Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಲೆಗಳಿಂದ ದಸರಾ ರಜೆ ಆದೇಶ ಉಲ್ಲಂಘನೆ, ಸರ್ಕಾರ ಕ್ರಮಕೈಗೊಳ್ಳಲಿ : ಪ್ರಮೋದ್ ಮುತಾಲಿಕ್ ಆಗ್ರಹ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ರಾಜ್ಯ ಸರ್ಕಾರ ನೀಡಿರುವ ದಸರಾ ರಜೆಗಳ ಆದೇಶವನ್ನು ಕಾನ್ವೆಂಟ್ ಶಾಲೆಗಳು ಉಲ್ಲಂಘನೆ ಮಾಡಿ, ಶಾಲೆಗಳನ್ನು ನಡೆಸುತ್ತಿರುವ ಬಗ್ಗೆ ಶ್ರೀರಾಮ ಸೇನೆಯ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಬ್ಬಗಳನ್ನು ಆಚರೆಣೆ ಮಾಡಲೆಂದು ಸರ್ಕಾರ ದಸರಾ ರಜೆ ಘೋಷಣೆ ಮಾಡಿ ಆದೇಶನ್ನು ನೀಡದೆ. ಆದರೆ ಕಾನ್ವೆಂಟ್ ಶಾಲೆಗಳು ದಸರಾ ರಜೆ ನೀಡದೆ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಕಾನ್ವೆಂಟ್ ಶಾಲೆಗಳಲ್ಲಿ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಹಾಗೂ ಬಸವೇಶ್ವರವರ ಭಾವಚಿತ್ರ ಕೂಡ ಹಾಕದೇ ಸರ್ಕಾರದ ಸೂಚನೆ ಪಾಲಿಸಲಾಗುತ್ತಿಲ್ಲ. ಕೆಲವೊಂದು ಕಡೆ ರಾಷ್ಟ್ರೀಯ ಹಬ್ಬಗಳ ಆಚರಣೆಯೂ ಮಾಡುತ್ತಿಲ್ಲ. ಸರ್ಕಾರ ಕೂಡಲೇ ಈ ತಪ್ಪುಗಳನ್ನು ಸರಿ ಪಡಿಸಿಬೇಕು ಎಂದು ಶ್ರೀ ರಾಮ ಸೇನೆ ಆಗ್ರಹಿಸುತ್ತದೆ ಎಂದರು.

ಕಾನ್ವೆಂಟ್ ಶಾಲೆಗಳಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಹಿಂದೂಗಳೇ ಇದ್ದಾಗ ದಸರಾ ರಜೆ ರದ್ದು ಮಾಡಿ, ಶಾಲೆ ನಡೆಸುತ್ತಿರುವವರ ಶಾಲಾ ಆಡಳಿತದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ದಸರಾ ರಜೆ ದಿನಗಳಲ್ಲಿ ಪರೀಕ್ಷೆ ಘೋಷಣೆ ಮಾಡಿದ್ದಾರೆ. ಇದು ಅಪಾಯಕಾರಿಯಾಗಿದೆ. ಶಿಕ್ಷಕರು. ಪೋಷಕರು, ಮಕ್ಕಳು ಸೇರಿ ಎಲ್ಲರೂ ಮುಕ್ತವಾಗಿ ಹಬ್ಬವನ್ನು ಆಚರಿಸಲು ಆಗುವುದಿಲ್ಲ. ಅವರನ್ನು ಹಬ್ಬದಿಂದ ವಂಚಿಸಲಾಗುತ್ತಿದೆ. ಆದ ಕಾರಣ ಪರೀಕ್ಷೆಯನ್ನು ಕೂಡಲೇ ರದ್ದುಗೊಳಿಸಬೇಕು. ಈ ಕುರಿತು ಪಾಲಕರು, ಪೋಷಕರು ತಕರಾರು ಮಾಡಿದ್ದಲ್ಲಿ ಅವರನ್ನು ಬೆದರಿಸಲಾಗುತ್ತಿದೆ. ಅಷ್ಟೇ ಅಲ್ಲದೆ ತಕರಾರು ಮಾಡಿದ ಪಾಲಕರ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ ಆದ್ದರಿಂದ ಕೂಡಲೇಪರೀಕ್ಷೆಯನ್ನು ತಡೆದು ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾನ್ವೆಂಟ್ ಶಾಲೆಗಳಲ್ಲಿ 05 ಪ್ರತಿ ಶತದಿಂದ ಶೇಕಡ 10 ರಷ್ಟು ಮಾತ್ರ ಕ್ರಿಶ್ಚಿಯನ್ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಹು ಸಂಖ್ಯಾತ ಹಿಂದೂ ವಿದ್ಯಾರ್ಥಿಗಳು ಇದ್ದರೂ ಸಹ ಕ್ರಿಸ್ಮಸ್ ಹಬ್ಬಕ್ಕೆ ಕಡ್ಡಾಯ 10 ದಿನಗಳ ರಜೆ ಘೋಷಿಸಲಾಗುತ್ತದೆ ಈ ತಪ್ಪನ್ನು ಸಹ ಕೂಡಲೇ ಸರಿಪಡಿಸಬೇಕು ಎಂದರು.

ಮಹಾತ್ಮ ಗಾಂಧೀಜೀ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರರವರ ಭಾವಚಿತ್ರ ಕಡ್ಡಾಯವಾಗಿ ಕಾನ್ವೆಂಟ್ ಶಾಲೆಗಳಲ್ಲಿ ಇರುವುದನ್ನು ಅಧಿಕಾರಿಗಳು ದೃಢಪಡಿಸಬೇಕು. ಸಾಕಷ್ಟು ಶಾಲೆಗಳಲ್ಲಿ ರಾಷ್ಟ್ರೀಯ ಉತ್ಸವದ ಕನ್ನಡ ರಾಜ್ಯೋತ್ಸವ ತಿರಸ್ಕಾರ ಮಾಡಿ, ಹಿಂದೂ ಹಬ್ಬಗಳಿಗೆ, ಹಿಂದೂ ಆಚರಣೆಗಳಿಗೆ ಹಾಗೂ ಹಿಂದೂ ವಿದ್ಯಾರ್ಥಿ, ಶಿಕ್ಷಕರಿಗೆ, ಮಾನಸಿಕ, ಆರ್ಥಿಕವಾಗಿ ತೊಂದರೆ ಕೊಡುತ್ತಿದ್ದು, ಇದು ಕೂಡಲೇ ನಿಲ್ಲಿಸಬೇಕು ಮತ್ತು ಕಡ್ಡಾಯವಾಗಿ ರಾಷ್ಟ್ರೀಯ ಉತ್ಸವಗಳನ್ನು ಆಚರಿಸಿ ಅದರ ವರದಿಯನ್ನು ತರಿಸಿ ಕೊಡಬೇಕು ಎಂದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now