Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿನಯ್ ಕುಲಕರ್ಣಿ ಅರೆಸ್ಟ್ : ಲಾಯರ್ ಫಸ್ಟ್ ರಿಯಾಕ್ಷನ್

---Advertisement---

 

ಬೆಂಗಳೂರು; ಶಾಸಕ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಯೋಗೀಶ್ ಗೌಡ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನು ಅರ್ಜಿ ಮಾಡಿದ್ದಲ್ಲೇ ಒಂದು ವಾರದೊಳಗೆ ಕೋರ್ಟ್ ಗೆ ಹಾಜರಾಗಬೇಕೆಂದು ವಿನಯ್ ಕುಲಕರ್ಣಿಗೆ ಸೂಚನೆ ನೀಡಿತ್ತು. ಅದರಂತೆ ಇಂದು ಕೋರ್ಟ್ ಗೆ ಹಾಜರಾಗಿದ್ದ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

 

ಈ ವೇಳೆ ಎಸ್ಪಿಪಿ ಗಂಗಾಧರ್ ಶೆಟ್ಟಿ ಶಾಕಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಬಿರಾದಾರ್ ಎಂಬುವವರು ಅಪ್ರೂವರ್ ಆಗಿದ್ದರು. ಆನಂತರ ನ್ಯಾಯಾಲಯಕ್ಕೆ ಬಂದು ವಾಪಾಸ್ ಅದನ್ನ ವಿರುದ್ಧವಾಗಿ ಸಾಕ್ಷಿಗಳನ್ನ ಕೊಟ್ಟಿದ್ದಾರೆ. ಆ ಬಗ್ಗೆ ಅಪ್ಲಿಕೇಶನ್ ಅನ್ನು ಹಾಕಿದ್ದೀವಿ. ಇನ್ನೊಂದು ಬಹಳ ಮುಖ್ಯವಾದ ವಿಚಾರ ಅಂದ್ರೆ ಈ ಪ್ರಕರಣದಲ್ಲಿ ಹಲವಾರು ವ್ಯಕ್ತಿಗಳನ್ನ ಸಾಕ್ಷಿದಾರರನ್ನಾಗಿ ಮಾಡಿದ್ದೀವಿ. ಒಬ್ಬ ಪೊಲೀಸ್ ಅಧಿಕಾರಿ ಎಸಿಪಿ 164 ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ಕೊಟ್ಟು. ಇದೇ ನ್ಯಾಯಾಲಯದ ಮುಂದೆ ಸಾಕ್ಷಿಗಳನ್ನ ಕೊಟ್ಟಾಗ, ಸಿಬಿಐ ಅವರ ಒತ್ತಡಕ್ಕೆ ಮಣಿದು, ಕೇಂದ್ರ ತನಿಖಾ ಸಂಸ್ಥೆಯಾಗಿರುವ ಕಾರಣ ಆ ರೀತಿ ಹೇಳಿಕೆಯನ್ನ ಕೊಟ್ಟಿದ್ದೀವಿ ಅಂತ ಹೇಳಿ ಹಾಸ್ಟೇಲ್ ಆಗಿದ್ದಾರೆ.

ಆ ಬಗ್ಗೆ ಕೂಡ ಕಾನೂನು ಕ್ರಮವನ್ನು ಕೈಗೊಳ್ತಾ ಇದ್ದೀವಿ. ಒಂದು ಅಪ್ಲಿಕೇಷನ್ ಕೂಡ ಹಾಕಿದ್ದೀವಿ. ಯಾರೇ ಸಾಕ್ಷಿದಾರರಿಗೆ ಭಯ ಹುಟ್ಟಿಸಿದರೆ, ಅದೇ ರೀತಿ ಪರಿಸ್ಥಿತಿ ಬೇರೆ ಆರೋಪಿಗಳಿಗೂ ಬರಬಹುದು. ಅಲ್ಲಿ ಬೇಲ್ ಕೊಟ್ಟಾಗ ಡೈರೆಕ್ಷನ್ ನಲ್ಲಿ ಕುಇಡ ಹೇಳಿರೋದು ಆರೋಪಿಗಳು ಪ್ರತ್ಯೇಕವಾಗಿಯಾಗಲಿ, ಪರೋಕ್ಷವಾಗಲಿ ಯಾರಿಗೂ ಭಯ ಹುಟ್ಟಿಸಬಾರದು. ಬೇರೆ ಬೇರೆ ಆಮಿಷಗಳನ್ನ ಒಡ್ಡಬಾರದು ಅಂತ. ಪರೋಕ್ಷವಾಗಿ ಕೊಟ್ಟಿರುವ ಥ್ರೆಟ್ ನಿಂದಾಗಿ ಇಬ್ಬರು ಆರೋಪಿಗಳು ಜ್ಯುಡಿಷಿಯಲ್ ಕಸ್ಟೆಇಗೆ ಹೋಗಬೇಕಾಗಿ ಬಂದಿದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment