ಸುದ್ದಿಒನ್, ಚಿತ್ರದುರ್ಗ, ನವೆಂಬರ್. 07 :
ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 2026-27ನೇ ಸಾಲಿನ ‘ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಾಗಭೂಷನ್ ಎಸ್ ಉಪನಿರ್ದೇಶಕರು ಅಭಿವೃದ್ದಿ ಡಯಟ್ ಚಿತ್ರದುರ್ಗ. ಇವರು ಮಾತನಾಡುತ್ತಾ ಒಂದು ಮಗುವಿನ ಬೆಳವಣಿಗೆ ಕೇವಲ ಒಳ್ಳೇ ಮಾಕ್ರ್ಸ್ ಅಥವಾ ಒಳ್ಳೆ ಗ್ರೇಡ್ ತೆಗೆಯೊದಕ್ಕಷ್ಟೇ ಸೀಮಿತವಾಗಬಾರದು, ಒಂದು ಮಗು ಭೂಮಿಗೆ ಬಂದ ಮೇಲೆ ಹಂತ ಹಂತವಾಗಿ ಬೆಳವಣಿಗೆ ಆಗುತ್ತದೆ. ಬೆಳವಣಿಗೆ ಆದ ನಂತರ ಮಗುವಿನ ವಿಶೇಷ ಪ್ರತಿಭೆಯನ್ನು ಹೊರತೆಗೆಯಬೇಕಾದ ಕೆಲಸವನ್ನು ಶಿಕ್ಷಕರು ಮಾಡಬೇಕಾಗುತ್ತದೆ. ಅಂತಹ ಒಂದು ಅಧ್ಬುತವಾದ ಕೆಲಸವನ್ನು ವಿದ್ಯಾ ವಿಕಾಸ ಶಾಲೆಯು ಮಾಡುತ್ತಾ ಬಂದಿದೆ. ಈ ವಿಜ್ಞಾನ ವಸ್ತು ಪ್ರದರ್ಶನವನ್ನು ನೊಡಿದಾಗ ಇಲ್ಲಿನ ಒಂದೊಂದು ಮಗು ಒಂದೊಂದು ವಿಶೇಷವಾದ ‘ಕಲಾ ವಿಜ್ಞಾನ ಮತ್ತು ವಿಜ್ಞಾನ’ದ ಮಾದರಿಗಳನ್ನು ತಯಾರು ಮಾಡಿದ್ದಾರೆ. ಇದರಲ್ಲಿ ಕೆಲವು ತುಂಬ ವಿಶೇಷವಾದ ಮಾಹಿತಿಯನ್ನು ನೀಡುವಂತಹ ಮಾದರಿಗಳನ್ನು ತಯಾರು ಮಾಡಿದ್ದಾರೆ. 21ನೇ ಶತಮಾನದಲ್ಲಿ ಜಗತ್ತು ತುಂಬ ವೇಗವಾಗಿ ಸಾಗುತ್ತಿದೆ ಅದಕ್ಕೆ ತಕ್ಕಂತೆ ವೇಗವಾಗಿ ಮಕ್ಕಳನ್ನು ಅಭಿವೃದ್ದಿಗೊಳಿಸಬೇಕು ಅಷ್ಟೇ ಅಲ್ಲದೆ ಇಂತಹ ಮಾಡೆಲ್ಗಳನ್ನು ತಯಾರಿಸಿ ರಾಜ್ಯ, ರಾಷ್ಡ್ರ, ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಳ್ಳುವಂತೆ ರಚಿಸಬೇಕು ಬೇಸ್ಟ್ ಮಾಡೆಲ್ ಅನ್ನು ಶಿಕ್ಷಣ ಗುರುತಿಸಿ ಅಂತಹ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತ್ತದೆ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಡಾ.ರಾಘವೇಂದ್ರ.ಎಸ್ ಹಿರಿಯ ಉಪನ್ಯಾಸಕರು, ಭಾರತೀಯ ವಿಜ್ಞಾನ ಸಂಸ್ಥೆ ಕುದಾಪುರ ಕೇಂದ್ರ ಚಳ್ಳಕೆರೆ. ಇವರು ಮಾತನಾಡುತ್ತಾ ಭಾರತೀಯ ವಿಜ್ಞಾನ ಸಂಸ್ಥೆಯು (IISಅ) ಬೆಂಗಳೂರಿನಲ್ಲಿ ಸು 371 ಎಕರೆ ಜಾಗವನ್ನು ಮೈಸೂರಿನ ಮಹರಾಜ ನಲ್ವಡಿ ಕೃಷ್ಣರಾಜ ಒಡೆಯರು ಅವರು ದಾನವಾಗಿ ನೀಡಿದರು. ಇದು ಜಮ್ಸೆಟ್ಜಿ ಟಾಟಾ, ಹಾಗೂ ಸ್ವಾಮಿ ವಿವೇಕಾನಂದ ಅವರ ಕನಸಿನ ಕೂಸಾಗಿತ್ತು. ಇದರ ಸ್ಥಾಪನೆ 1909 ರಲ್ಲಿ ಮೇ 27ರಂದು ಅಸ್ತಿತ್ವಕ್ಕೆ ಬಂದಿತು. ಇದು ಭಾರದಲ್ಲಿ ಪ್ರಥಮ ವಿಜ್ಞಾನ ಸಂಸ್ಥೆಯಾಗಿ ಹೊರಹೊಮ್ಮಿತು. ನಂತರ ಚಿತ್ರದುರ್ಗದ ಕುದಾಪುರದಲ್ಲಿ 1500 ಎಕರೆ ಜಾಗದಲ್ಲಿ 2011 ಫೆಬ್ರವರಿ 26ರಂದು ಶ್ರೀ ಬಿ ಎಸ್ ಯಡಿಯೂರಪ್ಪ ಅವರಿಂದ ಸ್ಥಾಪನೆಯಾಯಿತು. ಈ ವಿಜ್ಞಾನ ಸಂಸ್ಥೆಯಲ್ಲಿ ಸು.24000 ಶಿಕ್ಷಕರಿಗೆ ವೈಜ್ಞಾನಿಕ ತರಬೇತಿಯನ್ನು ನೀಡಲಾಯಿತು. ಆದರೆ ಇಂದು ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿನ ವಿದ್ಯಾರ್ಥಿಗಳ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾಯಕ್ರಮ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಂಹ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ ವಿಜಯಕುಮಾರ್ ಅವರು ಮಾತನಾಡುತ್ತಾ ನಮ್ಮ ಶಾಲೆಯ ವಿದ್ಯಾರ್ಥಿಗಳು ಅಪೂರ್ವವಾದ ಮಾದರಿಗಳನ್ನು ತಯಾರಿಸಿದ್ದಾರೆ. ಈ ಮಾದಿರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವುಗಳನ್ನು ತಯಾರಿಸುವಲ್ಲಿ ಶಿಕ್ಷಕರ ಹಾಗೂ ಪೋಷಕರ ಶ್ರಮ ಅತ್ಯಂತ ಶ್ಲಾಘನೀಯ ಎಂದರು. ಮಾದರಿಗಳನ್ನು ಕುರಿತು ಈ ವರ್ಷ ವಿದ್ಯಾರ್ಥಿಗಳು ವಿಭಿನ್ನ ರೀತಿಯ ಮಾದರಿಗಳನ್ನು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗದೆ ಚಟುವಟಿಕೆಯಾದರಿತ ಇಂತಹ ಪ್ರದರ್ಶನದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಬೌದ್ಧಿಕ ಮಟ್ಟ ಹೆಚ್ಚಾಗುತ್ತದೆ ಎಂದರು.
ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕರಾದ ಎನ್ ಜಿ ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದು ಈ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳ ಹಲವಾರು ಕಲಾ ಹಾಗೂ ವಿಜ್ಞಾನ ಮಾದರಿಗಳನ್ನು ತಯಾರಿಸಿ ರಾಜ್ಯ, ರಾಷ್ಟ್ರ, ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅನುವು ಮಾಡಿಕೊಟ್ಟಿದೆ. ಅಷ್ಟೇ ಅಲ್ಲದೇ ಮನುಕುಲಕ್ಕೆ ಒಳ್ಳೆ ಕೊಡುಗೆಯನ್ನು ನೀಡಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಂದ ಸುಮಾರು 506 ವಿವಿಧ ಕಲಾ ಹಾಗೂ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಲಾಯಿತು. ವಿವಿಧ ಶಾಲೆಯಿಂದ ಸುಮಾರು 7 ಜನ ಶಿಕ್ಷಕರು ಆಗಮಿಸಿ ಮಾದರಿಗಳನ್ನು ಅವರು ಕೂಲಂಕುಶವಾಗಿ ವೀಕ್ಷಿಸಿ ತೀರ್ಪುಗಳನ್ನು ಅಂತಿಮಗೊಳಿಸಿದರು. ಈ ಒಂದು ಮಾದರಿ ಪ್ರದರ್ಶನವನ್ನು ವಿವಿಧ ಶಾಲೆಯಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಎಲ್ಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅನಘ್ರ್ಯ ಪ್ರಾರ್ಥಿಸಿದರು, ಕೃಷ್ಣವೇಣಿ.ಡಿ ಸ್ವಾಗತಿಸಿದರು, ವೈಶಾಲಿ ಬೆನ್ನಡಿ ನಿರೂಪಿಸಿದರು, ಭರತ್ ಎಸ್ ಎನ್ ವಂದಿಸಿದರು.
ವಂದನೆಗಳೊಂದಿಗೆ,














