Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಟೌನ್ ಕೋ-ಆಪರೇಟಿವ್ ಸೊಸೈಟಿ  ತನ್ನ ಗ್ರಾಹಕರಿಗೆ ಬ್ಯಾಂಕ್ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ : ಕೇಂದ್ರ ಸಚಿವ  ಎ.ನಾರಾಯಣಸ್ವಾಮಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಜೂ.03) :  ಮುಂದಿನ ದಿನಮಾನದಲ್ಲಿ ನಗರದ ಕೋ-ಆಪರೇಟಿವ್ ಸೊಸೈಟಿ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಭರವಸೆಯನ್ನು ನೀಡಿದರು.

ನಗರದ ಕೋ-ಆಪರೇಟಿವ್ ಸೊಸೈಟಿಗೆ ಬೇಟಿ ನೀಡಿದಾಗ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ ಮತ್ತು ಪದಾಧಿಕಾರಿಗಳು ಸ್ವಾಗತ ಕೋರಿ ಆತ್ಮೀಯವಾಗಿ ಸನ್ಮಾನಿಸಿದರು. ಇದಕ್ಕೆ ಉತ್ತರವಾಗಿ ಮಾತನಾಡಿದ ಸಚಿವರು, ಈ ಸೊಸೈಟಿ ತುಂಬಾ ಹಳೆಯದಾಗಿದ್ದು, ಇದಕ್ಕೆ ಹೆಚ್ಚಿನ ರೀತಿಯ ಹೆಸರು ಇದೆ, ಇದನ್ನು ಸ್ಥಾಪನೆ ಮಾಡಿದ ತಿರುಮಲಾಚಾರ್ ಉತ್ತಮ ಆಶಯವನ್ನು ಇಟ್ಟುಕೊಂಡು ಸ್ಥಾಪನೆ ಮಾಡಿದ್ದಾರೆ ಇದರಿಂದಾಗಿ 100 ವರ್ಷ ದಾಟಿ ಸೊಸೈಟಿ ಬೆಳದಿದೆ. ಇಲ್ಲಿ ಉತ್ತಮವಾದ ಪದಾಧಿಕಾರಿಗಳ ದಂಡು ಇದೆ ಇದರಿಂದ ಇಲ್ಲಿನ ಷೇರುದಾರರಿಗೆ ಉತ್ತಮವಾದ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಇವರ ಕಾರ್ಯವನ್ನು ಪ್ರಶಂಸಿದರು.

ಸ್ವಾತಂತ್ರ ಪೂರ್ವದಲ್ಲಿ ಪ್ರಾರಂಭವಾದ ಈ ಸೊಸೈಟಿ 3000 ಜನ ಸದಸ್ಯರಿದ್ದಾರೆ, ಇದರ ಘನತೆ ಗೌರವವನ್ನು ಎತ್ತಿಹಿಡಿಯಲಾಗಿದೆ. ಈ ಭಾಗದ ನಾಗರೀಕರಿಗೆ ಬ್ಯಾಂಕ್ ರೀತಿಯಲ್ಲಿ ಸೌಲಭ್ಯವನ್ನು ನೀಡುತ್ತಿರುವ ಸೂಸೈಟಿ ಎಂದರೆ ಟೌನ್ ಕೋ-ಆಪರೇಟಿವ್ ಸೊಸೈಟಿ ಎನ್ನಬಹುದಾಗಿದೆ. ಇಂದಿನ  ಆಡಳಿತ ಮಂಡಳಿ ಸಂಸ್ಥಾಪನಾ ಚಾರ್ಯರವರ ಹೆಸರನ್ನು ಉಳಿಸುವ ಕಾರ್ಯವನ್ನು ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ ರವರು ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಈ ಸೊಸೈಟಿಗೆ ವಿವಿಧ ರೀತಿಯ ಬೇಡಿಕೆಯನ್ನು ಇಟ್ಟಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡುವುದರ ಬದಲಿಗೆ ಮುಂದಿನ ದಿನದಲ್ಲಿ ಒಂದು ದಿನ ಪೂರ್ಣವಾಗಿ ಇಲ್ಲಿ ಕಳೆಯುವುದರ ಮೂಲಕ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದು ಅದರ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು ಎಂದ ಸಚಿವರು, ಇಲ್ಲಿ ಸಹಕಾರ ಉತ್ತಮವಾಗಿ ಬೆಳದಿದೆ ಇವರಿಂದ ಇದರ ಬಗ್ಗೆ ನಾನು ತಿಳಿಯಬೇಕಿದೆ ಎಂದರು.

ಈ ಸಂದರ್ಭದಲ್ಲಿ ಟೌನ್ ಕೋ-ಆಪರೇಟಿವ್ ಸೂಸೈಟಿಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸೂರ್ಯ ಪ್ರಕಾಶ್, ಸದಸ್ಯರಾದ ನಾಗರಾಜ್ ಬೇದ್ರೇ, ಎಸ್,ವಿ. ಪ್ರಸನ್ನ, ಡಾ.ರಹಮತ್ತುಲ್ಲಾ, ಶ್ರೀನಿವಾಸ್ ಮೂರ್ತಿ, ಚಿಕ್ಕಣ್ಣ ಕೆ. ಸೈಯದ್ ನೂರುಲ್ಲಾ , ಚಂದ್ರಪ್ಪ, ಪ್ರಕಾಶ್ ಕೆ. ಶ್ರೀಮತಿ ಚಂಪಕಾ ಶ್ರೀಮತಿ ಪುಪ್ಪವಲ್ಲಿ ವ್ಯವಸ್ಥಾಪಕರಾದ ಮಹ್ಮದ್ ನಯೀಮ್ ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...