ಸುದ್ದಿಒನ್, ಚಿತ್ರದುರ್ಗ, ಜೂ. 19 : ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಮಂಗಳವಾರ ರಾತ್ರಿ 9:00 ಗಂಟೆಯಿಂದ ಬುಧವಾರ ಬೆಳಗ್ಗೆವರೆಗೂ 12 ಗಂಟೆವರೆಗೆ ಲಾರಿಗಳನ್ನು ನಿಲ್ಲಿಸಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾರಿ ಸಂಚರಿಸುವ ನಿಯಮ ರಾತ್ರಿ 3:00 ಗಂಟೆಯಿಂದ ಬೆಳಿಗ್ಗೆ 6:00 ವರೆಗೆ ಮಾತ್ರ ಖಾಲಿ ಲಾರಿಗಳು ಸಂಚರಿಸಬೇಕು. ತದನಂತರ ಬೆಳಗ್ಗೆ 11:00 ಗಂಟೆ ಯಿಂದ ಸಂಜೆ 5:00 ವರೆಗೂ ಗ್ರಾಮದೊಳಗೆ ಹೋಗಬೇಕು ಇದನ್ನು ಬಿಟ್ಟು ದಿನವಿಡೀ ಲಾರಿಗಳು ಓಡಾಡುತ್ತವೆ. ಇದರಿಂದ ಲಾರಿಗಳನ್ನು ನಿಲ್ಲಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಗಳು :
1.ಅದಿರು ತುಂಬಿದ ಲಾರಿಯ ಮೇಲೆ ತಾಡ್ಪಲ್ ಹಾಕುವುದಿಲ್ಲ.
2. ಶಾಲಾ ಕಾಲೇಜಿಗೆ ಓಡಾಡುವ ಮಕ್ಕಳಿಗೆ ತೊಂದರೆ ಆಗುತ್ತಿದೆ.
3.ಮನೆಯ ಒಳಗಡೆ ಧೂಳಿನಿಂದ ಆಹಾರ ಪದಾರ್ಥ ಊಟ ಮಾಡಲು ಸಾಧ್ಯವಾಗುತ್ತಿಲ್ಲ.
4. ಭೀಮಸಮುದ್ರದಿಂದ ವಿ ಪಾಳ್ಯದವರೆಗೆ ರಸ್ತೆ ಹದಗೆಟ್ಟಿದೆ. 5.ಬೈಕ್ ಸವಾರರ ಮೇಲೆ ಧೂಳು ಹೆಚ್ಚಾಗುತ್ತಿದೆ.
ಸಾರ್ವಜನಿಕರ ದೂರು :
ಸರ್ಕಾರಕ್ಕೆ ಗಣಿಗಾರಿಕೆಯಿಂದ ಅನುಕೂಲವಾಗುತ್ತದೆ. ಆದರೆ ಸಾರ್ವಜನಿಕನ ಮೇಲೆ ದಿನನಿತ್ಯ ಕಿರಿಕಿರಿ ಗೊತ್ತಾಗುವುದಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು. ದಿನನಿತ್ಯ ಲಾರಿಗಳಿಂದ ತೊಂದರೆಯಾಗುತ್ತಿರುವುದನ್ನು ತಕ್ಷಣ ಬಗೆಹರಿಸಬೇಕು ಎಂದು ತಿಳಿಸಿದ್ದಾರೆ.
ಸರ್ಕಾರದವರು ಗ್ರಾಮದ ಹೊರಗಡೆ ರಸ್ತೆ ಮಾಡಿ ಲಾರಿ ಸಂಚರಿಸಲು ಅನುವು ಮಾಡಿಕೊಡಲಿ. ಇಲ್ಲದಿದ್ದರೆ ಸಾರ್ವಜನಿಕರು ಅನಾರೋಗ್ಯದಿಂದ ನರಳುವ ಪರಿಸ್ಥಿತಿ ಬರುತ್ತದೆ. ಹಾಗೂ ಶಾಲಾ ಕಾಲೇಜಿಗೆ ಹೋಗುವ ಮಕ್ಕಳು, ವೃದ್ಧರು ಬೈಕ್ ಸವಾರರ ಮೇಲೆ ಲಾರಿ ಓಡಾಡುವಾಗ ದೂಳು ಕಣ್ಣಿಗೆ ಬರುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















