Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಾಂಜಾ ಮತ್ತಿಂದ ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿ ಕೊಲೆಯಾಯ್ತಾ..?

---Advertisement---

ಶಿವಮೊಗ್ಗ: ವಿದ್ಯಾರ್ಥಿಗಳೇ ಹೊಡೆದಾಡಿಕೊಂಡ ಪರಿಣಾಮ ಎಸ್ಎಸ್ಎಲ್ಸಿ ಓದುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯ ಪ್ರಾಣವೇ ಹೋಗಿದೆ. ಅದಕ್ಕೆಲ್ಲ ಗಾಂಜಾ ಮತ್ತೇ ಕಾರಣ ಎಂಬ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗ್ತಾ ಇದೆ. ಈ ಸಂಬಂಧ ಶಿವಮೊಗ್ಗದ ಎಸ್ಪಿ ನಿಖಿಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಸೂಳೇಬೈಲು ಎಂಬ ಜಾಗದಲ್ಲಿ ನಿನ್ನೆ ರಾತ್ರಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆಯಾಗಿ, ಅವನು‌ ಮರಣವನ್ನು ಹೊಂದಿದ್ದ. ಈ ಅಪ್ರಾಪ್ತನನ್ನು ಏಳು ಜನ ಕೈಯಲ್ಲಿ ಗುದ್ದಿದ್ದರು ಎಂದು ಪ್ರಥಮ ಮಾಹಿತಿ ದೊರಕಿತ್ತು. ಇದಕ್ಕೆ ಮೂಲ ಕಾರಣ, ಒಂದು ಕ್ರಿಕೆಟ್ ಮ್ಯಾಚ್ ನಲ್ಲಿ ಆಗಿದ್ದಂತ ವಾಗ್ವಾದ. ಆ ವಾಗ್ವಾದದ ಮೇರೆಗೇನೆ ಮತ್ತೊಬ್ಬ ಬಾಲಕನನ್ನು ಕೇಳಲು ಬಂದಾಗ, ಮೃತ ಬಾಲಕ ಬಿಡಿಸುವುದಕ್ಕೆ ಹೋಗಿದ್ದಾನೆ. ಆತನಿಗೂ ಜೋರಾಗಿ ಏಟು ಬಿದ್ದ ಕಾರಣ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಆಗ ಆತನನ್ನು ಆಸ್ಪತ್ರೆಗೆ ಸೇರಿಸಿದಾಗ ನಿಧನ ಅನ್ನೋದು ಗೊತ್ತಾಗಿದೆ. ಹೀಗಾಗಿ ರಾತ್ರಿಯೇ ಏಳು ಜನ ಆರೋಪಿಗಳನ್ನ ಅರೆಸ್ಟ್ ಮಾಡಿದ್ದೀವಿ.

ಈ ಸಂಬಂಧ ವಿಚಾರಣೆ ಕೂಡ ನಡೆಸಲಾಗುತ್ತದೆ. ಮೆಡಿಕಲ್ ಟೆಸ್ಟ್ ಗೆ ತಕ್ಷಣವೇ ಕಳುಹಿಸಿ ಕೊಡಲಾಗಿದೆ. ಅಲ್ಲಿಂದ ವರದಿ ಏನು ಬರುತ್ತೆ, ಆ ಸೆಕ್ಷನ್ ಗಳನ್ನ ಸೇರಿಸಿ, ಶಿಕ್ಷೆ ಕೊಡಿಸಲಾಗುತ್ತದೆ. ಸ್ಥಳೀಯರು ಕೂಡ ಈ ಸಂಬಂಧ ಮಾಹಿತಿ ನೀಡಿದ್ದಾರೆ. ಆ ಸಂಬಂಧ ಸರಿಯಾದ ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ. ವಿಶೇಷ ತಂಡವನ್ನ ರಚನೆ ಮಾಡಿ, ತನಿಖೆಯನ್ನ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅತ್ತ ಸಾವಿರಾರು ಕನಸು ಕಂಡಿದ್ದ ಮಗನ ಭವಿಷ್ಯ ಇಂದು ಪೋಷಕರ ಕಣ್ಮುಂದೆಯೇ ಮಣ್ಣಾಗಿದೆ. ಹೆತ್ತ ಕರುಳು ಮನದಲ್ಲಿ ದುಃಖದ ಮಡುಗಟ್ಟಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...