ಅಥ್ಲೆಟಿಕ್ಸ್ ನಲ್ಲಿ ಪ್ರಾಬಲ್ಯ ಮೆರೆದ ಸಾಣಿಕೆರೆಯ ವೇದ ಪಿಯು ಕಾಲೇಜು

 

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 31 : ಇಂದು ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಾಣಿಕೆರೆಯ ವೇದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಾಬಲ್ಯ ಮೆರೆಯುವುದರೊಂದಿಗೆ ಹಲವಾರು ಆಟಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯುವದರೊಂದಿಗೆ ಅದ್ದೂರಿಯಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡೆಯ ವಿವರ
1. 100 ಮೀಟರ್ ಓಟ
ಪ್ರಥಮ ಸ್ಥಾನ. – ಪ್ರಿಯಾಂಕ ಬಿ
2. 400 ಮೀಟರ್ ಓಟ ಪ್ರಥಮ ಸ್ಥಾನ.- ಭರತ್ ಕುಮಾರ್ . ಓ
3. 200 ಮೀಟರ್ ಓಟ ಪ್ರಿಯಾಂಕ ಬಿ. ಪ್ರಥಮ ಸ್ಥಾನ
4. 200 ಮೀಟರ್ ಓಟ ತೃತೀಯ ಸ್ಥಾನ. ಶಶಿಕಲಾ .ಜಿ
5. 3000 ಮೀಟರ್ ನ ಓಟ ತೃತೀಯ ಸ್ಥಾನ. ಪ್ರಿಯಾ ಬಿ.ಸಿ
6. 4X100 ರಿಲೆ. ಪ್ರಥಮ ಸ್ಥಾನ
ಪ್ರಿಯಾಂಕ, ವರ್ಷಿಣಿ, ಶಶಿಕಲ,ಮತ್ತು ತನ್ಯ
7. ಬಾಲಕಿಯರ ವಿಭಾಗದ ಥ್ರೋಬಾಲ್ ದ್ವಿತೀಯ ಸ್ಥಾನ.

ಹೀಗೆ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಥಮ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಿಟಿ ರವೀಂದ್ರರವರು ಹಾಗೂ ಕಾರ್ಯದರ್ಶಿಯಾದ ಕಿರಣ್, ಖಜಾಂಚಿಯಾದ ವಿಜಯ್ ಸರ್, ಪ್ರಾಂಶುಪಾಲರಾದ ಸಂದೀಪ್ , ಶಾಲಾ ಮುಖ್ಯ ಶಿಕ್ಷಕಿ ಪುಷ್ಪರಾಣಿ, ದೈಹಿಕ ಶಿಕ್ಷಕರಾದ ಸತೀಶ್ ,ರವಿ ,ಯೋಗೇಶ್, ಪ್ರಕಾಶ್, ವಿರೂಪಾಕ್ಷಪ್ಪ ಹಾಗೂ ಸಹನಾ ಮುಂತಾದವರು ಮಕ್ಕಳಿಗೆ ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *