Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಾಲಿವುಡ್ ರೇಂಜ್ ನಲ್ಲಿರುವ ‘ಟಾಕ್ಸಿಕ್’ ಟೀಸರ್ ಗೆ ಹೊಗಳಿಕೆಯ ಸುರಿಮಳೆ

---Advertisement---

ಬೆಂಗಳೂರು: ಟಾಕ್ಸಿಕ್ ಬಹಳ ನಿರೀಕ್ಷೆ ಇರುವಂತಹ ಚಿತ್ರ. ಕೇವಲ ಕನ್ನಡಕ್ಕೆ ಮಾತ್ರವಲ್ಲ ವರ್ಲ್ಡ್ ವೈಡ್ ವೈಟಿಂಗ್ ನಲ್ಲಿದ್ದಾರೆ. ಅದಕ್ಕೆ ತಕ್ಕ ಹಾಗೆ ಸಿನಿಮಾದ ಒಂದೊಂದೆ ಅಪ್ಟೇಡ್ ಅನ್ನ ಚಿತ್ರತಂಡ ಬಿಡ್ತಾ ಇದೆ. ಹೀಗಾಗಿಯೇ ನಿರೀಕ್ಷೆ ದುಪ್ಪಟ್ಟಾಗಿದೆ. ಪಾತ್ರಗಳ ಪರಿಚಯದ ಪೋಸ್ಟರ್ಸ್ ನೋಡಿನೆ ಸಿನಿ ಪ್ರೇಮಿಗಳು ವಾವ್ ಅಂತಿದ್ದಾರೆ. ಇದೀಗ ಬಹಳ ಮುಖ್ಯವಾದ ಪಾತ್ರದ ಪರಿಚಯವೊಂದನ್ನ ಟಾಕ್ಸಿಕ್ ತಂಡದಿಂದ ಮಾಡಿಕೊಡಲಾಗಿದೆ.

ಇಂದು ಯಶ್ ಅವರ ಹುಟ್ಟುಹಬ್ಬ. 40 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮವನ್ನು ಅಭಿಮಾನಿಗಳು ಹಬ್ಬದಂತೆ ಸೆಲೆಬ್ರೇಟ್ ಮಾಡಿದ್ದಾರೆ. ಅಷ್ಟು ಇಷ್ಟ ಪಡುವ ಅಭಿಮಾನಿಗಳಿಗೆ, ಬರ್ತ್ ಡೇನಾ ಅಷ್ಟು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವ ಅಭಿಮಾನಿಗಳಿಗೆ ರಿಟರ್ನ್ ಗಿಫ್ಟ್ ಏನಾದ್ರೂ ಕೊಡದೆ ಇದ್ರೆ ಏನ್ ಚೆಂದ ಹೇಳಿ. ಯಶ್ ಸೂಪರ್ ಆಗಿರೋ ರಿಟರ್ನ್ ಗಿಫ್ಟ್ ನೀಡಿದ್ದಾರೆ. ಅದುವೆ ಟಾಕ್ಸಿಕ್ ನಲ್ಲಿ ತಮ್ಮ ಪಾತ್ರ ಹೇಗಿರಲಿದೆ..? ಅದರ ಹೆಸರೇನು ಎಂಬುದನ್ನ ರಿವೀಲ್ ಮಾಡಿದ್ದಾರೆ.

ಟಾಕ್ಸಿಕ್’ ಚಿತ್ರದ ಓಪನಿಂಗ್ ದೃಶ್ಯ ಆರಂಭ ಆಗೋದು ಸ್ಮಶಾನದ ಮೂಲಕ. ಹೆಣ ಹೂಳುವ ಕೆಲಸ ಆಗುತ್ತಾ ಇರುತ್ತದೆ. ಅಲ್ಲಿಗೆ ಬರೋ ಗ್ಯಾಂಗ್ ಇವರ ಮೇಲೆ ಹಲ್ಲೆ ಮಾಡುತ್ತದೆ. ಅವರನ್ನು ಸ್ಮಶಾನದಿಂದ ಹೊರ ಹಾಕುತ್ತಾರೆ. ಆಗ ಎಂಟ್ರಿ ಆಗುತ್ತಾನೆ ರಾಯ (ಯಶ್). ಬೋಲ್ಡ್ ದೃಶ್ಯವನ್ನು ತೋರಿಸೋ ನಿರ್ದೇಶಕಿ ಗೀತು ಮೋಹನ್​​ದಾಸ್, ನಂತರ ಮಾಸ್ ಅಂಶ ತೋರಿಸುತ್ತಾರೆ. ಜೊತೆಗೆ ಡೈಲಾಗ್ ಒಂದನ್ನು ರಿವೀಲ್ ಮಾಡಿದ್ದಾರೆ. Daddy’s Home ಎಂಬ ಡೈಲಾಗ್ . ಈ ಗ್ಯಾಂಗ್ ಸ್ಟರ್ ಸಿನಿಮಾದ ಕ್ಯಾರೆಕ್ಟರ್ ಇಂಟ್ರುಡಕ್ಷನ್ ಟೀಸರ್ ಇಷ್ಟು ಅದ್ಭುತವಾಗಿರುವಾಗ ನಿರೀಕ್ಷೆ ದುಪ್ಪಟ್ಟಾಗದೆ ಇರಲು ಹೇಗೆ ಸಾಧ್ಯ ಹೇಳಿ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now