Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

‘ವಿಜಯೇಂದ್ರ ಶಕ್ತಿಪ್ರದರ್ಶನಕ್ಕಲ್ಲ.. ಮಹಾನ್ ಹೋರಾಟಗಾರನಿಗೆ ಗೌರವ’

---Advertisement---

ತುಮಕೂರು: ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ತುಮಕೂರಿನಲ್ಲಿ ಪೂರ್ವಭಾವಿ ಸಭೆಯನ್ನ ಹಮ್ಮಿಕೊಳ್ಳಲಾಗಿದೆ. ಸ್ನೇಹಸಂಗಮದಲ್ಲಿ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗಿಯಾಗಿದ್ದರು. ನೂರಾರು ಸಂಖ್ಯೆಯಲ್ಲಿ ಯಡಿಯೂರಪ್ಪ ಅವರ ಅಭಿಮಾನಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಹಸಿರು ಶಾಲು ಹಾಕಿಕೊಂಡು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಯಡಿಯೂರಪ್ಪ ಅಭಿಮಾನೋತ್ಸವ ಯಾವುದೇ ರಾಜಕಾರಣದ ಉದ್ದೇಶದಿಂದ ನಡೆಯುತ್ತಿರುವುದಲ್ಲ, ಅವರ ಮೇಲಿನ ಅಭಿಮಾನಕ್ಕಾಗಿ ನಡೆಯುತ್ತಿರುವುದು. ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದ ನೆಪದಲ್ಲಿ ವಿಜಯೇಂದ್ರ ಶಕ್ತಿ ಪ್ರದರ್ಶನ ಎಂಬ ಪ್ರಶ್ನೆ ಮನೆ ಮಾಡಿದೆ. ಆದರೆ ಇಲ್ಲಿ ಯಾವ ಶಕ್ತಿ ಪ್ರದರ್ಶನವೂ ಅಗತ್ಯವಿಲ್ಲ. ಕೇವಲ ಅಭಿಮಾನಕ್ಕೋಸ್ಕರ ಮಾಡ್ತಾ ಇರುವುದು ಎಂಬ ಮಾತನ್ನ ಬಿವೈ ವಿಜಯೇಂದ್ರ ಅವರು ಹೇಳಿದ್ದಾರೆ.

50 ವರ್ಷ ಪೂರೈಸಿದ್ದಾರೆ. ಕರ್ನಾಟಕದಲ್ಲಿ ಹೋರಾಟಕ್ಕೆ ಮತ್ತೊಂದು ಹೆಸರು ಅಂದ್ರೆ ಬಿಎಸ್ ಯಡಿಯೂರಪ್ಪ ಅವರು. ಪರಿಶ್ರಮಕ್ಕೆ ಮತ್ತೊಂದು ಹೆಸರು ಅಂದ್ರೆ ಬಿಎಸ್ ಯಡಿಯೂರಪ್ಪ ಅವರು. ಹಾಗಾಗಿ ಕರ್ನಾಟಕದಲ್ಲಿ ಕಳೆದ 50 ವರ್ಷಗಳಿಂದ ಬಡವರ, ಶೋಷಿತ ವರ್ಗದವರ, ರೈತರ ಪರವಾದ ಧ್ವನಿಯಾಗಿ, ನಿರಂತರವಾಗಿ, ದಣಿವರಿಯದೆ, ರಾಜ್ಯದ ಮೂಲೆ‌ಮೂಲೆಗಳಿಗೆ ಪ್ರವಾಸ ಮಾಡಿ, ರೈತರು ಎಲ್ಲಿಯೇ ಹೋರಾಟ‌ಮಾಡ್ತಾ ಇದ್ದರೆ ಅಲ್ಲಿ ಬಿಎಸ್ ಯಡಿಯೂರಪ್ಪ ಅವರು ಇರ್ತಾ ಇದ್ದರು. ಅಂಥೊಬ್ಬ ಹೋರಾಟಗಾರ, ಜನನಾಯಕನನ್ನು ಗೌರವಿಸಬೇಕು ಎಂಬ ಕಾರಣಕ್ಕೆ ಅಭಿಮಾನೋತ್ಸವವನ್ನು ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತಿಳಿಸಿದ್ದಾರೆ. ಈಗಾಗಲೇ ಅದ್ದೂರಿಯಾಗಿ ಅಭಿಮಾನೋತ್ಸವ ನಡೆಸಲು ಎಲ್ಲಾ ತರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)