Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಾಲ್ಮೀಕಿ ಹಗರಣ : ಬಿ.ನಾಗೇಂದ್ರಗೆ ಷರತ್ತು ಬದ್ಧ ಜಾಮೀನು ಮಂಜೂರು..!

---Advertisement---

ರಾಜ್ಯದಲ್ಲಿ ದೊಡ್ಡಮಟ್ಟಕ್ಕೆ ಸದ್ದು ಮಾಡಿದ್ದು ಎಂದರೆ ಅದು ವಾಲ್ಮೀಕಿ ಹಗರಣ. ವಿಪಕ್ಷ ನಾಯಕರು ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ದೊಡ್ಡ ಹೋರಾಟವನ್ನೇ ಮಾಡಿದರು. ಇದರಿಂದ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರು ರಾಜೀನಾಮೆಯನ್ನು ನೀಡಿದರು. ಪೊಲೀಸರು ನಾಗೇಂದ್ರ ಅವರನ್ನು ವಶಕ್ಕೆ ಪಡೆದು, ವಿಚಾರಣೆಯನ್ನು ನಡೆಸಿದ್ದರು. ಇದೀಗ ನಾಗೇಂದ್ರ ಅವರಿಗೆ ಜಾಮೀನು ಮಂಜೂರಾಗಿದೆ‌.

ಜನಪ್ರತಿನಿಧಿಗಳ ನ್ಯಾಯಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಇಂದು ನಾಗೇಂದ್ರ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ‌. 2 ಲಕ್ಷದ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಲು ನ್ಯಾಯಾಲಯವೂ ಸೂಚನೆ ನೀಡಲಾಗಿತ್ತು. ಕೋರ್ಟ್ ಕೇಳಿದ್ದನ್ನು ನೀಡಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರು ಜಾಮೀನು ಪಡೆದಿದ್ದಾರೆ.

ವಾಲ್ಮೀಕಿ ಹಗರಣ ಸಣ್ಣ ಮಟ್ಟದ ಹಗರಣವಲ್ಲ. ತೀರಾ ದೊಡ್ಡಮಟ್ಟದ ಕೋಟ್ಯಾಂತರ ರೂಪಾಯಿಯ ಹಗರಣವಾಗಿದೆ. 197 ಕೋಟಿ, ಸಚಿವರ ಗಮನಕ್ಕೆ ಬಾರದೆ ಅವ್ಯವಹಾರ ನಡೆದಿದೆ ಎಂದೇ ವಾದ ಮಾಡಲಾಗಿತ್ತು. ಈ ಕೇಸ್ ದೊಡ್ಡದಾಗುತ್ತಾ ಹೋದಂತೆ, ಸಚುವ ಸ್ಥಾನಕ್ಕೆ ನಾಗೇಂದ್ರ ಅವರು ರಾಜೀನಾಮೆ ನೀಡಿದರು. ಬಳಿಕ ರಾಜ್ಯ ಸರ್ಕಾರ ಈ ಕೇಸನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಲಾಗಿತ್ತು. ಇಡಿ ಕೂಡ ಈ ಕೇಸಲ್ಲಿ ತನಿಖೆ ನಡೆಸುವುದಕ್ಕೆ ಶುರು ಮಾಡಿತ್ತು. ಮೊದಲಿಗೆ ಲೋಕಾಯುಕ್ತ ಪೊಲೀಸರು ತಮ್ಮ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದರು‌. ಆದರೆ ಅದರಲ್ಲಿ ನಾಗೇಂದ್ರ ಅವರ ಹೆಸರು ಉಲ್ಲೇಖ ಮಾಡಿರಲಿಲ್ಲ. ಬಳಿಕ ಇಡಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಹಣ ವರ್ಗಾವಣೆಯಲ್ಲಿ ನಾಗೇಂದ್ರ ಅವರದ್ದೇ ಬಹುಪಾಲು ಪಾತ್ರವಿದೆಯೆಂದು ತೋರಿಸಲಾಗಿತ್ತು. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...