ಬೆಂಗಳೂರು: ಭಾನುವಾರ, ನವೆಂಬರ್ 8ರಂದು ವೃಶ್ಚಿಕ ರಾಶಿಯಲ್ಲಿ ಚಂದ್ರ ಹಾಗೂ ವಕ್ರಿ ಬುಧನ ಸಂಯೋಗ ಉಂಟಾಗುತ್ತಿರುವುದರಿಂದ ದಿನದ ಭಾವನಾತ್ಮಕ ತೀವ್ರತೆ ಹೆಚ್ಚಿರಲಿದೆ. ಹಳೆಯ ಬಾಕಿ ಉಳಿದ ವಿಷಯಗಳು ಅಥವಾ ಗತಕಾಲದ ನೆನಪುಗಳು ಮರುಕಳಿಸುವ ಸಾಧ್ಯತೆಯಿದ್ದು, ಆಂತರಿಕ ಭಾವನೆಗಳನ್ನು ಸಂಭಾಳಿಸುವುದು ಮುಖ್ಯವಾಗಿದೆ. ನಾಳೆ ನಡೆಯಲಿರುವ ವೃಶ್ಚಿಕ ಅಮಾವಾಸ್ಯೆಗೆ ಮುನ್ನ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸೂಕ್ತ.
ದ್ವಾದಶ ರಾಶಿಗಳ ಭಾನುವಾರದ ದಿನಭವಿಷ್ಯ ಹೀಗಿದೆ
ಮೇಷ (Aries)
ಹಳೆಯ ಆರ್ಥಿಕ ನಿರ್ಧಾರವೊಂದು ಇಂದು ತಲೆನೋವು ತರಬಹುದು. ಬ್ಯಾಂಕ್ ವಿವರಗಳು ಅಥವಾ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಇತ್ಯರ್ಥಪಡಿಸಲು ಇದು ಸೂಕ್ತ ಸಮಯ. ವಕ್ರಿ ಬುಧನ ಪ್ರಭಾವದಿಂದ ಹಣಕಾಸಿನ ಯೋಜನೆಗಳನ್ನು ರೂಪಿಸುವುದು ಯಶಸ್ಸು ತರಲಿದೆ.
ವೃಷಭ (Taurus)
ಸಂಬಂಧಗಳಲ್ಲಿ ಸ್ಥಿರತೆ ಬಯಸುವ ನಿಮಗೆ, ಈ ದಿನ ಸಂಗಾತಿ ಅಥವಾ ಆಪ್ತರೊಂದಿಗೆ ಮನಬಿಚ್ಚಿ ಮಾತನಾಡುವ ಪರಿಸ್ಥಿತಿ ಒದಗಿಬರಲಿದೆ. ಈವರೆಗೆ ಬಚ್ಚಿಟ್ಟಿದ್ದ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಲು ನೇರ ಹಾಗೂ ಪ್ರಾಮಾಣಿಕ ಸಂಭಾಷಣೆ ನಡೆಸಿದರೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.
ಮಿಥುನ (Gemini)
ಇಂದು ನಿಮ್ಮಲ್ಲಿನ ಶೋಧಕ ಪ್ರವೃತ್ತಿ ಜಾಗೃತಗೊಳ್ಳಲಿದೆ. ಸತ್ಯಾಸತ್ಯತೆಗಳನ್ನು ಪತ್ತೆಹಚ್ಚುವ ಅದ್ಭುತ ಸಾಮರ್ಥ್ಯ ನಿಮ್ಮಲ್ಲಿರುತ್ತದೆ. ಯಾರೂ ನಿಮ್ಮನ್ನು ಸುಳ್ಳಿನಿಂದ ವಂಚಿಸಲು ಸಾಧ್ಯವಿಲ್ಲ. ನೀವು ಸಂಗ್ರಹಿಸುವ ಪ್ರಮುಖ ಮಾಹಿತಿ ಮುಂದಿನ ದಿನಗಳಲ್ಲಿ ನೆರವಾಗಲಿದೆ.
ಕಟಕ (Cancer)
ದಿನದ ಮಟ್ಟಿಗೆ ಒಂದು ಹೆಜ್ಜೆ ಹಿಂದಿಟ್ಟಂತೆ ಭಾಸವಾಗಬಹುದು. ಆದರೆ ಇದು ಕೇವಲ ತಾತ್ಕಾಲಿಕ. ಮನಸ್ಸಿಗೆ ಆಯಾಸ ಎನಿಸಿದರೆ ಸ್ವಲ್ಪ ಏಕಾಂತದಲ್ಲಿ ವಿಶ್ರಾಂತಿ ಪಡೆಯಿರಿ. ನಿಮ್ಮ ಭಾವನೆಗಳಿಗೆ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ವೇಗವಾಗಿ ಸುಧಾರಿಸಲಿದೆ.
ಸಿಂಹ (Leo)
ಮಾತಿನ ಮೇಲೆ ಹಿಡಿತವಿರಲಿ. ಆಲೋಚನೆಗಳನ್ನು ಎಲ್ಲರೆದುರು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ; ನಿಮ್ಮ ಮಾತುಗಳೇ ನಿಮ್ಮ ವಿರುದ್ಧ ಬಳಕೆಯಾಗುವ ಸಾಧ್ಯತೆಯಿದೆ. ಮನೆಯ ವಾತಾವರಣ ನೆಮ್ಮದಿ ತರಲಿದ್ದು, ಆಪ್ತ ಸ್ನೇಹಿತರು ಅಥವಾ ಕುಟುಂಬದವರ ಬೆಂಬಲ ಸಿಗಲಿದೆ.
ಕನ್ಯಾ (Virgo)
ಪ್ರತಿಯೊಂದು ವಿಷಯದಲ್ಲೂ ಸಂಶಯ ಅಥವಾ ಅತಿಯಾದ ಊಹೆಗಳನ್ನು ಮಾಡಬೇಡಿ. ಸಂಬಂಧವಿಲ್ಲದ ವಿಷಯಗಳನ್ನು ತಳುಕುಹಾಕಿ ಯೋಚಿಸುವುದು ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು. ನಿಮ್ಮ ಗೊಂದಲಗಳಿಗೆ ನಿಖರ ಕಾರಣವೇನು ಎಂಬುದನ್ನು ವಿಶ್ಲೇಷಿಸಿ.
ತುಲಾ (Libra)
ಹಳೆಯ ನೆನಪುಗಳು ಕಾಡುವ ದಿನ. ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಹುಡುಕಲು ಅಥವಾ ಜೋಡಿಸಲು ಇದು ಸಕಾಲ. ಬಹಳ ದಿನಗಳಿಂದ ಕಾಣೆಯಾಗಿದೆ ಎಂದು ಭಾವಿಸಿದ್ದ ಪ್ರಮುಖ ಅಥವಾ ಪ್ರೀತಿಯ ವಸ್ತುವೊಂದು ಇಂದು ಅನಿರೀಕ್ಷಿತವಾಗಿ ಸಿಗುವ ಸಾಧ್ಯತೆಯಿದೆ.
ವೃಶ್ಚಿಕ (Scorpio)
ನಿಮ್ಮದೇ ರಾಶಿಯಲ್ಲಿ ಚಂದ್ರ ಮತ್ತು ವಕ್ರಿ ಬುಧ ಜತೆಯಾಗಿರುವುದರಿಂದ ಅತೀಂದ್ರಿಯ ಒಳನೋಟ ಹಾಗೂ ಭಾವನಾತ್ಮಕ ಸಂವೇದನೆ ಹೆಚ್ಚಿರಲಿದೆ. ಇತರರ ಭಾವನೆಗಳಿಂದ ಮಾನಸಿಕ ದಣಿವು ಉಂಟಾಗಬಹುದು. ವಿಶ್ರಾಂತಿಗಾಗಿ ಮನೆಯಲ್ಲೇ ಉಳಿದು ಸ್ವಯಂ ಆರೈಕೆಗೆ ಆದ್ಯತೆ ನೀಡುವುದು ಉತ್ತಮ.
ಧನು (Sagittarius)
ಸಾಹಸ ಹಾಗೂ ಪ್ರವಾಸದ ತುಡಿತವಿದ್ದರೂ, ಇಂದಿನ ಗ್ರಹಗತಿಗಳು ನಿಮ್ಮ ವೇಗಕ್ಕೆ ತಡೆ ಹಾಕಬಹುದು. ದೂರದ ಪ್ರಯಾಣಗಳಿಗೆ ಇದು ಪ್ರಶಸ್ತ ಸಮಯವಲ್ಲ. ನಿಮ್ಮ ಗುರಿಗಳನ್ನು ತಲುಪಲು ಪರ್ಯಾಯ ಮಾರ್ಗಗಳನ್ನು ಆಲೋಚಿಸಿ ತಾಳ್ಮೆಯಿಂದ ಹೆಜ್ಜೆಯಿಡಿ.
ಮಕರ (Capricorn)
ನಿಮ್ಮ ಪ್ರಗತಿಗೆ ಯಾವುದು ಅಡ್ಡಿಯಾಗುತ್ತಿದೆ ಎಂಬುದನ್ನು ಗುರುತಿಸಲು ಇದು ಸಕಾಲ. ನಿಮ್ಮ ಗುರಿಗಳನ್ನು ತಡೆಯುವ ಹಳೆಯ ಅಭ್ಯಾಸಗಳು ಅಥವಾ ನಿಷ್ಪ್ರಯೋಜಕ ಸಂಬಂಧಗಳನ್ನು ಕಡಿದುಕೊಳ್ಳಲು ಧೈರ್ಯ ಸಿಗಲಿದೆ. ಹೊಸ ಆರಂಭಕ್ಕೆ ಅಡಿಪಾಯ ಹಾಕಿ.
ಕುಂಭ (Aquarius)
ನಿಮ್ಮ ಬುದ್ಧಿವಂತಿಕೆಗೆ ಹೊಸ ಆಯಾಮ ಸಿಗಲಿದೆ. ಸಂಕೀರ್ಣ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರಗಳು ಹೊಳೆಯಲಿವೆ. ನಿಮ್ಮ ಈ ಹೊಸ ಆಲೋಚನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಮೂಲಕ ಅವರ ಜೀವನ ಸುಧಾರಣೆಗೂ ನೀವು ಮಾರ್ಗದರ್ಶನ ನೀಡಬಹುದು.

ಮೀನ (Pisces)
ಸೃಜನಶೀಲತೆ ಹೆಚ್ಚಿರುವ ದಿನ. ಮನಸ್ಸಿನಲ್ಲಿ ಸುಳಿಯುವ ಕಲ್ಪನೆಗಳನ್ನು ವ್ಯರ್ಥ ಮಾಡದೆ ಹಳೆಯ ಹವ್ಯಾಸ ಅಥವಾ ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಭಾವನೆಗಳನ್ನು ಸೃಜನಶೀಲ ಕೆಲಸಗಳತ್ತ ತಿರುಗಿಸುವುದರಿಂದ ದಿನದ ಕೊನೆಯಲ್ಲಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.


















