Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲೆಯಾದ್ಯಂತ ತೊಗರಿ ಖರೀದಿ ಕೇಂದ್ರ ಆರಂಭ

---Advertisement---

 

 

ಚಿತ್ರದುರ್ಗ. ಡಿ.23: ಕರ್ನಾಟಕ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿಗೆ ತೊಗರಿ ಖರೀದಿ ಮಾಡಲು ಜಿಲ್ಲೆಯಾದ್ಯಂತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ ರೂ.8,000 ಬೆಂಬಲ ನಿಗದಿ ಮಾಡಿದೆ. ರೈತರಿಂದ ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ತೊಗರಿ ಖರೀದಿ ಮಾಡಲು ಜಿಲ್ಲಾ ಟಾಸ್ಕ್ ಫೋರ್ಸ್‍ನಲ್ಲಿ ತೀರ್ಮಾನಿಸಲಾಗಿದೆ. ಚಿತ್ರದುರ್ಗ ನಗರದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ “ಓಂಈಇಆ” ಸಂಸ್ಥೆಯ ಪರವಾಗಿ ತೋಗರಿ ಖರೀದಿಸಲಿದೆ.

ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿ, ಚಿಕ್ಕಮದುರೆ, ಮೀರಸಾಬಿಹಳ್ಳಿ ಪಿ.ಎ.ಸಿ.ಎಸ್, ಚಳ್ಳಕೆರೆಯ ಚಲುಮೆರುದ್ರಸ್ವಾಮಿ ರೈತ ಉತ್ಪಾದಕ ಕೇಂದ್ರ, ಹಿರಿಯೂರಿನ ಎ.ಪಿ.ಎಂ.ಸಿಯಲ್ಲಿರುವ ಈಶ ರೈತ ಉತ್ಪಾದಕ ಕೇಂದ್ರ, ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಪಿ.ಎ.ಸಿ.ಎಸ್, ತುರುವನೂರಿನ ಶ್ರೀ ಮಂಜುನಾಥಸ್ವಾಮಿ ರೈತ ಉತ್ಪಾದಕ ಕೇಂದ್ರ, ಚಿತ್ರದುರ್ಗ ನಗರದ ಟೌನ್ ಸಹಕಾರ ಸಂಘ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಕೊಂಡ್ಲಹಳ್ಳಿ ಬೀಳಿನೀರು ಚಿಲುಮೆ ಕೃಷಿ ಮತ್ತು ರೇಷ್ಮೆ ರೈತ ಉತ್ಪಾದಕರ ಕಂಪನಿ, ಮೊಳಕಾಲ್ಮೂರು ಪಟ್ಟಣ ಸಹಕಾರ ಸಂಘದಲ್ಲಿ ತೋಗರಿ ಬೇಳೆ ಖರೀದಿಸಲಾಗುವುದು.

ತೊಗರಿ ಖರೀದಿ ನೋಂದಣಿಗೆ ಅವಕಾಶವಿದ್ದು, ರೈತರು ಆಧಾರ್ ಕಾರ್ಡ್‍ನೊಂದಿಗೆ ಬಯೋಮೆಟ್ರಿಕ್ ಮೂಲಕ ನೋಂದಾಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ
ರಾಮಜೋಗಿಹಳ್ಳಿ-9741392578,    ಚಿಕ್ಕಮದುರೆ-6362928198,    ಮೀರಸಾಬಿಹಳ್ಳಿ-9686153879,
ಚಳ್ಳಕೆರೆ-8217399538,
ಹಿರಿಯೂರು-9535196763, ಚಿಕ್ಕಗೊಂಡನಹಳ್ಳಿ-6362187408, ತುರುವನೂರು-9620266826,        ಚಿತ್ರದುರ್ಗ-8904308894,
ಕೊಂಡ್ಲಹಳ್ಳಿ-9901939348 ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಕರೆ ಮಾಡಬಹುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಚಿತ್ರದುರ್ಗ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...