Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ; ಮಹಿಳೆ ಸಾವು

---Advertisement---

 

ಚಿತ್ರದುರ್ಗ. ಮಾ.31: ಮಾ.28 ರಂದು ಸಂಜೆ ಸುಮಾರು 6.55 ಗಂಟೆಗೆ ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಣಿವೆ ಮಾರಮ್ಮ ನಗರ ಮುಂಭಾಗದ ಕುರಿ ತಿಮ್ಮಪ್ಪ ಬಡಾವಣೆ ಮುಂದೆ ಚಿತ್ರದುರ್ಗದಿಂದ ಬೆಂಗಳೂರು ಕಡೆಗೆ ಹೋಗುವ ಹಳೇ ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್-48 ರಸ್ತೆಯನ್ನು ದಾಟುತಿದ್ದ ಸುಮಾರು 50-55 ವಯಸ್ಸಿನ ಅಪರಿಚಿತ ಮಹಿಳೆಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಕುರಿತು ಪೊಲೀಸ್ ವೃತ್ತ ನಿರೀಕ್ಷಕರು, ಬಡಾವಣೆ ವೃತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಅಪರಿಚಿತ ಮಹಿಳೆ ಸುಮಾರು 5.2 ಅಡಿ ಎತ್ತರ, ಮೃತ ಶವದ ಮೈ ಮೇಲಿನ ಬಟ್ಟಗಳು ನೀಲಿ ಬಣ್ಣದ ತುಂಬು ತೋಳಿನ ಟೀ-ಷರ್ಟ್, ಕೆಂಪು ಬಣ್ಣದ ಲಂಗ, ಕೆಂಪು ಬಣ್ಣದ ಒಳಚಡ್ಡಿ ಧರಿಸಿರುತ್ತಾಳೆ. ಮೃತ ಅಪರಿಚಿತ ಮಹಿಳೆ ವಾರಸುದಾರರು ಪತ್ತೆಯಾದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ದೂರವಾಣಿ ಸಂಖ್ಯೆ 9480803130, ಪೊಲೀಸ್ ಉಪನಿರೀಕ್ಷಕರ ದೂರವಾಣಿ ಸಂಖ್ಯೆ 9480803164, ಕಂಟ್ರೋಲ್ ರೂಂ, ದೂರವಾಣಿ ಸಂಖ್ಯೆ 08194-222781 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now