Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವರ್ತೂರು ಸಂತೋಷ್ ಗೆ ನಿಜಕ್ಕೂ ಮದುವೆ ಆಗಿದೆಯಾ..? ಮೂಲಗಳು ಏನು ಹೇಳುತ್ತವೆ..?

---Advertisement---

ವರ್ತೂರು ಸಂತೋಷ್ ಬಿಗ್ ಬಾಸ್ ಸೀಸನ್ 10ರ ಸೆನ್ಸೇಷನ್ ಹೆಸರು. ಕಳೆದ ಕೆಲವು ದಿನಗಳಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಹಳ್ಳಿಕಾರ್ ಆಗಿ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್, ತನ್ನ ಲೈಫ್ ಸ್ಟೈಲ್ ನಿಂದಾನೇ ಗಮನ ಸೆಳೆದಿದ್ದರು. ಮೈತುಂಬಾ ಒಡವೆಗಳನ್ನು ಹಾಕಿಕೊಂಡು ಕಡೆಗೆ ಅರಣ್ಯಾಧಿಕಾರಿಗಳ ಬಲಿ ತಗಲಾಕಿಕೊಂಡರು. ಜೈಲಿಗೆ ಹೋಗಿ ಬಂದಾಗಿನಿಂದ ಅದ್ಯಾಕೋ ವಿವಾದಗಳು ತಲೆ‌ಮೇಲೆ ತೂಗಾಡುತ್ತಿವೆ.

ಹುಲಿ ಉಗುರು ಪ್ರಕರಣದಿಂದಾದ ನೋವಿನಿಂದಾನೇ ವರ್ತೂರು ಸಂತೋಷ್ ಹೊರಗೆ ಬಂದಿಲ್ಲ ಎಂಬ ಬೇಸರ ಅಭಿಮಾನಿಗಳದ್ದು. ಭಾನುವಾರ ಬಿಗ್ ಬಾಸ್ ಎಲಿಮಿನೇಷನ್ ರೌಂಡ್ ನಲ್ಲಿಯೂ ತಾನೇ ಹೊರಗೆ ಬರುತ್ತೀನಿ ಎಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ ತಾನೇ ಹೊರಗೆ ಬರಬೇಕೆಂದು ಹಠ ಮಾಡಿದರು. ಸುದೀಪ್ ಕೂಡ ತುಂಬಾನೇ ಸಮಾಧಾನ ಮಾಡಿದರು. ಯಾವುದೂ ವರ್ಕೌಟ್ ಆದಂತೆ ಕಾಣಲಿಲ್ಲ. ವರ್ತೂರು ಸಂತೋಷರನ್ನು ಉಳಿಸಿಕೊಳ್ಳಲು, ಭಾಗ್ಯರನ್ನು ಕರೆಸಿದ್ದರು, ಅಮ್ಮನನ್ನು ಕರೆಸಿದ್ದರು. ಎಲ್ಲವೂ ಸರಿ ಆಯ್ತು ಎನ್ನುವಷ್ಟರಲ್ಲಿ ವರ್ತೂರು ಸಂತೋಷ್ ಮೇಲೆ ಮತ್ತೊಂದು ವಿವಾದದ ಕತ್ತಿ ತೂಗುತ್ತಿದೆ. ಅದುವೆ ಮದುವೆ, ಡಿವೋರ್ಸ್, ಮಗು ವಿಚಾರ.

ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಗೆ ಇತ್ತಿಚೆಗೆ ಲವ್ವಾಗುತ್ತಿದೆ ಎನಿಸುತ್ತಿದೆ. ಅದುವೇ ತನಿಷಾ ಮೇಲೆ. ಸುದೀಪ್ ಪಂಚಾಯ್ತಿಯಲ್ಲೆಲ್ಲಾ ತನಿ ಬಗ್ಗೆಯೇ ಮಾತನಾಡುತ್ತಾರೆ. ನಿನ್ನೆ ಮನೆಗೆ ಭಾಗ್ಯಾ ಬಂದಿದ್ದಾಗಲೂ ತನಿ ಬಗ್ಗೆ ಹೇಳುತ್ತಾ ನಾಚಿ ನೀರಾಗಿದ್ದರು. ಕ್ರಶ್ ಆಗಿದೆ ಎಂಬುದನ್ನು ಒಪ್ಪಿಕೊಂಡಿದ್ದರು. ಈ ಬೆಳವಣಿಗೆಯ ನಡುವೆಯೇ ವರ್ತೂರು ಸಂತೋಷ್ ಮದುವೆ ಮ್ಯಾಟರ್ ಲೀಕ್ ಆಗಿದೆ.

ವರ್ತೂರು ಸಂತೋಷ್ ಮದುವೆ ಆಗಿದ್ದಾರೆ ಎನ್ನಲಾದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಎಸ್. ಜಯಶ್ರೀ ಎಂಬುವವರೊಂದಿಗೆ ಮದುವೆ ನಡೆದಿದೆ ಅನ್ನೋ ಫೋಟೊವನ್ನು ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ. ಈ ಫೋಟೊ ಬಗ್ಗೆ ಈಗ ಬಾರೀ ಚರ್ಚೆಯಾಗುತ್ತಿದೆ. ಅಲ್ಲದೆ ವಿಡಿಯೋವನ್ನೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಸಲಿಗೆ ಮದುವೆ ಆಗಿದ್ಯಾ? ಇಲ್ಲ ಇದು ನಕಲಿನಾ? ಅನ್ನೋದು ವರ್ತೂರು ಸಂತೋಷ್ ಹೇಳಬೇಕಿದೆ. ಆದರೆ ಆಪ್ತ ಮೂಲಗಳ ಪ್ರಕಾರ ವರ್ತೂರು ಸಂತೋಷ್ ಗೆ ಈಗಾಗಲೇ ಮದುವೆಯಾಗಿರುವುದು ಕನ್ಫರ್ಮ್ ಎನ್ನಲಾಗಿದೆ. ಜೊತೆಗೆ ಒಂದೂವರೆ ವರ್ಷದ ಮಗು ಕೂಡ ಇದೆಯಂತೆ. ಡೆಲಿವರಿಗೆ ಅಂತ ಆಸ್ಪತ್ರೆಗೆ ಬಿಟ್ಟು ಬಂದ ಮೇಲೆ ಮತ್ತೆ ವರ್ತೂರು ಸಂತೋಷ್ ತಿರುಗಿ ನೋಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಬ್ಬರ ನಡುವಿನ ಮನಸ್ತಾಪಕ್ಕೆ, ಡಿವೋರ್ಸ್ ಗೆ ಕಾರಣವೇನು ಎಂಬುದು ಮಾತ್ರ ಇನ್ನು ತಿಳಿದಿಲ್ಲ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment