Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಧಾರ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್: ಹೊಸ ಸಾಫ್ಟ್‌ವೇರ್‌ದಿಂದ ಫೇಸ್ ವೆರಿಫಿಕೇಶನ್ ಮತ್ತಷ್ಟು ಸುಲಭ.!

---Advertisement---

ದೆಹಲಿ.ಸೆಪ್ಟೆಂಬರ್.11: ದೇಶದ ನಾಗರಿಕರಿಗೆ ಅತ್ಯಂತ ಮಹತ್ವದ ದಾಖಲೆಯಾಗಿರುವ ಆಧಾರ್ ಕಾರ್ಡ್‌ ಪರಿಶೀಲನೆ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಸರ್ಕಾರದ ಯೋಜನೆಗಳಿಂದ ಹಿಡಿದು ಸಿಮ್ ಕಾರ್ಡ್ ಖರೀದಿ, ಬ್ಯಾಂಕ್ ಖಾತೆ ತೆರೆಯುವುದು ಹಾಗೂ ಕೆವೈಸಿ (KYC) ಪ್ರಕ್ರಿಯೆಗಳವರೆಗೆ ಆಧಾರ್ ಕಡ್ಡಾಯವಾಗಿದೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರು ಎದುರಿಸುತ್ತಿದ್ದ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ನೂತನ ಸಾಫ್ಟ್‌ವೇರ್ ವ್ಯವಸ್ಥೆಯನ್ನು ತರಲಾಗಿದೆ.

ಇಲ್ಲಿಯವರೆಗೆ ಬ್ಯಾಂಕಿಂಗ್ ಅಥವಾ ವಿಮಾ ಸೇವೆಗಳಲ್ಲಿ ಮುಖ ದೃಢೀಕರಣ (Face Verification) ಮಾಡಲು ಗ್ರಾಹಕರು ಪ್ರತ್ಯೇಕವಾಗಿ ‘ಆಧಾರ್ ಫೇಸ್ ಆರ್‌ಡಿ’ (Aadhaar Face RD) ನಂತಹ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿತ್ತು. ಇದರಿಂದಾಗಿ ಪರಿಶೀಲನಾ ಪ್ರಕ್ರಿಯೆ ತಡವಾಗುತ್ತಿತ್ತು ಹಾಗೂ ತಾಂತ್ರಿಕ ದೋಷಗಳು ಎದುರಾಗುತ್ತಿದ್ದವು. ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವ ಯುಐಡಿಎಐ, ಬ್ಯಾಂಕಿಂಗ್, ಇನ್ಶೂರೆನ್ಸ್ ಮತ್ತು ಬ್ರೋಕಿಂಗ್ ಸಂಸ್ಥೆಗಳು ತಮ್ಮ ಸ್ವಂತ ಆ್ಯಪ್‌ಗಳಲ್ಲೇ ನೇರವಾಗಿ ಫೇಸ್ ಅಥೆಂಟಿಕೇಶನ್ ನಡೆಸಲು ಅನುಕೂಲವಾಗುವಂತೆ ವಿಶೇಷ ಸಾಫ್ಟ್‌ವೇರ್ ಮತ್ತು ಸ್ಯಾಂಡ್‌ಬಾಕ್ಸ್ (Sandbox) ಸೌಲಭ್ಯವನ್ನು ಒದಗಿಸಿದೆ.

ಈ ಹೊಸ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್, ಲೈವ್‌ನೆಸ್ ಡಿಟೆಕ್ಷನ್ ಹಾಗೂ ನಕಲಿ ಮುಖವಾಡಗಳನ್ನು ತಡೆಯುವ ಸ್ಪೂಫಿಂಗ್ ವಿರೋಧಿ ತಂತ್ರಜ್ಞಾನವನ್ನು ಒಳಗೊಂಡಿದೆ. ಯಾವುದೇ ಬಯೋಮೆಟ್ರಿಕ್ ಹಾರ್ಡ್‌ವೇರ್ ಸಾಧನಗಳಿಲ್ಲದೆ ಕೇವಲ ಆ್ಯಪ್ ಮೂಲಕವೇ ನಿಖರ ಹಾಗೂ ಸುರಕ್ಷಿತವಾಗಿ ಮುಖ ಪರಿಶೀಲನೆ ನಡೆಸಲು ಇದು ನೆರವಾಗಲಿದೆ. ಬ್ಯಾಂಕುಗಳು ತಮ್ಮದೇ ಸರ್ವರ್‌ಗಳಲ್ಲಿ ಈ ಪ್ರಕ್ರಿಯೆ ನಡೆಸುವುದರಿಂದ ಯುಐಡಿಎಐ ಸರ್ವರ್‌ಗಳ ಮೇಲಿನ ಒತ್ತಡವೂ ಗಣನೀಯವಾಗಿ ಕಡಿಮೆಯಾಗಲಿದೆ.

 

Join WhatsApp

Join Now

Join Telegram

Join Now