Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದು ರಾಯರ ಮಧ್ಯಾರಾಧನೆ : ಇಂದಿನ ವಿಶೇಷತೆ ಏನು..? ಪದ್ಮರಾಜ ಆಚಾರ ಮಂಚಾಲೆ ಅವರು ಹೇಳೋದೇನು..?

---Advertisement---

ರಾಯಚೂರು: ರಾಯರ 354ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಈ ಸುಸಂದರ್ಭದಲ್ಲಿ ಇಂದು ಮಠದಲ್ಲಿ ಮಧ್ಯರಾಧನೆ ನೆರವೇರಲಿದೆ. ಭಕ್ತ ಸಾಗರವೇ ಮಂತ್ರಾಲಯಕ್ಕೆ ಹರಿದು ಬಂದಿದೆ.‌ ಇದರ ವಿಶೇಷತೆ ಏನು ಎಂಬುದನ್ನ ಪದ್ಮರಾಜ ಆಚಾರ ಮಂಚಾಲೆ ಅವರು ತಿಳಿಸಿದ್ದಾರೆ.

ಒಬ್ಬ ವ್ಯಕ್ತಿ ಮತ್ತೋರ್ವ ವ್ಯಕ್ತಿಯ ಮೇಲೆ ನಂಬಿಕೆ ಇದ್ದರೆ ಮಾತ್ರ ಸೇರುವಂತಾಗಿದೆ. ಇಂದು ಇಡೀ ಜಗತ್ತು ರಾಯರಿಗೆ ಶರಣಾಗತಿಯಾಗುತ್ತಿದೆ. ಇವತ್ತು 354ನೇ ಆರಾಧನಾ ಮಹೋತ್ಸವವಾಗಿದೆ. ಇವತ್ತು ಶರೀರವಾಗಿ ಬೃಂದಾವನ ಪ್ರವೇಶ ಮಾಡಿ 354 ವರ್ಷವಾಯ್ತು. ಶ್ರಾವಣ ಬಹುಳದಂದು ಬೃಂದಾವನ ಪ್ರವೇಶ ಮಾಡುವಂತಾಗಿದೆ. ರಾಯರು ವಿಶೇಷವಾಗಿ ರಾಮನನ್ನು ಪೂಜಿಸಿರುವಂತವರು. ಹೀಗಾಗಿ ಇವತ್ತಿಗೂ ಆ ಮೂಲ ರಾಮನ ಪೂಜೆ ಪರಂಪರೆಯಲ್ಲಿ ಬಂದಿದೆ. ಸುಬುದೇಂದ್ರ ತೀರ್ಥರು ಇವತ್ತಿಗೂ ಆ ಮೂಲ ರಾಮನ ಪೂಜೆ ಮಾಡ್ತಾರೆ. ಸುರಪಲಾಯದಂತೆ ಮಂತ್ರಾಲಯ. ಸ್ವರ್ಗವೂ ಯಾವ ರೀತಿಯಾಗಿರುತ್ತದೆಯೋ ಮಂತ್ರಾಲಯವೂ ಅದೇ ರೀತಿ ಆಗುತ್ತದೆ. ಅದೇ ರೀತಿ ರಾಯರ ಮಂತ್ರಾಲಯ ದಿನೇ ದಿನೇ ಅಭಿವೃದ್ಧಿಯಾಗುತ್ತಿದೆ ಎಂದಿದ್ದಾರೆ.

ಇನ್ನು ಇಂದು ಮಧ್ಯಾರಾಧನೆಯಾಗಿರುವ ಕಾರಣ ಬೃಂದಾವನಕ್ಕೆ ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡಿದ್ದು, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಗೋಡಂಬಿ, ಒಣದ್ರಾಕ್ಷಿ ಸೇರಿದಂತೆ ವಿವಿಧ ಪದಾರ್ಥಗಳಿಂದ ಮಹಾಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಪೀಠಾಧಿಪತಿ ಸುಬುದೇಂದ್ರ ತೀರ್ಥರಿಂದ ಬೃಂದಾವನಕ್ಕೆ ಅಭಿಷೇಕ ಮಾಡಲಾಗುತ್ತದೆ. ಪ್ರತಿವರ್ಷ ಕೂಡ ಈ ದಿನವನ್ನು ಮಧ್ಯಾರಾಧನೆ ಎಂದೇ ಆರಾಧಿಸಲಾಗುತ್ತದೆ. ಇಂದು ರಾಯರ ದರ್ಶನ ಮಾಡಿದರೆ ತುಂಬಾ ಒಳ್ಳೆಯದು ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಹೀಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಂದು ರಾಯರ ಮಠಕ್ಕೆ ಭೇಟಿ ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment