Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಷ್ಕರದ ತೀರ್ಮಾನದ ಬೆನ್ನಲ್ಲೇ‌ ಸಾರಿಗೆ ನೌಕರ ಸಂಘದ ಮುಖಂಡ ಅನಂತ್ ಸುಬ್ಬುರಾವ್ ನಿಧನ..!

---Advertisement---

ಬೆಂಗಳೂರು: ಸಾರಿಗೆ ನೌಕರರು ನಾಳೆಯಿಂದ ಮುಷ್ಕರ ಕೈಗೊಂಡಿದ್ದರು. ಆದರೆ ದುಃಖದ ಸಂಗತಿ ಅಂದ್ರೆ ಸಾರಿಗೆ ನೌಕರ ಸಂಘದ ಮುಖಂಡರಾಗಿದ್ದಂತ ಅನಂತ್ ಸುಬ್ಬುರಾವ್ ನಿಧನರಾಗಿದ್ದಾರೆ. ಹೃದಯಾಘಾತದಿಂದ ಇಂದು ಸಂಜೆಯೇ ಅಗಲಿದ್ದಾರೆ. ಅನಂತ್ ಸುಬ್ಬುರಾವ್ ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರ ನಿಧನದಿಂದ ಸಾರಿಗೆ ನೌಕರರು ದುಃಖತಪ್ತರಾಗಿದ್ದು, ನಾಳೆ ನಡೆಯಬೇಕಿದ್ದ ಮುಷ್ಕರವನ್ನು ಮುಂದೂಡಿಕೆ ಮಾಡಿದ್ದಾರೆ.

ಸಾರಿಗೆ ನೌಕರರ‌ ಜಂಟಿ ಕ್ರಿಯಾ ಅಧ್ಯಕ್ಷರಾಗಿ ಅನಂತ್ ಸುಬ್ಬುರಾವ್ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ವಿಜಯನಗರದ ಗ್ಲೋಬಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಇವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರು. ಸಾರಿಗೆ ನೌಕರರ ಧ್ವನಿಯಾಗಿ ಕೆಲಸ ಮಾಡಿದವರು. ಅವರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಕಂಡರೂ ಅವರ ಜೊತೆಗೆ ನಿಂತು ಹೋರಾಟಕ್ಕೆ ಇಳಿಯುತ್ತಿದ್ದರು. ಸಾರಿಗೆ ನೌಕರರಿಗೆ ನ್ಯಾಯ ಕೊಡಿಸುವುದಕ್ಕೆ ಮುಂದೆ ನಿಲ್ಲುತ್ತಿದ್ದರು. ಅವರಿಗೆ ಶಕ್ತಿಯಾಗಿದ್ದ ಅನಂತ್ ಸುಬ್ಬುರಾವ್ ಅವರೇ ಈಗ ಇಲ್ಲದಂತಾಗಿದೆ.

ಹಲವು ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟು, ನಾಳೆ‌ ಮುಷ್ಕರಕ್ಕೆ ಸಿದ್ಧರಾಗಿದ್ದರು‌. ಬೇಡಿಕೆ ಈಡೇರಿಸದೆ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನೇ ನೀಡಿದ್ದರು‌. ಅವರಿಗೆಲ್ಲ ಶಕ್ತಿಯಾಗಿ ಅನಂತ್ ಸುಬ್ಬು ರಾವ್ ನಿಂತಿದ್ದರು. ಈಗ ಅವರೇ ಇಲ್ಲದಾಗಿದೆ. ಹೀಗಾಗಿಯೇ ನಾಳೆ ನಡೆಯಬೇಕಿದ್ದ ಮುಷ್ಕರವನ್ನು ಮುಂದೂಡಿಕೆ ಮಾಡಿದ್ದಾರೆ. ನಾಳೆ ಅನಂತ್ ಸುಬ್ಬುರಾವ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ. ಸಾರಿಗೆ ನೌಕರರು ಕೂಡ ಅಂತಿಮ ದರ್ಶನ ಪಡೆಯಬಹುದು. ಆದರೆ ಜೊತೆಗೆ ನಿಂತು ಎಲ್ಲಾ ರೀತಿಯಾದಂತ ಬೆಂಬಲ ನೀಡುತ್ತಿದ್ದಂತ ದೊಡ್ಡ ಶಕ್ತಿಯನ್ನೇ ಕಳೆದುಕೊಂಡು ದುಃಖದಲ್ಲಿದ್ದಾರೆ ಸಾರಿಗೆ ನೌಕರರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now