ಬೆಂಗಳೂರು: ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಕಾರ್ಯ ನಿರ್ವಹಿಸ್ತಾ ಇದ್ದಾರೆ. ಆದರೆ ಇದಕ್ಕೆ ಬಿಜೆಪಿಯಲ್ಲಿ ಹಲವರಿಂದ ವಿರೋಧವಿದೆ. ಹೈಕಮಾಂಡ್ ತನಕ ಹೋಗಿದೆ. ಇದರ ನಡುವೆ ಹೈಕಮಾಂಡ್ ಕೂಡ ಸ್ಪಷ್ಟಪಡಿಸಿದ್ದು, ಚುನಾವಣೆ ಮಾಡಿ ರಾಜ್ಯಾಧ್ಯಕ್ಷರನ್ನ ಆಯ್ಕೆ ಮಾಡುತ್ತೇವೆ ಎಂದಿದ್ದಾರೆ. ಇದರ ನಡುವೆ ಮುಂದಿನ ರಾಜ್ಯಾಧ್ಯಕ್ಷರು ಯಾರಾಗಬಹುದು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಹಲವರ ಹೆಸರು ಓಡಾಡುತ್ತಿದೆ. ಅದರಲ್ಲಿ ತುಮಕೂರು ಸಂಸದ ವಿ.ಸೋಮಣ್ಣ ಅವರ ಹೆಸರು ಕೂಡ ಒಂದು. ಈ ಬಗ್ಗೆ ವಿ.ಸೋಮಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿ.ಸೋಮಣ್ಣ ಅವರು, ಪಾರ್ಟಿ ನಮ್ಮೆಲ್ಲರಿಗಿಂತ ದೊಡ್ಡದು. ಪಾರ್ಟಿಗಿಙತ ದೊಡ್ಡದು ದೇಶ. ದೇಶ ಇದ್ದರೆ ಪಾರ್ಟಿ, ಪಾರ್ಟಿ ಇದ್ರೆ ನಾವೆಲ್ಲರೂ. ಲಕ್ಷಾಂತರ ಜನ ಕಾರ್ಯಕರ್ತರು. ಜನರ ಮನಸ್ಸಲ್ಲಿ ಸೋಮಣ್ಣ ಹೇಗೆ ಪಾತ್ರ ಆಗಿದ್ದಾರೆ ಎಂಬುದಕ್ಕೆ ಜನ ಇಂದು ಸೆಲೆಬ್ರೇಟ್ ಮಾಡ್ತಿರುವ ರೀತಿಯೇ ಉದಾಹರಣೆ.
ರಾಷ್ಟ್ರದ ಪ್ರಧಾನ ಮಂತ್ರಿಗಳು ನಮಗೆ ಒಂದೊಳ್ಳೆ ಕೆಲಸವನ್ನು ನೀಡಿದ್ದಾರೆ. ಇಡೀ ದೇಶವನ್ನು ಸುತ್ತಾಡಬೇಕಿದೆ. ನೀವೂ ಈಗ ಏನು ಕೇಳಿದ್ರಿ (ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟಿಯಲ್ಲಿ ನಿಮ್ಮ ಹೆಸರು) ಅದರ ಸಂಪೂರ್ಣ ಮಾಹಿತಿ ನನಗೆ ಇಲ್ಲ. ಅದರ ಬಗ್ಗೆ ನನಗೆ ಚಿಂತನೆಯು ಇಲ್ಲ. ಒಂದು ಸತ್ಯ ನಮ್ಗಿಂತ ಪಾರ್ಟಿ ದೊಡ್ಡದು, ಪಾರ್ಟಿಗಿಂತ ದೇಶ ದೊಡ್ಡದು. ಅಂತಹ ಸಂದರ್ಭ, ಸನ್ನಿವೇಶಗಳನ್ನ, ಯಾರಿಗೆ ಯಾವುದನ್ನ ಕೊಡಬೇಕು ಎಂಬುದನ್ನ ರಾಷ್ಟ್ರೀಯ ನಾಯಕರಿಗೆ ಅನುಭವವಿದೆ, ಮನವರಿಕೆಯೂ ಇದೆ. ಈಗ ನನಗೇನು ಕೆಲಸ ಕೊಟ್ಟಿದ್ದಾರೆ ಇದನ್ನ ಚೆನ್ನಾಗಿ ಮಾಡಬೇಕು ಅಷ್ಟೇ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








