Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾರಿಗೆ ನೌಕರರ ಮುಷ್ಕರ : ಹೇಗಿದೆ ಜನರ ಪರದಾಟ..?

---Advertisement---

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ಮುಷ್ಕರ ನಡೆಸುತ್ತಿದ್ದು, ಬಸ್ ಗಳು ರಸ್ತೆಗೆ ಇಳಿದಿಲ್ಲ. ಪ್ರತಿದಿನ ಕೆಲಸ, ಕಾರ್ಯಗಳಿಗೆ, ಶಾಲಾ – ಕಾಲೇಜುಗಳಿಗೆ ಹೋಗಬೇಕಾದವರು ಇದೇ ಬಸ್ ಗಳನ್ನೇ ನಂಬಿಕೊಂಡಿರುತ್ತಾರೆ. ಆದರೆ ಇಂದು ಬಸ್ ಗಳಿಲ್ಲದ ಕಾರಣ ಪರದಾಟಬೇಕಾದ ಪರಿಸ್ಥಿತಿ ಎದುರಾಗಿದೆ.

ಸರ್ಕಾರಿ ಬಸ್ ಗಳು ಡಿಪೋದಲ್ಲಿಯೇ ನಿಂತ ಕಾರಣ, ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ ಗಳು ಕಾಣಿಸುತ್ತಾ ಇದಾವೆ. ಹೈಕೋರ್ಟ್ ಸೂಚನೆ ನೀಡಿದ್ದರು ಕೂಡ ಸಾರಿಗೆ ನೌಕರರು ತಮ್ಮ ಹಠವನ್ನ ಬಿಡ್ತಾ ಇಲ್ಲ. ಇವತ್ತು ಒಂದು ದಿನ ಪ್ರತಿಭಟನೆಯನ್ನ ಮುಂದೂಡಿ ಎಂದು ಹೈಕೋರ್ಟ್ ಸೂಚನೆಯನ್ನ ನೀಡಿತ್ತು. ಆದರೂ ಸಾರಿಗೆ ನೌಕರರು ಪ್ರತಿಭಟನೆಯನ್ನು ಮಾಡ್ತಾ ಇದ್ದಾರೆ.

ಈ ಮೊದಲೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದರು. ನಾವೂ ಎಲ್ಲದಕ್ಕೂ ಸಿದ್ಧತೆಯನ್ನ ಮಾಡಿಕೊಂಡಿದ್ದೇವೆ. ಖಾಸಗಿ ಬಸ್ ನವರ ಜೊತೆಗೆ ಮಾತನಾಡಿದ್ದೇವೆ ಅಂದಿದ್ದರು. ಅದರಂತೆ ಈಗ ಸಾಕಷ್ಟು ಜಿಲ್ಲೆಗಳ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ ಗಳು ನಿಂತಿವೆ. ಈ ಮೊದಲೆಲ್ಲಾ ಸರ್ಕಾರಿ‌ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ ಗಳ ಪ್ರವೇಶವೇ ಇರಲಿಲ್ಲ.

ಹಾಗೇ ಶಾಲಾ ಕಾಲೇಜಿಗೆ ಹೋಗಬೇಕಾದ ಮಕ್ಕಳಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಖಾಸಗಿ ಶಾಲೆಯ ಜೊತೆಗೆ ಮಾತನಾಡಿದ್ದಾರೆ. ಖಾಸಗಿ ಶಾಲೆಯ ಬಸ್ ಗಳಲ್ಲಿಯೇ ಸರ್ಕಾರಿ ಶಾಲೆಯ ಮಕ್ಕಳನ್ನು ಡ್ರಾಪ್ ಮಾಡುವಂತೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ವ್ಯವಸ್ಥೆಯನ್ನ ಹೆಚ್ಚು ಮಾಡಿದ್ದಾರೆ. ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಈ ಮುಷ್ಕರ ಕೈಬಿಡಲ್ಲ ಅಂತ ಹೇಳಿದ್ದಾರೆ. ಸರ್ಕಾರ ಯಾವ ‌ನಿರ್ಧಾರ ಕೈಗೊಳ್ಳುತ್ತೆ ಎಂಬುದನ್ನ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment