಲ್ಲಿನ ಹೆಬ್ಬಾಗಿಲಲ್ಲಿಯೇ ಇದಕ್ಕೆ ಸಂಬಂಧಿಸಿದಂತ ಶಾಸನವನ್ನ ಬರೆಯಲಾಗಿದೆ ಎಂದೇ ಉಲ್ಲೇಖ ಮಾಡಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್ ಚಾನೆಲ್ ಶಾಸನಗಳನ್ನೆಲ್ಲ ತೋರಿಸುವ ವಾಕ್ ಥ್ರೂ ಮಾಡಿದ್ದು, ಅದರಲ್ಲಿ ಒಂದಷ್ಟು ಮಾಹಿತಿಯನ್ನ ನೀಡಿದ್ದಾರೆ. ಆ ಶಾಸನಲ್ಲಿ 1794ನೇ ಇಸವಿಯಲ್ಲಿ ಅಣೆಕಟ್ಟೆಯನ್ನ ಕಟ್ಟೋದಕ್ಕೆ ಮುಂದಾಗಿದ್ದರಂತೆ. ಬಳಿಕ 1911ನೇ ಇಸವಿಯಲ್ಲಿ ಈ ಅಣೆಕಟ್ಟು ಕಟ್ಟುವುದಕ್ಕೆ ಪ್ರಾರಂಭವಾಯ್ತು ಅನ್ನೋದು ಅಲ್ಲಿರುವ ಶಾಸನಗಳಲ್ಲಿ ಬರೆಯಲಾಗಿದೆ. 1912ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ಇದಕ್ಕೆ ಇಂಜಿನಿಯರಿಂಗ್ ವರ್ಕ್ ಶುರು ಮಾಡಿದ್ದಾರೆ. ಕೆಆರ್ಎಸ್ ಡ್ಯಾಂ ಕಟ್ಟಿದ್ದು ಸರ್ ಎಂ ವಿಶ್ವೇಶ್ವರಯ್ಯ ಅವರೇ ಕಟ್ಟಿರುವುದು ಎಂಬುದು ಇತಿಹಾಸದಲ್ಲಿಯೇ ದಾಖಲಾಗಿದೆ. ಹಾಗಾದ್ರೆ ಟಿಪ್ಪು ಸುಲ್ತಾನ್ ಅವರ ಹೆಸರಿರುವ ಶಾಸನ ಅಲ್ಲಿರೋದ್ಯಾಕೆ ಎಂಬ ಚರ್ಚೆಯು ಶುರುವಾಗಿದೆ.

ಈ ಬಗ್ಗೆ ತಿಳಿದಿರುವ ಒಂದಷ್ಟು ತಜ್ಞರು ಹೇಳೋದು ಬೇರೆ. ಟಿಪ್ಪು ಸುಲ್ತಾನ್ ಅವರು ಕೂಡ ಅಣೆಕಟ್ಟೆ ಕಟ್ಟೋದಕ್ಕೆ ಎಲ್ಲಾ ತಯಾರಿ ನಡೆಸಿದ್ದರು. ಆದರೆ ಯಾವ ಅಣೆ ಕಟ್ಟೆ ಅನ್ನುವುದರ ಮಾಹಿತಿ ಗೊತ್ತಿಲ್ಲ. ಈ ಶಾಸನವನ್ನ ರಾಜರು ತಂದು ಅಲ್ಲಿ ಇರಿಸಿದ್ದಾರೆ ಅಷ್ಟೇ. ಆದರೆ ಕೆಆರ್ಎಸ್ ಡ್ಯಾಂ ಕಟ್ಟಿದ್ದಕ್ಕೂ ಟಿಪ್ಪುಗೂ ಸಂಬಂಧವಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಸದ್ಯಕ್ಕೆ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಚರ್ಚೆಗೆ ಗ್ರಾಸವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment