Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭ್ರಷ್ಟಾಚಾರ ಪ್ರಶ್ನಿಸುವ ಹಕ್ಕು ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ: ಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿದೆ ಎನ್ನುವುದಾದರೆ ದೆಹಲಿಯ ಜಂತರ್-ಮಂತರ್‍ನಲ್ಲಿ ಸಾವಿರಾರು ಯುವಕ/ಯುವತಿಯರು ನಡೆಸಿದ ಹೋರಾಟವೇ ಜೀವಂತ ಸಾಕ್ಷಿ ಎಂದು ಅಲೆಮಾರಿ ಅರೆಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಹೇಳಿದರು.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಎಎಫ್‍ವೈ. ವಿದ್ಯಾರ್ಥಿ ವಿಭಾಗ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಶಕ್ತಿ ದೇಶದ ಶಕ್ತಿ. ಸದೃಢ ದೇಹ, ಆರೋಗ್ಯಕರ ಮನಸ್ಸಿರಬೇಕಾದರೆ ಶಿಕ್ಷಣ ಮುಖ್ಯ. ಅಭಿವೃದ್ದಿಯತ್ತ ಮುಂದುವರೆಯುತ್ತಿರುವ ಭಾರತದಲ್ಲಿ ಬಡವರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡುವ ಹೊಣೆ ಆಳುವ ಸರ್ಕಾರಗಳ ಮೇಲಿದೆ. ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರಗಳನ್ನು ನೀಡಬೇಕು. ಮಾನವ ಸಂಪನ್ಮೂಲವೇ ನಿಜವಾದ ದೇಶದ ಸಂಪತ್ತು ಎನ್ನುವುದನ್ನು ಸರ್ಕಾರಗಳು ಅರಿತುಕೊಳ್ಳಬೇಕು. ಶಿಕ್ಷಣದ ಜೊತೆ ಕೌಶಲ್ಯ ಶಿಕ್ಷಣ ಮಕ್ಕಳಿಗೆ ಮುಖ್ಯ. ಸ್ವಾಮಿ ವಿವೇಕಾನಂದ,
ಅಬ್ದುಲ್‍ಕಲಾಂ ಹಾಗೂ ದೇಶಭಕ್ತರನ್ನು ಇಂದಿನ ಯುವ ಸಮೂಹ ಆದರ್ಶವಾಗಿಟ್ಟುಕೊಳ್ಳಬೇಕು. ಜ್ಞಾನಕ್ಕಿಂತ ಅಂಕಗಳಿಗೆ ಪ್ರಾಮುಖ್ಯತೆಯಿದೆ. ಅಧಿಕಾರಿಗಳ ಹಾಗೂ ರಾಜಕಾರಣಿಗಳ ಭ್ರಷ್ಟಾಚಾರವನ್ನು ಪ್ರಶ್ನಿಸುವ ಹಕ್ಕನ್ನು ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಅನೇಕ ಧರ್ಮ, ಜಾತಿಗಳಿಂದ ಕೂಡಿರುವ ದೇಶದ ನಮ್ಮದು. ಎಲ್ಲರೂ ಪ್ರೀತಿ, ಸಹಬಾಳ್ವೆ, ಸಹೋದರತೆಯಿಂದ ಬದುಕಿದಾಗ ಮಾತ್ರ ಶಾಂತಿ ನೆಲಸುತ್ತದೆ ಎಂದರು.

ನೇರ್ಲಗಿ ಫೌಂಡೇಶನ್‍ನ ಮಮತ ನೇರ್ಲಗಿ ಮಾತನಾಡಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ದೆಹಲಿಯ ಜಂತರ್-ಮಂತರ್‍ನಲ್ಲಿ ಸಹಸ್ರಾರು ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕೆ ಮಣಿದು ಕೇಂದ್ರ ಉನ್ನತ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು. ವಿದ್ಯಾರ್ಥಿಗಳ ಕೂಗು ದೇಶಕ್ಕೆ ಮುಖ್ಯ. ಮಕ್ಕಳನ್ನು ಶಾಲೆ ಪಠ್ಯ ಪುಸ್ತಕಕ್ಕಷ್ಟೆ ಸೀಮಿತಗೊಳಿಸಬಾರದು. ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಲು ಗುರು-ಹಿರಿಯರು, ಪೋಷರುಗಳು ಉತ್ತೇಜಿಸಬೇಕೆಂದು ಮನವಿ ಮಾಡಿದರು.
ವಿದ್ಯಾರ್ಥಿಗಳಿಗೂ ಅನೇಕ ಸಮಸ್ಯೆಗಳಿವೆ. ಎಲ್ಲವನ್ನು ದಾಟಿ ಉತ್ತಮ ಶಿಕ್ಷಣವಂತರಾದಾಗ ಮಾತ್ರ ಜೀವನಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಎಎಫ್‍ವೈ. ವಿದ್ಯಾರ್ಥಿ ವಿಭಾಗದ ಅಧ್ಯಕ್ಷ ಪ್ರದೀಪ್‍ಕುಮಾರ್, ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಎ.ಸಾಧಿಕ್‍ವುಲ್ಲಾ, ಭಾರತಿ, ಸಂತೋಷಮ್ಮ, ಜಿ.ವಿ.ಟಿ.ವಿ.ಯ ರಘು ಇವರುಗಳು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ನೋಟ್‍ಬುಕ್‍ಗಳನ್ನು ವಿತರಿಸಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now