Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಲಿಂಗಾಯತರ ಸಂಘಟನೆಯಲ್ಲಿ ಸಾಮರಸ್ಯ ಬಂದರೆ ರಾಜ್ಯದಲ್ಲಿ ನಮ್ಮನ್ನು ಮೀರಿಸುವವರಿಲ್ಲ: ಎಂಎಲ್‌ಸಿ ನವೀನ್ ಕೆ.ಎಸ್.

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ, ಜು. 12 : ಲಿಂಗಾಯತರಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕತ್ವ ಈ ಮೂರು ನಾಯಕತ್ವವನ್ನು ನಮ್ಮ ಸಮಾಜ ಹೊಂದಿದೆ, ಆದರೆ ಸಂಘಟನೆಯಲ್ಲಿ ಸಾಮರಸ್ಯ ಕಾಣುತ್ತಿಲ್ಲ ಇದು ನಮ್ಮಲ್ಲಿ ಬಂದರೆ ರಾಜ್ಯದಲ್ಲಿ ನಮ್ಮನ್ನು ಮೀರಿಸುವವರು ಯಾರು ಇರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ನವೀನ್ ಕೆ.ಎಸ್. ತಿಳಿಸಿದ್ದಾರೆ.

 

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಚಿತ್ರದುರ್ಗ ನಗರದಲ್ಲಿ  ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ವಿವಿಧ ಉದ್ದೇಶಗಳ ಅನುಕೂಲಕ್ಕಾಗಿ  ವೀರಶೈವ ಲಿಂಗಾಯತ ಭವನವನ್ನು ನಿರ್ಮಿಸಲು ತಿರ್ಮಾನ ಕೈಗೊಂಡಿದ್ದು, ಅದರ ಭೂಮಿ ಪೂಜೆಯ ಶಂಕುಸ್ಥಾಪನೆ ಕಾರ್ಯಕ್ರಮವು ಭಾನುವಾರ ನಡೆದಿದ್ದು, ಇದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಬಹು ದಿನಗಳ ಕನಸು ಇದು ನನಸಾಗುತ್ತಿದೆ, ಶಾಮನೂರು ಶಿವಶಂಕರಪ್ಪರವರು ಜಿಲ್ಲಾ ಕೇಂದ್ರಗಳಲ್ಲಿ ಈ ರೀತಿಯಾದ ಭವನಗಳನ್ನು ನಿರ್ಮಾಣ ಮಾಡುವ ಘಟಕಗಳಿಗೆ ಅನುದಾನವನ್ನು ನೀಡುವಂತ ಕಾರ್ಯವನ್ನು ಮಾಡಿದರು.

 

ಈಗ ಅದು ಮುಂದುವರೆಯುತ್ತಿದೆ ಇದೇ ರೀತಿ ಚಿತ್ರದುರ್ಗ ಘಟಕಕ್ಕೂ ಸಹಾ ಅನುದಾನ ದೊರಕಿದೆ, ಲಿಂಗಾಯತರು ಮನಸ್ಸು ಮಾಡಿದರೆ ಸರ್ಕಾರದ ಅನುದಾನ ಇಲ್ಲದೇ ಈ ಕಟ್ಟಡವನ್ನು ನಿರ್ಮಾಣ ಮಾಡಬಹುದು ಅಷ್ಟು ಪ್ರಮಾಣದಲ್ಲಿ ನಮ್ಮ ಸಮುದಾಯದಲ್ಲಿ ಅರ್ಥಿಕವಾಗಿ ಸಬಲಿದ್ದಾರೆ ಆದರೆ ಅವರು ಮನಸ್ಸು ಮಾಡುತ್ತಿಲ್ಲ ನಾವು ಬೇಡುವ ಪದ್ದತಿಯನ್ನು ಬಿಡಬೇಕಿದೆ ಏಕೆಂದರೆ ನಾವು ಬೇರೆ ಸಮುದಾಯದವರಿಗೆ ನೆರವನ್ನು ನೀಡುವಂತ ಸ್ಥಿತಿಯಲ್ಲಿ ಇದ್ದವರಾಗಿದ್ದೇವೆ ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ನಮ್ಮ ಸಮುದಾಯ ಉತ್ತಮವಾಗಿ ಇದೇ ಅಲ್ಲಿ ಏನಾದರೂ ಕೆಲಸವಾಗಬೇಕಾದರೆ ಅಲ್ಲಿನ ಲಿಂಗಾಯತ ಮನೆಯವರೆ ಹಣವನ್ನು ಹಾಕಿ ಕಾರ್ಯಕ್ರಮವನ್ನು ಮಾಡುತ್ತಾರೆ ಸರ್ಕಾರದ ಅನುದಾನವನ್ನು ಕಾಯುವುದಿಲ್ಲ ಆದರೆ ನಗರದಲ್ಲಿ ಈ ರೀತಿಯಾದ ವಾತಾವರಣ ಇಲ್ಲವಾಗಿದೆ ಇಲ್ಲಿ ಬೇಡದೇ ಹೊರೆತು ಯಾರು ಸಹ ಕೊಡುವುದಿಲ್ಲ, ನಮ್ಮಲ್ಲಿನ ಆಹಂನ್ನು ಬಿಡುವುದರ ಮೂಲಕ ನಮ್ಮ ಸಮುದಾಯವನ್ನು ಬಲ ಪಡಿಸಬೇಕಿದೆ, ನಮ್ಮಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕತ್ವ ಈ ಮೂರು ನಾಯಕತ್ವವನ್ನು ನಮ್ಮ ಸಮಾಜ ಹೊಂದಿದೆ, ಧಾರ್ಮೀಕವಾಗಿ ಮಠಗಳು ಇದುವರೆವಿಗೂ ಉತ್ತಮವಾದ ಕಾರ್ಯಗಳನ್ನು ಮಾಡುತ್ತಾ, ತ್ರಿವಿಧ ದಾಸೋಹವನ್ನು ಮಾಡುತ್ತಿವೆ, ಧಾರ್ಮಿಕವಾಗಿ ನಮ್ಮಲ್ಲಿ ಗಟ್ಟಿತನವನ್ನು ಮೂಡಿಸಿದೆ, ಇದರಿಂದ ಸಮಾಜ ಬೆಳೆಯುತ್ತಿದೆ, ಸಾಮಾಜಿಕ ನಮ್ಮ ಸಮುದಾಯ ಬೇರೆ ಸಮುದಾಯದವರನ್ನು ಸಹಾ ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುವಂತ ಮನೋಭಾವವನ್ನು ಹೊಂದಿದೆ, ಅವರು ಸಹಾ ನಮ್ಮಂತೆ ಎಂಬ ಮನೋಭಾವವನ್ನು ಹೊಂದಿದೆ ಇನ್ನೂ ರಾಜಕೀಯವಾಗಿ ನಮ್ಮಲ್ಲಿ ಹಲವಾರು ಜನತೆ ನಮ್ಮ ಸಮುದಾಯದವರು ಇದ್ದಾರೆ ಅವರು ನಮ್ಮ ಸಮುದಾಯದ ಶಕ್ತಿಯಾಗಿದ್ದಾರೆ. ಯಾವುದೇ ನಿರ್ಣಯಗಳನ್ನು ತೆಗೆದುಕೊಂಡು ಸಮುದಾಯವನ್ನು ಮುನ್ನೆಡೆಸುತ್ತಿದ್ದಾರೆ ಎಂದು ತಿಳಿಸಿದರು.

ನಮ್ಮ ಮನೆಯಲ್ಲಿ ಏನಾದರೂ ಕಾರ್ಯಕ್ರಮವಾದರೇ ಅದಕ್ಕೆ ಸಾಕಷ್ಟು ಹಣವನ್ನು ವ್ಯಯ ಮಾಡಲಾಗುತ್ತದೆ ಆದರೆ ಸಮಾಜಕ್ಕೆ ಖರ್ಚ ಮಾಡು ಎಂದಾಗ ಮಾತ್ರ ನಮ್ಮ ಜನ ಹಿಂದಕ್ಕೆ ಸರಿಯುತ್ತಾರೆ, ನಮ್ಮಲ್ಲಿನ ಸಣ್ಣ ಸಮಾಜಗಳುನ ಉತ್ತಮವಾಗಿ ಸಂಘಟನೆಯಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿವೆ, ಆದರೆ ದೊಡ್ಡ ಸಮಾಜವಾಗಿ ನಾವುಗಳು ಇನ್ನೂ ಸಹಾ ಕಟ್ಟಡವನ್ನು ನಿರ್ಮಾಣ ಮಾಡಲು ಪರದಾಡುತ್ತಿದ್ದೇವೆ, ನಮ್ಮ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಅನುದಾನವನ್ನು ಕಾಯದೇ ನಾವೇ ಹಣವನ್ನು ಹಾಕಿಕೊಂಡು ಕಟ್ಡವನ್ನು ನಿರ್ಮಾಣ ಮಾಡಬೇಕಿದೆ ಎಂದ ಅವರು, ಈ ಕಟ್ಟಡಕ್ಕೆ ನನ್ನ ಅನುದಾನದಲ್ಲಿ 10 ಲಕ್ಷ ಹಾಗೂ ವೈಯುತ್ತಿಕವಾಗಿ 5 ಲಕ್ಷ ರೂ.ಗಳನ್ನು ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ನವೀನ್ ಕೆ.ಎಸ್. ತಿಳಿಸಿದ್ದಾರೆ.

 

ಮಾಜಿ ಶಾಸಕರಾದ ಎಸ್.ಕೆ,ಬಸವರಾಜನ್ ಮಾತನಾಡಿ, ನಮ್ಮ ಸಮುದಾಯ ಬೇರೆ ಸಮುದಾಯಗಳಿಗಿಂತ ಉತ್ತಮವಾದ ಸಮುದಾಯವಾಗಿದೆ ಆದರೆ ಒಳ ಪಂಗಡಗಳಿಂದ ಚದುರಿದೆ ಇದನ್ನು ಬಿಟ್ಟು ಒಂದಾದರೆ ನಮ್ಮ ಸಮುದಾಯ ಉತ್ತಮವಾದ ಸಮುದಾಯವಾಗುತ್ತದೆ, ಈಗ ಮಹಾಸಭಾ ಉತ್ತಮವಾದ ಚಟುವಟಿಕೆ ಯನ್ನು ಮಾಡುತ್ತಿದೆ ನಮ್ಮ ಎಲ್ಲಾ ಒಳ ಪಂಗಡಗಳನ್ನು ಸೇರಿಸುವ ಕಾರ್ಯವನ್ನು ಮಾಡುತ್ತಿದೆ ಇದು ಉತ್ತಮವಾದ ಬೆಳವಣಿಗೆಯಾಗಿದೆ ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಲಿಂಗಾ ಯತವ ಭವನಗಳ ನಿರ್ಮಾಣಕ್ಕೆ ಅರ್ಥಿಕವಾಗಿ ಸಹಾಯವನ್ನು ಮಾಡುತ್ತಿದೆ. ನಮ್ಮಲ್ಲಿನ ಇತ್ತೀಚಿನ ದಿನಮಾನ ದಲ್ಲಿ ಹುಡುಗಿಯರ ಕೊರತೆ ಕಂಡು ಬರುತ್ತಿದೆ ಇದರಿಂದ ನಾವುಗಳು ಒಳ ಪಂಗಡದಲ್ಲಿ ಸಂಬಂಧವನ್ನು ಬೆಳಸಿದರೆ ಮುಂದೆ ಉತ್ತಮವಾಗಲಿದೆ ನಾವೆಲ್ಲರು ಒಂದಾಗಬಹುದಾಗಿದೆ. ಕಟ್ಟಡವನ್ನು ಶೀಘ್ರವಾಗಿ ಪೂರ್ಣ ಮಾಡಿ ಇದರಿಂದ ವಿವಿಧ ರೀತಿಯ ಅನುಕೂಲಗಳು ಅಗಲಿದೆ  ಸಮಾಜ ಎಂದರೆ ಮನೆ ಇದ್ದ ಹಾಗೇ ಪಕ್ಷ ಎಂದರೆ ಹೋಟೇಲ್ ಇದ್ದಂತೆ ಯಾರು ಯಾವಾಗ ಬೇಕಾದರೂ ಸಹಾ ಪಕ್ಷವನ್ನು ಬದಲಾಯಿಸಬಹುದು ಆದರೆ ಮನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಆದ್ದರಿಂದ ನಮ್ಮ ಸಮುದಾಯ ಸಂಘಟನೆಗೆ ಒತ್ತು ನೀಡುವಂತೆ ಕರೆ ನೀಡಿದರು.

 

ಜಿಲ್ಲಾಧ್ಯಕ್ಷ ಮಹಡಿಶಿವಮೂರ್ತಿ ಮಾತನಾಡಿ, ಚಿತ್ರದುರ್ಗ ನಗರದ ಕಮ್ಮರೆಡ್ಡಿ ಕಲ್ಯಾಣ ಮಂಟಪದ ಪಕ್ಕದಲ್ಲಿ 60*40 ನಿವೇಶನ ಖರೀದಿಸಿದ್ದು, ಸುಮಾರು 3 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಾಣದ ನಕಾಶೆ ತಯಾರಿಸಲಾಗಿದೆ. ಕಟ್ಟಡದ ಕೆಲಸ ಚಾಲನೆ ನೀಡುವ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಭವನದ ಭೂಮಿ ಪೂಜೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಸಲಾಗಿದೆ ಈಗಾಗಲೇ ಹಲವಾರು ದಾನಿಗಳು ಕಟ್ಟಡ ನಿರ್ಮಾಣಕ್ಕೆ ಧನ ಸಹಾಯವನ್ನು ಮಾಡಿದ್ದಾರೆ ಮತ್ತೇ ಕೆಲವರು ಮಾಡುವ ವಾಗ್ದಾನವನ್ನು ಮಾಡಿದ್ದಾರೆ, ನಾವುಗಳು ಸಾಧ್ಯವಾದಷ್ಟು ನಮ್ಮ ಸಮುದಾಯದವರಿಂದಲೇ ಹಣವನ್ನು ಕ್ರೋಢಿಕರಿಸಿ ಕಟ್ಟಡವನ್ನು ನಿರ್ಮಾಣ ಮಾಡಬೇಕಿದೆ ಎಂಬುದು ನಮ್ಮ ಅಭೀಪ್ರಾಯವಾಗಿದೆ ಆದರೂ ಸಹಾ ಸರ್ಕಾರದ ಅನುದಾನಕ್ಕೆ ಮನವಿಯನ್ನು ನೀಡಲಾಗಿದೆ  ನಮ್ಮ ಮುಖಂಡರಿಂದ ಮುಖ್ಯಮಂತ್ರಿಗಳಿಂದ ಅನುದಾನ ಕೊಡಿಸುವ ಭರವಸೆಯನ್ನು ನೀಡಲಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳಾದ ರೇಣುಕ ಪ್ರಸನ್ನಭವನ ನಿರ್ಮಾಣ ಸಮಿತಿ ಅಧ್ಯಕ್ಷ ರುದ್ರೇಶ್‍ಐಗಳ್, ಕೋಶಾಧ್ಯಕ್ಷ ಜಾಲಿಕಟ್ಟೆ ರುದ್ರಪ್ಪ, ಯುವ ಘಟಕದ ಅಧ್ಯಕ್ಷ ಮೈಲನಹಳ್ಳಿ ದಿನೇಶ್, ವಾಣಿಜ್ಯ ಘಟಕದ ಅಧ್ಯಕ್ಷ ಆನಂದ್, ನಗರ ಘಟಕದ ಅಧ್ಯಕ್ಷ ಎಸ್ ತಿಪ್ಪೇಸ್ವಾಮಿ ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಪ್ಪ ಪಿಳ್ಳೆಕೇರನಹಳ್ಳಿ, ನಾಗರಾಜ್ ಸಂಗಂ, ಪಂಚಾಕ್ಷರಯ್ಯ, ಮಲ್ಲಿಕಾರ್ಜನಯ್ಯ, ಜಯಕುಮಾರ್, ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ವೀರಶೈವ ಲಿಂಗಾಯತ ಸಮಾಜದ ಗಣ್ಯರು ವೀರಶೈವ ಲಿಂಗಾಯತ ಮಹಾಸಭಾ ಚಿತ್ರದುರ್ಗ ಜಿಲ್ಲಾ ಘಟಕ & ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ನಿರ್ದೇಶಕರು ಮತ್ತು ಸಮಾಜದ ಎಲ್ಲಾ ಬಂಧುಗಳು ಭಾಗವಹಿಸಿದ್ದರು.

 

ಶ್ರೀಮತಿ ರೀನಾ ವೀರಭಧ್ರಪ್ಪ, ಶ್ರೀಮತಿ ಮಾಲಾ ಬಸವರಾಜು ಪ್ರಾರ್ಥಿಸಿದರೆ, ಪ್ರಧಾನ ಕಾರ್ಯದರ್ಶಿ ಶಶಿಧರ ಬಾಬು ಸ್ವಾಗತಿಸಿದರು ಜ್ಞಾನ ಮೂರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now